ವೈರಲ್ ವೀಡಿಯೊ: ಟೀಂ ಇಂಡಿಯಾದ ಐತಿಹಾಸಿಕ ಗೆಲುವಿನ ಭವಿಷ್ಯ ನುಡಿದಿದ್ದ ಅನಿಲ್ ಕುಂಬ್ಳೆ..!

ಟೀಂ ಇಂಡಿಯಾದ ಮಾಜಿ ನಾಯಕ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಭಾರತ ತಂಡದ ಕೋಚ್​ ಆಗಿ ಕಾರ್ಯ ನಿರ್ವಹಿಸಿದ್ದರು. ಈ ವೇಳೆ ತಂಡದ ಪ್ರತಿಯೊಬ್ಬ ಆಟಗಾರರ ಸಾಮರ್ಥ್ಯವನ್ನು ಅಳೆದು ತೂಗಿದ್ದರು ಎಂಬುದಕ್ಕೆ ಕುಂಬ್ಳೆ ನುಡಿದ ಈ ಭವಿಷ್ಯವೇ ಸಾಕ್ಷಿ.

zahir | news18
Updated:January 8, 2019, 4:00 PM IST
ವೈರಲ್ ವೀಡಿಯೊ: ಟೀಂ ಇಂಡಿಯಾದ ಐತಿಹಾಸಿಕ ಗೆಲುವಿನ ಭವಿಷ್ಯ ನುಡಿದಿದ್ದ ಅನಿಲ್ ಕುಂಬ್ಳೆ..!
ಸಾಂದರ್ಭಿಕ ಚಿತ್ರ
zahir | news18
Updated: January 8, 2019, 4:00 PM IST
ಆಸ್ಟ್ರೇಲಿಯಾ ನೆಲದಲ್ಲಿ ಆಸೀಸ್​ ತಂಡವನ್ನು ಟೆಸ್ಟ್​ನಲ್ಲಿ 2-1 ರಲ್ಲಿ ಬಗ್ಗು ಬಡಿಯುವ ಮೂಲಕ ಟೀಂ ಇಂಡಿಯಾ 71 ವರ್ಷಗಳ ಕನಸನ್ನು ನನಸು ಮಾಡಿಕೊಂಡಿದೆ. ಅಡಿಲೇಡ್ ಮತ್ತು ಮೆಲ್ಬೋರ್ನ್​ ಟೆಸ್ಟ್​ ಪಂದ್ಯಗಳನ್ನು ಗೆದ್ದಿದ್ದ ಕೊಹ್ಲಿ ಪಡೆ ಅಂತಿಮ ಟೆಸ್ಟ್​ ಅನ್ನು ಡ್ರಾ ಮಾಡಿಕೊಳ್ಳುವ ಮೂಲಕ ಐತಿಹಾಸಿಕ ಗೆಲುವು ದಾಖಲಿಸಿತು.

ಈ ಹಿಂದೆ 11 ಬಾರಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ ತಂಡವು 2 ಬಾರಿ ಸರಣಿ ಸಮಬಲ ಸಾಧಿಸಿದ್ದು ಸರ್ವಶ್ರೇಷ್ಠ ಸಾಧನೆಯಾಗಿತ್ತು. ಆದರೆ 12 ನೇ ಬಾರಿಯ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಯುವ ಪಡೆ ಚೊಚ್ಚಲ ಸರಣಿ ಗೆಲುವಿನೊಂದಿಗೆ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ.

ಈ ಗೆಲುವಿಗೂ ಟೀಂ ಇಂಡಿಯಾದ ಮಾಜಿ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆಗೂ ಒಂದು ಸಂಬಂಧವಿದೆ ಎಂದರೆ ನಂಬಲೇಬೇಕು. ಹೀಗಾಗಿಯೇ ಕುಂಬ್ಳೆ ಅವರನ್ನು ಸಾಮಾಜಿಕ ಜಾಲತಾಣದಲ್ಲಿ 'ಪೌಲ್ ಅಕ್ಟೋಪಸ್'​ ಎಂದು ಕರೆಯಲಾಗುತ್ತಿದೆ. ಸಾಮಾನ್ಯವಾಗಿ ಫುಟ್​ಬಾಲ್​ ಪಂದ್ಯಗಳ ಭವಿಷ್ಯ ತಿಳಿಸುವ ಅಕ್ಟೋಪಸ್​ ರೀತಿಯಲ್ಲಿ ಭಾರತದ ಐತಿಹಾಸಿಕ ಗೆಲುವಿನ ಸೂಚನೆಯನ್ನು ಕುಂಬ್ಳೆ ಈ ಹಿಂದೆಯೇ ನೀಡಿದ್ದರು.

ಟೀಂ ಇಂಡಿಯಾದ ಮಾಜಿ ತರಬೇತುದಾರರಾಗಿರುವ ಅನಿಲ್ ಕುಂಬ್ಳೆ 'ಬಾರ್ಡರ್​-ಗವಾಸ್ಕರ್' ಟೆಸ್ಟ್​ ಸರಣಿಯ ಭವಿಷ್ಯ ನುಡಿದಿದ್ದರು. ಅದು ಕೂಡ ಎಷ್ಟು ಪಂದ್ಯಗಳ ಅಂತರದಿಂದ ಟೀಂ ಇಂಡಿಯಾ ಗೆಲ್ಲಲಿದೆ ಎಂಬ ಅಂಕಿ ಅಂಶಗಳೊಂದಿಗೆ ಎಂಬುದೇ ಅಚ್ಚರಿ.

ನವೆಂಬರ್ 26, 2018 ರಂದು ನ್ಯೂಸ್​ 18ನ ಕ್ರಿಕೆಟ್​ ನೆಕ್ಸ್ಟ್​ಗಾಗಿ ಗೌರವ್ ಕಾಲ್ರಾ, ಅನಿಲ್ ಕುಂಬ್ಳೆ ಅವರ ಸಂದರ್ಶನ​ ನಡೆಸಿದ್ದರು. ಈ ವೇಳೆ ಆಸೀಸ್ ಸರಣಿಯಲ್ಲಿ ಭಾರತದ ತಂಡದ ಪ್ರದರ್ಶನ ಹೇಗಿರಲಿದೆ. ಸರಣಿ ಯಾರ ವಶವಾಗಲಿದೆ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲಾಗಿತ್ತು.

ಈ ಪ್ರಶ್ನೆಗೆ ಟೀಂ ಇಂಡಿಯಾ 2-1 ಅಂತರದಿಂದ ಐತಿಹಾಸಿಕ ಗೆಲುವು ದಾಖಲಿಸಲಿದೆ ಎಂದು ಲೆಜೆಂಡ್​ ಅನಿಲ್ ಕುಂಬ್ಳೆ ಭವಿಷ್ಯ ನುಡಿದಿದ್ದರು. ಅದರಂತೆ ಭಾರತ ಕಾಂಗರೂ ನಾಡಿನಲ್ಲಿ ಟೆಸ್ಟ್​ ಸರಣಿ ಗೆದ್ದ ಏಷ್ಯಾದ ಮೊದಲ ತಂಡವಾಗಿ ಹೊರ ಹೊಮ್ಮಿದೆ.


ಅನಿಲ್ ಕುಂಬ್ಳೆ ಎರಡು ತಿಂಗಳ ಹಿಂದೆ ನುಡಿದಿದ್ದ ನಿಖರವಾದ ಭವಿಷ್ಯ ಇಂದು ನಿಜವಾಗಿದೆ ಎಂದು ಗೌರವ್ ಕಾಲ್ರಾ ತಮ್ಮ ಟ್ವಿಟರ್​ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಹಾಗೆಯೇ ಈ ಸಂದರ್ಶನದ ವೀಡಿಯೊ ಈಗ ಸಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದ್ದು, ಮುಂದಿನ ಪಂದ್ಯಗಳ ಭವಿಷ್ಯವನ್ನು ಬುಕ್ಕಿಗಳಿಗೆ ತಿಳಿಸದಂತೆ ಕೆಲವರು ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ.


First published:January 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ