ಕೆಪಿಎಲ್ 2018: ಇಂದು ಬೆಂಗಳೂರು-ಬಿಜಾಪುರ ನಡುವೆ ಫೈನಲ್​​ ಕಾದಾಟ

news18
Updated:September 6, 2018, 2:35 PM IST
ಕೆಪಿಎಲ್ 2018: ಇಂದು ಬೆಂಗಳೂರು-ಬಿಜಾಪುರ ನಡುವೆ ಫೈನಲ್​​ ಕಾದಾಟ
news18
Updated: September 6, 2018, 2:35 PM IST
ನ್ಯೂಸ್ 18 ಕನ್ನಡ

ಮೈಸೂರು (ಸೆ. 06): ಕೆಪಿಎಲ್ 2018ನೇ ಆವೃತ್ತಿ ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು ಇಂದು ಉತ್ತಪ್ಪ ನೇತೃತ್ವದ ಬೆಂಗಳೂರು ಬ್ಲಾಸ್ಟರ್ಸ್​​ ಹಾಗೂ ಭರತ್ ಚಿಪ್ಲಿ ನಾಯಕತ್ವದ ಬಿಜಾಪುರ ಬುಲ್ಸ್ ತಂಡಗಳು ಫೈನಲ್ ಪಂದ್ಯದಲ್ಲಿ ಕಾದಾಟ ನಡೆಸಲಿದೆ.

ಸೆಮಿಫೈನಲ್​​ನಲ್ಲಿ ಬೆಂಗಳೂರು ತಂಡ ಮೈಸೂರು ವಿರುದ್ಧ 20 ರನ್​​ಗಳ ಭರ್ಜರಿ ಜಯದೊಂದಿಗೆ ಫೈನಲ್​​ಗೆ ಲಗ್ಗೆ ಇಟ್ಟಿತ್ತು. ಬೆಂಗಳೂರು ತಂಡದ ನಾಯಕನಾಗಿರುವ ರಾಬಿನ್ ಉತ್ತಪ್ಪ ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲವಾದರು, ಅಂತಿಮ ಪಂದ್ಯದಲ್ಲಿ ತಂಡ ಗೆಲ್ಲಬೇಕಾದರೆ ಕ್ರೀಸ್ ಕಚ್ಚಿ ಆಡಬೇಕಿದೆ. ಇತ್ತ ಬಿಜಾಪುರ ಬುಲ್ಸ್ ತಂಡ ಸೆಮೀಸ್​ನಲ್ಲಿ ಹುಬ್ಳಿ ಟೈಗರ್ಸ್​ ವಿರುದ್ಧ 9 ವಿಕೆಟ್​​ಗಳ ಗೆಲುವಿನೊಂದಿಗೆ ಆತ್ಮವಿಶ್ವಾಸದಲ್ಲಿದ್ದು, ಫೈನಲ್ ಹಣಾಹಣಿಗೆ ಸಜ್ಜಾಗಿದೆ.

ಒಟ್ಟಾರೆ ಉಭಯ ತಂಗಳು ಬಲಿಷ್ಠವಾಗಿದ್ದು ಈ ಬಾರಿಯ ಕೆಪಿಎಲ್ ಟೂರ್ನಿಯ ಫೈನಲ್ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಪಂದ್ಯ ಸಂಜೆ 6:30ಕ್ಕೆ ಮೈಸೂರಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯಲಿದೆ.
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ