India vs Sri Lanka: ಆಟಗಾರನಿಗೆ ಕೊರೊನಾ.. ಇಂದು ನಡೆಯಬೇಕಿದ್ದ ಭಾರತ-ಲಂಕಾ T20 ಪಂದ್ಯ ರದ್ದು

krunal-KlRahul

krunal-KlRahul

  • Share this:

ಟೀಂ ಇಂಡಿಯಾ ಹಾಗೂ ಶ್ರೀಲಂಕಾ ಮಧ್ಯೆ ಇಂದು ನಡೆಯಬೇಕಿದ್ದ 2ನೇ ಟಿ20 ಪಂದ್ಯವನ್ನು ರದ್ದು ಮಾಡಲಾಗಿದೆ. ಭಾರತೀಯ ಆಟಗಾರ ಕೃನಾಲ್​ ಪಾಂಡ್ಯರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಮ್ಯಾಚ್​ ರದ್ದಾಗಿದೆ. ಆಲ್​​ರೌಂಡರ್​ ಕೃನಾಲ್​ ಪಾಂಡ್ಯ ಕೋವಿಡ್​​ ರಿಪೋರ್ಟ್​​ ಪಾಸಿಟಿವ್​ ಬಂದಿರುವ ಹಿನ್ನೆಲೆ ಪಂದ್ಯಾವಳಿ ಕ್ಯಾನ್ಸಲ್​ ಆಗಿದೆ ಎಂದು ತಿಳಿಸಿದ್ದಾರೆ.


ಸಹ ಆಟಗಾರರನ್ನು ಕೋವಿಡ್​ ಪರೀಕ್ಷೆಗೆ ಒಳಪಡಿಸಲಾಗಿದೆ. ಎಲ್ಲರ ರಿಪೋರ್ಟ್​ ಬರುವವರೆಗೂ ಪಂದ್ಯ ನಡೆಸದಿರಲು ನಿರ್ಧರಿಸಲಾಗಿದೆ. ಭಾರತ ಹಾಗೂ ಲಂಕಾ ತಂಡದ ಆಟಗಾರರನ್ನು ಪ್ರತ್ಯೇಕವಾಗಿ ಕ್ವಾರಂಟೈನ್​ ಮಾಡಲಾಗಿದೆ.ಎಲ್ಲಾ ಆಟಗಾರರ ಕೊರೊನಾ ರಿಪೋರ್ಟ್​​ ನೆಗೆಟಿವ್​ ಬಂದರೆ ನಾಳೆ ಪಂದ್ಯ ನಡೆಯುವ ಸಾಧ್ಯತೆಗಳಿವೆ ಎಂದು ಬಿಸಿಸಿಐ ತಿಳಿಸಿದೆ.  ಇನ್ನು ಸೋಂಕಿತ ಆಟಗಾರ ಕೃನಾಲ್​​ ನಿಕಟ ಸಂಪರ್ಕದಲ್ಲಿದ್ದ 8 ಮಂದಿಯನ್ನು ಗುರುತಿಸಿ ಕ್ವಾರಂಟೈನ್​​ ಮಾಡಲಾಗಿದೆ ಎಂದು ಬಿಸಿಸಿಐ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

Published by:Kavya V
First published: