ಕೆಪಿಎಲ್ 2018 ಟ್ರೋಫಿ ಅನಾವರಣಗೊಳಿಸಿದ ಸ್ಟೈರೀಸ್

news18
Updated:August 14, 2018, 4:18 PM IST
ಕೆಪಿಎಲ್ 2018 ಟ್ರೋಫಿ ಅನಾವರಣಗೊಳಿಸಿದ ಸ್ಟೈರೀಸ್
news18
Updated: August 14, 2018, 4:18 PM IST
ನ್ಯೂಸ್ 18 ಕನ್ನಡ 

ಬೆಂಗಳೂರು (ಆ. 14): ಕರ್ನಾಟಕ ಪ್ರೀಮಿಯರ್ ಲೀಗ್ 7ನೇ ಆವೃತ್ತಿಗೆ ಇನ್ನೊಂದೆ ದಿನದಲ್ಲಿ ಚಾಲನೆ ಸಿಗಲಿದೆ. ಅದಕ್ಕೂ ಮೊದಲು  ಟ್ರೋಫಿ ಲಾಂಚ್ ಕಾರ್ಯಕ್ರಮ ಕೆಎಸ್ಸಿಎ ಆವರಣದಲ್ಲಿ ನಡೆಯಿತು.

ಕೆಎಸ್ಸಿಎ ಮಾಜಿ ಅಧ್ಯಕ್ಷ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹೆಸರಿನಲ್ಲಿ ನಡೆಯುವ ಈ ಟಿ-20 ಕ್ರಿಕೆಟ್ ಟೂರ್ನಿಯ ಟ್ರೋಫಿಯನ್ನು ಅವರ ಪತ್ನಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಉದ್ಘಾಟನೆ ಮಾಡಿದರು. ಇವರ ಜೊತೆಗೆ  ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಸ್ಕಾಟ್ ಸ್ಟೈರೀಸ್ ಹಾಗೂ ಕೆಎಸ್ಸಿಎ ಹಂಗಾಮಿ ಅಧ್ಯಕ್ಷ ಸಂಜಯ್ ದೇಸಾಯಿ, ಕಾರ್ಯದರ್ಶಿ ಸುಧಾಕರ್ ರಾವ್ ಉಪಸ್ಥಿತರಿದ್ದರು.

ಆಗಸ್ಟ್ 15 ರಂದು ಬೆಂಗಳೂರಿನಲ್ಲಿ ಆರಂಭಗೊಳ್ಳಲಿರುವ ಕೆಪಿಎಲ್ 7ನೇ ಆವೃತ್ತಿ ಹುಬ್ಬಳ್ಳಿಯಲ್ಲಿ ಮುಂದುವರೆದು, ಮೈಸೂರಿನಲ್ಲಿ ಮುಕ್ತಾಯಗೊಳ್ಳಲಿದೆ.  ಇನ್ನು ಈ ಬಾರಿ ಕೆಪಿಎಲ್​​ನಲ್ಲಿ ಕೆಎಸ್ಸಿಎ  ಭ್ರಷ್ಟಾಚಾರ ನಿಗ್ರಹ ದಳ ಹಾಗೂ ಆ್ಯಂಟಿ ಡೋಪಿಂಗ್ ಕಮಿಟಿಯನ್ನ ರಚಿಸಲಿದೆ.

 
First published:August 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...