ತಂದೆಯ ಸಾವಿನ ನೋವಿನಲ್ಲೂ ಚಾಂಪಿಯನ್ ಪಟ್ಟ ತಂದುಕೊಟ್ಟ ಟೀಂ ಇಂಡಿಯಾ ಹಾಕಿ ಆಟಗಾರ್ತಿ!

ಫೈನಲ್ ಪಂದ್ಯದಲ್ಲಿ ಉತ್ತಮ ಪಾಸಿಂಗ್​ಗಳಿಂದ ಗಮನ ಸೆಳೆದ ಲಾಲ್ರೆಮ್ಸಿಯಾಮಿ ಕೊನೆಗೂ ಜಪಾನ್ ವಿರುದ್ದ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಲ್ಲದೆ ತಮ್ಮ ತಂದೆಯ ಇಚ್ಛೆಯಂತೆ ಮಗಳು ತ್ರಿವರ್ಣ ಪಾತಾಕೆಯನ್ನು ಹಾರಿಸಿದರು.

zahir | news18
Updated:June 26, 2019, 3:31 PM IST
ತಂದೆಯ ಸಾವಿನ ನೋವಿನಲ್ಲೂ ಚಾಂಪಿಯನ್ ಪಟ್ಟ ತಂದುಕೊಟ್ಟ ಟೀಂ ಇಂಡಿಯಾ ಹಾಕಿ ಆಟಗಾರ್ತಿ!
Team India
  • News18
  • Last Updated: June 26, 2019, 3:31 PM IST
  • Share this:
ಸೋಮವಾರ ಹಿರೋಷಿಮಾದಲ್ಲಿ ನಡೆದ ಎಫ್‌ಐಎಚ್ ಸೀರಿಸ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಜಪಾನ್ ವಿರುದ್ಧ 3-1 ಗೋಲುಗಳ ಅಂತರದಿಂದ ಭರ್ಜರಿ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಆದರೆ ಈ ಪಂದ್ಯಕ್ಕೂ ಮುನ್ನು ಟೀಂ ಇಂಡಿಯಾದ ಸ್ಟಾರ್ ಆಟಗಾರ್ತಿ ಲಾಲ್ರೆಮ್ಸಿಯಾಮಿ ಒತ್ತಡಕ್ಕೆ ಸಿಲುಕಿದ್ದರು ಎಂಬ ಬಹಿರಂಗವಾಗಿದೆ. ಇದಕ್ಕೆ ಕಾರಣ ತಂದೆಯ ಅಕಾಲಿಕ ಮರಣ.

ಸೆಮಿಫೈನಲ್ ಪಂದ್ಯದ ವೇಳೆ ತಂದೆಯು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿಯೊಂದು ಲಾಲ್ರೆಮ್ಸಿಯಾಮಿಗೆ ಗರಬಡಿದಂತೆ ಅಪ್ಪಳಿಸಿತು. ಒಂದೆಡೆ ಭಾರತದ ಮಹತ್ವದ ಪಂದ್ಯ, ಮತ್ತೊಂದೆಡೆ ತನ್ನ ಪ್ರೀತಿಯ ಅಪ್ಪ. ಆದರೆ ತಂಡವನ್ನು ಅರ್ಧದಲ್ಲೇ ತೊರೆಯಲು ಯುವ ಆಟಗಾರ್ತಿ ಇಚ್ಛಿಸಲಿಲ್ಲ.

ಲಾಲ್ರೆಮ್ಸಿಯಾಮಿ


ತಾನು ಏನಾಗಬೇಕೆಂದು ತಂದೆ ಬಯಸಿದ್ದರೋ, ಅದನ್ನು ಗೆಲುವಿನ ಮೂಲಕ ಅವರಿಗೆ ಅರ್ಪಿಸಲು ಲಾಲ್ರೆಮ್ಸಿಯಾಮಿ ಸಜ್ಜಾದರು. ಅದರಂತೆ ನೇರವಾಗಿ ಕೋಚ್ ಬಳಿ ತೆರಳಿ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯದಲ್ಲೂ ಆಡುವುದಲ್ಲದೆ, ತಂದೆಗೆ ಹೆಮ್ಮೆ ತರುತ್ತೇನೆ ಎಂದು ಹೇಳಿದ್ದರು.

ಫೈನಲ್ ಪಂದ್ಯದಲ್ಲಿ ಉತ್ತಮ ಪಾಸಿಂಗ್​ಗಳಿಂದ ಗಮನ ಸೆಳೆದ ಲಾಲ್ರೆಮ್ಸಿಯಾಮಿ ಕೊನೆಗೂ ಜಪಾನ್ ವಿರುದ್ದ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಲ್ಲದೆ ತಮ್ಮ ತಂದೆಯ ಇಚ್ಛೆಯಂತೆ ಮಗಳು ತ್ರಿವರ್ಣ ಪಾತಾಕೆಯನ್ನು ಹಾರಿಸಿದರು.

ಜಪಾನ್ ವಿರುದ್ಧದ ಎಫ್‌ಐಹೆಚ್ ಮಹಿಳಾ ಸರಣಿ ಫೈನಲ್‌ನಲ್ಲಿ ಜಯಗಳಿಸಿದ ವಿಜಯಶಾಲಿ ಭಾರತೀಯ ತಂಡ ಮಂಗಳವಾರ ನವದೆಹಲಿಗೆ ಬಂದಿಳಿದಿದೆ. ನೋವನ್ನು ಮೆಟ್ಟಿನಿಂತು ಗೆಲುವನ್ನು ಸಾಧಿಸಿದ ಫಾರ್ವರ್ಡ್ ಆಟಗಾರ್ತಿ ಲಾಲ್ರೆಮ್ಸಿಯಾಮಿ ಅವರನ್ನು ಕೋಲಾಸಿಬ್ ಜಿಲ್ಲೆಯ ತನ್ನ ಗ್ರಾಮದವರು ಅದ್ಭುತ ಸ್ವಾಗತದೊಂದಿಗೆ ಬರಮಾಡಿಕೊಂಡಿದ್ದಾರೆ. ತಮ್ಮ ತಂದೆಯನ್ನು ಕಳೆದುಕೊಂಡ ನಂತರವೂ ಪಂದ್ಯಾವಳಿಯಲ್ಲಿ ಭಾಗವಹಿಸಿ ಗೆಲುವಿಗೆ ಶ್ರಮಿಸಿದ ಲಾಲ್ರೆಮ್ಸಿಯಾಮಿ ಅವರನ್ನು ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು ಟ್ವಿಟರ್‌ನಲ್ಲಿ ಶ್ಲಾಘಿಸಿದ್ದಾರೆ.
First published:June 26, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...