ಇಂದು ಕೆಪಿಎಲ್- 2018ಕ್ಕೆ ಚಾಲನೆ; ಮೊದಲ ಪಂದ್ಯದಲ್ಲಿ ಬೆಂಗಳೂರು-ಬೆಳಗಾವಿ ಮುಖಾಮುಖಿ

news18
Updated:August 15, 2018, 9:35 AM IST
ಇಂದು ಕೆಪಿಎಲ್- 2018ಕ್ಕೆ ಚಾಲನೆ; ಮೊದಲ ಪಂದ್ಯದಲ್ಲಿ ಬೆಂಗಳೂರು-ಬೆಳಗಾವಿ ಮುಖಾಮುಖಿ
news18
Updated: August 15, 2018, 9:35 AM IST
ನ್ಯೂಸ್ 18 ಕನ್ನಡ

ಬೆಂಗಳೂರು (ಆ. 15): ಇಂದು ಕರ್ನಾಟಕ ಪ್ರೀಮಿಯರ್​ ಲೀಗ್ 7ನೇ ಆವೃತ್ತಿಯ ಟಿ-20 ಟೂರ್ನಿಗೆ ಬೆಂಗಳೂರಿನಲ್ಲಿ ಚಾಲನೆ ಸಿಗಲಿದೆ. ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಬೆಳಗಾವಿ ಪ್ಯಾಂಥರ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್​ ಮುಖಾಮುಖಿಯಾಗಲಿವೆ.

ಒಟ್ಟು 7 ತಂಡಗಳು ಸೆಣಸಾಡುವ ಈ ಟಿ-20 ಟೂರ್ನಮೆಂಟ್​ ಬೆಂಗಳೂರಿನಲ್ಲಿ ಆರಂಭಗೊಂಡು ಹುಬ್ಬಳ್ಳಿಯಲ್ಲಿ ನಡೆದು, ಅರಮನೆ ನಗರಿ ಮೈಸೂರಿನಲ್ಲಿ ಮುಕ್ತಾಯ ಕಾಣಲಿದೆ. ಒಟ್ಟು 24 ಪಂದ್ಯಗಳು ನಡೆಯಲಿದ್ದು, ಸೆಪ್ಟೆಂಬರ್ 6 ರಂದು ಮೈಸೂರಿನಲ್ಲಿ ಫೈನಲ್ಸ್ ಮೂಲಕ ಮುಕ್ತಾಯ ಕಾಣಲಿದೆ.

ಇನ್ನು ಈ ಟೂರ್ನಮೆಂಟ್ ಆರಂಭಕ್ಕೂ ಮುನ್ನ ಕೆಎಸ್​​ಸಿಎ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನೆರವೇರಲಿದ್ದು, ಸ್ಯಾಂಡಲ್​ವುಡ್ ನಟಿ ರಾಗಿಣಿ ದ್ವಿವೇದಿ, ರಚಿತಾ ರಾಮ್​ ಹಾಗೂ ನಟ ನಿಖಿಲ್ ಕುಮಾರಸ್ವಾಮಿ, ಬಿಗ್​​​​ಬ್ಯಾಸ್​​ನ ಸ್ಪರ್ಧಿ ಚಂದನ್​ ಶೆಟ್ಟಿ ವೇದಿಕೆ ಮೇಲೆ ಪರ್ಫಾಮೆನ್ಸ್ ನೀಡಲಿದ್ದಾರೆ.
First published:August 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ