IND vs SA: ರದ್ದಾದ ಪಂದ್ಯದ ಟಿಕೆಟ್ ದರ ಮರುಪಾವತಿಸಲು ಮುಂದಾದ KSCA

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 5ನೇ ಟಿ20 ಪಂದ್ಯ ರದ್ದಾದ ಹಿನ್ನಲೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಎಲ್ಲರಿಗೂ ಟಿಕೆಟ್‌ನ ಮುಖಬೆಲೆಯ ಶೇಕಡಾ 50 ರಷ್ಟು ಮರುಪಾವತಿ ನೀಡಲು ನಿರ್ಧರಿಸಿದೆ.

IND vs SA

IND vs SA

  • Share this:
ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಿನ ಐದನೇ ಹಾಗೂ ಕೊನೆಯ ಟಿ20 (5th T20) ಪಂದ್ಯವು ಮಳೆಯಿಂದಾಗಿ ರದ್ದಾಗಿದ್ದು, ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಹೀಗಾಗಿ ಉಭಯ ತಂಡಗಳು ಈಗಾಗಲೇ ಸರಣಿಯಲ್ಲಿ 2-2ರ ಸಮಬಲ ಸಾದಿಸಿರುವುದರಿಂದ ಸರಣಿಯನ್ನು ಎರಡೂ ತಂಡಗಳಿಗೂ ಹಂಚಿಕೆ ಮಾಡಲಾಗಿತ್ತು. ಜೂನ್ 19 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium) ಪಂದ್ಯ ನಡೆಯಬೇಕಿತ್ತು. ಆದರೆ ಬೆಂಗಳೂರಿನಲ್ಲಿ ಸತತ ಮಳೆಯ ಕಾರಣದಿಂದಾಗಿ ಪಂದ್ಯವನ್ನು ಅಧಿಕೃತವಾಗಿ ರದ್ದು ಮಾಡಿ ಬಿಸಿಸಿಐ ಆದೇಶ ಹೊರಡಿಸಿತ್ತು. ಇದರಿಂದಾಗಿ 2 ವರ್ಷಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ನೋಡಬೇಕು ಎಂದು ಮೈದಾನಕ್ಕೆ ಬಂದಿದ್ದಂತಹ ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆ ಉಂಟಾಗಿತ್ತು. ಹೀಗಾಗಿ ಇದೀಗ ಅಂದಿನ ಪಂದ್ಯ ರದ್ದಾದ ಹಿನ್ನಲೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಎಲ್ಲರಿಗೂ ಟಿಕೆಟ್‌ನ ಮುಖಬೆಲೆಯ ಶೇಕಡಾ 50 ರಷ್ಟು ಮರುಪಾವತಿ ನೀಡಲು ನಿರ್ಧರಿಸಿದೆ.

ಉತ್ತಮ ನಿರ್ಧಾರ ಕೈಗೊಂಡ KSCA:

ಹೌದು, ಪಂದ್ಯ ಸಂಪೂರ್ಣವಾಗಿ ನಡೆಯದ ಕಾರಣ ಅಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ಪಂದ್ಯ ವೀಕ್ಷಿಸಲು ಬಂದಂತಹ ಎಲ್ಲಾ ಪ್ರೇಕ್ಷಕರಿಗೆ ಟಿಕೆಟ್​ನ ಮೂಲ ಬೆಲೆಯ ಅರ್ಧದಷ್ಟು ಅಂದರೆ ಶೇ.50ರಷ್ಟು ಹಣವನ್ನು ಮರುಪಾತಿಸುವುದಾಗಿ KSCA ಸ್ಪಷ್ಟಪಡಿಸಿದೆ. ಇದರಿಂದಾಗಿ ಪ್ರೇಕ್ಷಕರಿಗೆ ಟಿಕೆಟ್ ನ ಅರ್ಧದಷ್ಟು ಹಣ ಸಿಗಲಿದೆ. ಇದನ್ನು ಪಡೆಯಲು KSCA ಸಮಯವನ್ನೂ ತಿಳಿಸಿದೆ. ಅಲ್ಲದೇ ಕೆಲ ಅಂಶಗಳನ್ನು ಇಲ್ಲಿ ನೀಡಲಾಗಿದೆ. ಇವುಗಳು ಇದ್ದಲ್ಲಿ ಮಾತ್ರ ನಿಮಗೆ ಟಿಕೆಟ್​ನ ಹಣ ಮರುಪಾವತಿ ಆಗಲಿದೆ.

ಟಿಕೆಟ್ ದರಪಟ್ಟಿ


ಟಿಕೆಟ್ ಹಣ ವಾಪಸ್ಸು ಪಡೆಯುವುದು ಹೇಗೆ?:

ಆನ್‌ಲೈನ್‌ನಲ್ಲಿ ಮತ್ತು ಬಾಕ್ಸ್ ಆಫೀಸ್‌ನಲ್ಲಿ ಟಿಕೆಟ್‌ಗಳನ್ನು ಖರೀದಿಸಿದ ಪ್ರೇಕ್ಷಕರು ಜುಲೈ 1, 2 ಮತ್ತು 3 ರಂದು ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ ಮರುಪಾವತಿಯನ್ನು ಕ್ಲೈಮ್ ಮಾಡಬಹುದು. ತಮ್ಮ ಮೂಲ ಟಿಕೆಟ್ ಅನ್ನು ಉಳಿಸಿಕೊಂಡವರಿಗೆ ಮಾತ್ರ ಮರುಪಾವತಿ ಮಾಡಲಾಗುತ್ತದೆ ಮತ್ತು ಪರಿಶೀಲನೆಯಂತಹ ಷರತ್ತುಗಳಿಗೆ ಒಳಪಟ್ಟಿರುತ್ತದೆ. ಟಿಕೆಟ್‌ನ ಭದ್ರತಾ ವೈಶಿಷ್ಟ್ಯಗಳು, ಟಿಕೆಟ್‌ಗಳನ್ನು ಟ್ಯಾಂಪರ್ ಮಾಡಬಾರದು/ವಿರೂಪಗೊಳಿಸಬಾರದು/ಹರಿಯಬಾರದು/ತಿದ್ದಿ ಬರೆಯಬಾರದು ಮತ್ತು ಗೋಚರತೆಯನ್ನು ಕಡಿಮೆ ಮಾಡಬಾರದು. ಮರುಪಾವತಿಯನ್ನು ಕ್ಲೈಮ್ ಮಾಡಲು ಪ್ರತಿ ವ್ಯಕ್ತಿಗೆ ಗರಿಷ್ಠ ಐದು ಟಿಕೆಟ್‌ಗಳನ್ನು ಅನುಮತಿಸಲಾಗಿದೆ ಮತ್ತು ಯಾವುದೇ ಕಾಂಪ್ಲಿಮೆಂಟರಿ ಟಿಕೆಟ್‌ಗಳು ಅರ್ಹವಾಗಿರುವುದಿಲ್ಲ ಎಂದು KSCA ತಿಳಿಸಿದೆ.

ಇದನ್ನೂ ಓದಿ: Eoin Morgan: ಟಿ 20 ವಿಶ್ವಕಪ್​ ಮುನ್ನ ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಇಂಗ್ಲೆಂಡ್ ನಾಯಕ

ಮಳೆಯಿಂದ ಉಭಯ ತಂಡಗಳಿಗೆ ಸರಣಿ ಹಂಚಿಕೆ:

ಇನ್ನು, ದಕ್ಷಿಣ ಆಫ್ರಿಕಾ ಮತ್ತು ಟೀಂ ಇಂಡಿಯಾ 5 ಪಂದ್ಯಗಳ ಟಿ20 ಸರಣಿಯನ್ನು ಮಳೆಯ ಕಾರಣ ಉಭಯ ತಂಡಗಳಿಗೆ ಹಂಚಿಕೆ ಮಾಡಲಾಗಿತ್ತು.ಬೆಂಗಳೂರಲ್ಲಿ ಆರಂಭವಾಗಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ಸರಣಿಯ ಕೊನೆ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಈ ಕುರಿತುತು ಬಿಸಿಸಿಐ ಮಾಹಿತಿ ನೀಡಿತ್ತ ಮತ್ತು, ಸರಣಿಯನ್ನು ಈಗಾಗಲೇ ಉಭಯ ತಂಡಗಳು 2-2 ರಿಂದ ಸಮಬಲ ಸಾಧಿಸಿರುವುದರಿಂದ ಎರಡೂ ತಂಡಗಳಿಗೂ ಸರಣಿಯ ಫಲಿತಾಂಶವನ್ನು ಹಂಚಿಕೆ ಮಾಡಲಾಗಿತ್ತು. ಇದರಿಂದಾಗಿ 2011ರಿಂದ ದಕ್ಷಿಣ ಆಫ್ರಿಕಾ ಭಾರತದ ನೆಲದಲ್ಲಿ ಯಾವುದೇ ಟಿ20 ಸರಣಿಯನ್ನೂ ಸೋಲದ ದಾಖಲೆಯನ್ನು ಹಾಗೆಯೇ ಉಳಿಸಿಕೊಂಡಿದೆ.

ಇದನ್ನೂ ಓದಿ: IND vs IRE T20: ಸರಣಿ ಗೆಲುವಿನ ತವಕದಲ್ಲಿ ಹಾರ್ದಿಕ್ ಪಡೆ, ಟೀಂ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಪ್ರಕಟ
ಸರಣಿ ಶ್ರೇಷ್ಠ  ಪ್ರಶಸ್ತಿಗೆ ಭಾಜನರಾಗಿದ್ದ ಭುವಿ:


ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 5 ಪಂದ್ಯಗಳ ಟಿ20 ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಹಿನ್ನಲೆ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
Published by:shrikrishna bhat
First published: