IPL 2022: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನೂತನ ಜರ್ಸಿ ಅನಾವರಣ, ಹೊಸ ದಿರಿಸಿನಲ್ಲಿ ಮಿಂಚಿದ ಶ್ರೇಯಸ್ ಐಯ್ಯರ್

ಕೋಲ್ಕತ್ತಾ ಈ ಬಾರಿ ಶ್ರೇಯಸ್​ ಐಯ್ಯರ್ (Shreyas Iyer) ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ. ಜೊತೆಗೆ ಇಂದು (ಮಾರ್ಚ್ 18) ತನ್ನ ಹೊಸ ಜರ್ಸಿಯನ್ನು ಅನಾವರಣಗೊಳಿಸಿದೆ.

ಹೊಸ ಜರ್ಸಿಯಲ್ಲಿ ನಾಯಕ ಶ್ರೇಯಸ್​ ಐಯ್ಯರ್

ಹೊಸ ಜರ್ಸಿಯಲ್ಲಿ ನಾಯಕ ಶ್ರೇಯಸ್​ ಐಯ್ಯರ್

  • Share this:
ಐಪಿಎಲ್ 2022ರ (IPL 2022) 15ನೇ ಸೀಸನ್​ ಮಾರ್ಚ್ 26ರಿಂದ ಆರಂಭಗೊಳ್ಳಲಿದೆ. ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (KKR vs CSK) ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಪಂದ್ಯವು ಮುಂಬೈನ ವಾಂಖೆಡೆ ಮೈದಾದಲ್ಲಿ ನಡೆಯಲಿದ್ದು, ಕೋಲ್ಕತ್ತ ಈ ಬಾರಿ ಶ್ರೇಯಸ್​ ಐಯ್ಯರ್ (Shreyas Iyer) ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ. ಈಗಾಗಲೇ ಐಪಿಎಲ್ 15ನೇ ಆವೃತ್ತಿಗಾಗಿ ಅನೇಕ ತಂಡಗಳು ತಮ್ಮ ನೂತನ ಜರ್ಸಿಯನ್ನು (Jersey) ಬಿಡುಗಡೆ ಮಾಡಿದೆ. ಈ ಸಾಲಿಗೆ ಇದೀಗ ಕೋಲ್ಕತ್ತ ನೈಟ್ ರೈಡರ್ಸ್ ಸಹ ಸೇರ್ಪಡೆಗೊಂಡಿದ್ದು, ಇಂದು (ಮಾರ್ಚ್ 18) ತನ್ನ ಹೊಸ ಜರ್ಸಿಯನ್ನು ಅನಾವರಣಗೊಳಿಸಿದೆ. ಈ ಸಂಬಂಧ ಕೋಲ್ಕತ್ತ ತನ್ನ ಅಧಿಕೃತ ಟ್ವಟಿರ್​ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ’ನೀವು ಇದಕ್ಕಗಿ ಎಲ್ಲರೂ ಕಾಯುತ್ತಿದ್ದಿರಿ ಎಂಬುದು ನಮಗೆ ತಿಳಿದಿದೆ’ ಎಂದು ಬರೆದುಕೊಂಡಿದೆ.

ನೇರಳೆ ಬಣ್ಣದ ಜರ್ಸಿಯಲ್ಲಿ ಕೋಲ್ಕತ್ತ:

ಕೋಲ್ಕತ್ತ ನೈಟ್ ರೈಡರ್ಸ್ ಅನಾವರಣಗೊಳಿಸಿದ ಹೊಸ ಜರ್ಸಿಯು ನೇರಳೆ ಮತ್ತು ಚಿನ್ನದ ಬಣ್ಣಗಳಿಂದ ಕೂಡಿದೆ. ಕಳೆದ ಸೀಸನ್​ನ ಜರ್ಸಿಗಿಂತ ಕೊಂಚ ಬದಲಾವಣೆಗಳನ್ನು ಮಾಡಿಕೊಂಡಿದ್ದು, ಜೆರ್ಸಿಯ ಮೇಲೆ   ಫ್ರಾಂಚೈಸಿಯ ಲೋಗೋವನ್ನು ಎಡ ಭಾಗದಲ್ಲಿ ಇರಿಸಿದೆ. ಇನ್ನು, ಜೆರ್ಸಿ ಅನಾವರಣ ಕಾರ್ಯಕ್ರಮದಲ್ಲಿ ತಂಡದ ನಾಯಕ ಶ್ರೇಯಸ್ ಐಯ್ಯರ್ ಉಪಸ್ಥಿತರಿದ್ದು, ಈ ವಿಡಿಯೋವನ್ನು ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ಚೆನ್ನೈ ವಿರುದ್ಧ ಮೊದಲ ಪಂದ್ಯ:

ಐಪಿಎಲ್ 15ನೇ ಆವೃತ್ತಿಯ ಮೊದಲ ಪಂದ್ಯದಲ್ಲಿಯೇ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಸೆಣಸಾಡಲಿದೆ. ಉದ್ಘಾಟನಾ ಪಂದ್ಯದಿಂದಲೇ ತನ್ನ ಈ ಬಾರಿಯ ಐಪಿಎಲ್ ಜರ್ನಿಯನ್ನು ಕೋಲ್ಕತ್ತ ಪ್ರಾರಂಭಿಸಲಿದ್ದು, ಗೆಲುವಿನ ನಿರೀಕ್ಷೆಯಲ್ಲಿದೆ. ಅಲ್ಲದೇ ಹೊಸ ನಾಯಕನ ನೇತೃತ್ವದಲ್ಲಿ ಈ ಬಾರಿಯ ಐಪಿಎಲ್ ಟ್ರೋಪಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ.

ಇದನ್ನೂ ಓದಿ: IPL 2022: ಸನ್ ರೈಸರ್ಸ್ ಹೈದರಾಬಾದ್ ಹೊಸ ಜೆರ್ಸಿ ಅನಾವರಣ, ಇವರಿಗೆ ಆರೆಂಜ್ ಕಲರ್ ಲಕ್​ ಅಂತೆ!

ಕೆಕೆಆರ್ ತಂಡದ ನಾಯಕನಾಗಿ ಶ್ರೇಯಸ್ ಐಯ್ಯರ್:

ಇತ್ತೀಚೆಗೆ ನಡೆದ 2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಶ್ರೇಯಸ್ ಐಯ್ಯರ್ ಅವರನ್ನು ₹12.25 ಕೋಟಿಯ ಭಾರೀ ಮೊತ್ತಕ್ಕೆ ಕೋಲ್ಕತ್ತ ತಂಡ ಖರೀದಿಸಿತ್ತು. ಇದರ ಬೆನ್ನಲ್ಲೇ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕನನ್ನಾಗಿ ಅವರನ್ನು ಕೆಕೆಆರ್ ನೇಮಕ ಮಾಡಿದೆ.

ಕಳೆದ ಬಾರಿ ಡೆಲ್ಲಿ ಪರ ಆಡಿದ್ದ ಶ್ರೇಯಸ್:

ಕಳೆದ ಬಾರಿ ಅಯ್ಯರ್ ಡೆಲ್ಲಿ ಪರ ಕಣಕ್ಕಿಳಿದಿದ್ದರು. 2020ರಲ್ಲಿ ಡೆಲ್ಲಿ ತಂಡವನ್ನ ನಾಯಕನಾಗಿ ಅಯ್ಯರ್​, ಫೈನಲ್​​​ವರೆಗೂ ಕೊಂಡೊಯ್ದಿದ್ದರು. ಬಳಿಕ ಇಂಜುರಿಗೆ ಒಳಗಾದ ಅಯ್ಯರ್​, 14ನೇ ಆವೃತ್ತಿಯ ಮೊದಲಾರ್ಧ ಭಾಗಕ್ಕೆ ದೂರವಾದರು. ಇನ್ನು, ಕಳೆದ ಆವೃತ್ತಿಯಲ್ಲಿ  17 ಪಂದ್ಯಗಳಾಡಿದ್ದ ಶ್ರೇಯಸ್‌ ಅಯ್ಯರ್ ಅವರು 34.60ರ ಸರಾಸರಿಯಲ್ಲಿ 519 ರನ್‌ ಸಿಡಿಸಿದ್ದರು.

ಇದನ್ನೂ ಓದಿ: IPL 2022: ಸನ್ ರೈಸರ್ಸ್ ಹೈದರಾಬಾದ್ ಹೊಸ ಜೆರ್ಸಿ ಅನಾವರಣ, ಇವರಿಗೆ ಆರೆಂಜ್ ಕಲರ್ ಲಕ್​ ಅಂತೆ!

2022ರ ಐಪಿಎಲ್​ ಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಹೀಗಿದೆ:

ಆಂಡ್ರೆ ರಸೆಲ್, ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ವರುಣ್ ಚಕ್ರವರ್ತಿ, ನಿತೀಶ್ ರಾಣಾ, ಪ್ಯಾಟ್ ಕಮ್ಮಿನ್ಸ್, ಶ್ರೇಯಸ್ ಅಯ್ಯರ್ (ನಾಯಕ), ಶಿವಂ ಮಾವಿ, ಶೆಲ್ಡನ್ ಜಾಕ್ಸನ್, ಅಜಿಂಕ್ಯ ರಹಾನೆ, ರಿಂಕು ಸಿಂಗ್, ಅನುಕುಲ್ ರಾಯ್, ರಾಸಿಕ್ ದಾರ್, ಬಾಬಾ ಇಂದ್ರಜಿತ್, ಚಮಿಕಾ ಕರುಣರತ್ನೆ, ಅಭಿಜೀತ್ ತೋಮರ್, ಪ್ರಥಮ್ ಸಿಂಗ್, ಅಶೋಕ್ ಶರ್ಮಾ, ಸ್ಯಾಮ್ ಬಿಲ್ಲಿಂಗ್ಸ್, ಅಲೆಕ್ಸ್ ಹೇಲ್ಸ್, ಟಿಮ್ ಸೌಥಿ, ರಮೇಶ್ ಕುಮಾರ್, ಮೊಹಮ್ಮದ್ ನಬಿ, ಉಮೇಶ್ ಯಾದವ್, ಅಮನ್ ಖಾನ್ ಅವರನ್ನ ಹರಾಜು ಪ್ರಕ್ರಿಯೆಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ರೀತಿ ಮಾಡಿದೆ.
Published by:shrikrishna bhat
First published: