ಹೆಚ್ಚಿದ ನಿರೀಕ್ಷೆ: ಇಂಗ್ಲೆಂಡ್ ಟೆಸ್ಟ್​ ಸರಣಿಯಲ್ಲಿ ನಡೆಯುತ್ತಾ ಕುಲ್ದೀಪ್ ಸ್ಪಿನ್ ಮೋಡಿ..?

news18
Updated:July 30, 2018, 3:22 PM IST
ಹೆಚ್ಚಿದ ನಿರೀಕ್ಷೆ: ಇಂಗ್ಲೆಂಡ್ ಟೆಸ್ಟ್​ ಸರಣಿಯಲ್ಲಿ ನಡೆಯುತ್ತಾ ಕುಲ್ದೀಪ್ ಸ್ಪಿನ್ ಮೋಡಿ..?
news18
Updated: July 30, 2018, 3:22 PM IST
ನ್ಯೂಸ್ 18 ಕನ್ನಡ

ಭಾರತ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್​ ಸರಣಿಗೆ ಇನ್ನು ಕೇವಲ ಎರಡನೇ ದಿನ ಬಾಕಿ ಇದೆ. ಜಿದ್ದಾಜಿದ್ದಿಯ ಫೈಟ್ ಎಂದೆ ಬಿಂಬಿತವಾಗಿರುವ ಈ ಕದನ ನೋಡಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾದು ಕುಳಿತಿದ್ದಾರೆ. 2014ರ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಸಂಫುರ್ಣ ವಿಫಲವಾಗಿತ್ತು. ಆದರೀಗ ಭಾರತ ಎರಡೂ ವಿಭಾಗದಲ್ಲಿ ಬದಲಾಗಿದ್ದು ಬಲಿಷ್ಠ ಬ್ಯಾಟಿಂಗ್ ಹಾಗೂ ಬೌಲಿಂಗ್ ಪಡೆಯನ್ನು ಹೊಂದಿದೆ. ಅದರಲ್ಲೂ ಆಂಗ್ಲರಲ್ಲಿ ನಡುಕ ಹುಟ್ಟಿಸಲು ಕುಲ್ದೀಪ್ ಯಾದವ್ ಎಂಬ ಅಸ್ತ್ರವನ್ನು ಟೀಂ ಇಂಡಿಯಾ ಹೊಂದಿದೆ.

ಈ ಬಾರಿಯ ಐಪಿಎಲ್​​ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಕುಲ್ದೀಪ್ ಯಾದವ್ ಅವರನ್ನು ಬಿಸಿಸಿಐ ಇಂಗ್ಲೆಂಡ್ ವಿರುದ್ಧದ ಟಿ-20 ಹಾಗೂ ಏಕದಿನ ಸರಣಿಗೆ ಆಯ್ಕೆ ಮಾಡಿತ್ತು. ಅದರಂತೆ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡ ಕುಲ್ದೀಪ್ ಎರಡು ಟಿ-20 ಹಾಗೂ ಐದು ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದರು. ಇಂಗ್ಲೆಂಡ್ ವಿರುದ್ಧದ ಒಟ್ಟು ಮೂರು ಪಂದ್ಯಗಳ ಟಿ-20 ಸರಣಿಯ ಪೈಕಿ ಕುಲ್ದೀಪ್ ಯಾದವ್ ಎರಡು ಪಂದ್ಯವನ್ನಾಡಿದ್ದು, ಮೊದಲ ಪಂದ್ಯದಲ್ಲಿ 4 ಓವರ್​​ಗೆ 24 ರನ್ ನೀಡಿ 5 ವಿಕೆಟ್ ಕಿತ್ತಿದ್ದರು. ಬಳಿಕ ನಡೆದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಕುಲ್ದೀಪ್ ಒಟ್ಟು 9 ವಿಕೆಟ್ ಪಡೆದು ಮಿಂಚಿದರು. ಅದರಲ್ಲೂ ಮೊದಲ ಪಂದ್ಯದಲ್ಲಿ 10 ಓವರ್​​ಗೆ ಕೇವಲ 25 ರನ್​​ ನೀಡಿ 6 ವಿಕೆಟ್ ಕಬಳಿಸಿದ್ದು ಇವರ ಶ್ರೇಷ್ಠ ಪ್ರದರ್ಶನವಾಗಿದೆ. ಕುಲ್ದೀಪ್ ಯಾದವ್ ಅವರ ಈ ಪ್ರದರ್ಶನ ನೋಡಿಯೇ ಆಯ್ಕೆ ಸಮಿತಿ ಸದ್ಯ ಟೆಸ್ಟ್​ ಸರಣಿಗೂ ಆಯ್ಕೆ ಮಾಡಿದೆ.

ಇನ್ನು ಕುಲ್ದೀಪ್ ಅವರ ಟೆಸ್ಟ್​ ಕೆರಿಯರ್ ನೋವುದಾದರೆ ಆಡಿದ್ದು 2 ಅಂತರಾಷ್ಟ್ರೀಯಾ ಟೆಸ್ಟ್​ ಪಂದ್ಯವಾದರು ಪಡೆದಿರುವುದು ಮಾತ್ರ 9 ವಿಕೆಟ್. ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್​ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಕುಲ್ದೀಪ್ ತನ್ನ ಮೊದಲ ಪಂದ್ಯದಲ್ಲೇ 4 ವಿಕೆಟ್ ಪಡೆದು ಮಿಂಚಿದ್ದರು. ಬಳಿಕ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಪಡೆದರು. ಈ ಮೂಲಕ ಟೆಸ್ಟ್​​ ಕ್ರಿಕೆಟ್​​​ನಲ್ಲಿ ತಮ್ಮ ಖದರ್ ತೋರಿರುವ ಯಾದವ್ ಮೇಲೆ ಟೀಂ ಇಂಡಿಯಾ ಹೆಚ್ಚು ಅವಲಂಬಿತವಾಗಿದೆ. ಆದರೆ ಆಗಸ್ಟ್​ 1 ರಿಂದ ಆರಂಭವಾಗುವ ಟೆಸ್ಟ್ ಸರಣಿಯಲ್ಲಿ ಕುಲ್ದೀಪ್ ಅವರು ತನ್ನ ಆಯ್ಕೆಯನ್ನು ಸಮರ್ಥಿಸಿ ಕೊಳ್ಳುತ್ತಾರಾ? ಎಂಬುದು ನೋಡಬೇಕಿದೆ.
First published:July 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...