ಕೆಪಿಎಲ್ 2018: ಮೊದಲ ಸೆಮೀಸ್​ನಲ್ಲಿ ಇಂದು ಬೆಂಗಳೂರು-ಮೈಸೂರು ಸೆಣೆಸಾಟ

news18
Updated:September 4, 2018, 2:32 PM IST
ಕೆಪಿಎಲ್ 2018: ಮೊದಲ ಸೆಮೀಸ್​ನಲ್ಲಿ ಇಂದು ಬೆಂಗಳೂರು-ಮೈಸೂರು ಸೆಣೆಸಾಟ
news18
Updated: September 4, 2018, 2:32 PM IST
ನ್ಯೂಸ್ 18 ಕನ್ನಡ

ಮೈಸೂರು (ಸೆ. 04): 2018ರ ಕರ್ನಾಟಕ ಪ್ರೀಮಿಯರ್ ಲೀಗ್ ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು, ಈಗಾಗಲೇ ಲೀಗ್ ಪಂದ್ಯಗಳು ಮುಗಿದು ಇಂದು ಹಾಗೂ ನಾಳೆ ಸೆಮಿ ಫೈನಲ್ ಪಂದ್ಯಗಳು ನಡೆಯಲಿದೆ. ಹಾಲಿ ಚಾಂಪಿಯನ್ ಬೆಳಗಾವಿ ಪ್ಯಾಂಥರ್ಸ್, ಬಳ್ಳಾರಿ ಟಸ್ಕರ್ಸ್​​, ಶಿವಮೊಗ್ಗ ಲಯನ್ಸ್​ ತಂಡ ಟೂರ್ನಿಯಿಂದ ಹೊರ ಬಿದ್ದಿದೆ. ಇನ್ನು ಬೆಂಗಳೂರು ಬ್ಲಾಸ್ಟರ್ಸ್​​ ತಂಡ ಆಡಿರುವ 6 ಪಂದ್ಯಗಳಲ್ಲಿ 5 ಅನ್ನು ಗೆದ್ದು 11 ಅಂಕದೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, ಹುಬ್ಳಿ ಟೈಗರ್ಸ್​ ತಂಡ 9 ಅಂಕದೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಅಂತೆಯೆ ಬಿಜಾಪುರ ಬುಲ್ಸ್ ಮೂರನೇ ಹಾಗೂ ಮೈ ಸೂರು ವಾರಿಯರ್ಸ್​ ನಾಲ್ಕನೇ ಸ್ಥಾನ ಪಡೆದು ಸೆಮಿಫೈನಲ್​​ಗೆ ಲಗ್ಗೆ ಇಟ್ಟಿದೆ.

ಮೈಸೂರಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಕ್ರೀಡಾಂಗಣದಲ್ಲಿ ಇಂದು ಮೊದಲ ಸೆಮಿಫೈನಲ್​​​ನಲ್ಲಿ ಪಂದ್ಯ ನಡೆಯಲಿದ್ದು, ರಾಬಿನ್ ಉತ್ತಪ್ಪ ನೇತೃತ್ವದ ಬೆಂಗಳೂರು ಬ್ಲಾಸ್ಟರ್ಸ್​​ ಹಾಗೂ ಜಗದೀಶ್ ಸುಚಿತ್ ನಾಯಕತ್ವದ ಮೈಸೂರು ವಾರಿಯರ್ಸ್​ ತಂಡ ಸೆಣೆಸಾಟ ನಡೆಸಲಿದೆ. ಇನ್ನು ನಾಳೆ ನಡೆಯಲಿರುವ 2ನೇ ಸೆಮಿಫೈನಲ್​​ನಲ್ಲಿ ವಿನಯ್ ಕುಮಾರ್​​ರ ಹುಬ್ಳಿ ಟೈಗರ್ಸ್​ ಹಾಗೂ ಭರತ್ ಚಿಪ್ಲಿ ನೇತೃತ್ವದ ಬಿಜಾಪುರ ಬುಲ್ಸ್ ತಂಡಗಳು ಮುಖಾಮುಖಿ ಆಗಲಿದೆ. ಅಂತೆಯೆ ಸೆಪ್ಟೆಂಬರ್ 06ರಂದು ಫೈನಲ್ ಕಾದಾಟ ನಡೆಯಲಿದೆ.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ