ಐಪಿಎಲ್​​ನಿಂದ ಈ ಇಬ್ಬರು ಆಟಗಾರರನ್ನು ಹೊರಗಿಡಿ: ಸಿಒಎಗೆ ವಿರಾಟ್ ಕೊಹ್ಲಿ ಮನವಿ

Vinay Bhat | news18
Updated:November 8, 2018, 6:13 PM IST
ಐಪಿಎಲ್​​ನಿಂದ ಈ ಇಬ್ಬರು ಆಟಗಾರರನ್ನು ಹೊರಗಿಡಿ: ಸಿಒಎಗೆ ವಿರಾಟ್ ಕೊಹ್ಲಿ ಮನವಿ
Vinay Bhat | news18
Updated: November 8, 2018, 6:13 PM IST
ನ್ಯೂಸ್ 18 ಕನ್ನಡ

ಮುಂದಿನ ವರ್ಷ ಇಂಗ್ಲೆಂಡ್​​ನಲ್ಲಿ ನಡೆಯಲಿರುವ ವಿಶ್ವಕಪ್​​ಗೆ ಎಲ್ಲ ತಂಡಗಳು ಈಗಾಗಲೇ ತಯಾರಿ ಶುರುಮಾಡಿವೆ. ಅದರಲ್ಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಸ್ಟರ್ ಪ್ಲಾನ್ ಮಾಡಿದ್ದು, ಭಾರತದ ಪ್ರಮುಖ ಬೌಲರ್​ಗಳಿಗೆ 2019ರ ಐಪಿಎಲ್​​ನಿಂದ ದೂರವಿಟ್ಟು ವಿಶ್ರಾಂತಿ ನೀಡಿ ಎಂದು ಸಿಒಎಗೆ ಮನವಿ ಮಾಡಿದ್ದಾರೆ.

ಹೈದರಾಬಾದ್​ನಲ್ಲಿ ಸಿಒಎ ಜೊತೆ ನಡೆದ ಸಭೆಯನಲ್ಲಿ ಕೊಹ್ಲಿ ಈ ವಿಚಾರ ಪ್ರಸ್ತಾಪಿಸಿದ್ದು, ಟೀಂ ಇಂಡಿಯಾದ ಸ್ಟಾರ್ ಬೌಲರ್​ಗಳಾದ ಭುವನೇಶ್ವರ್ ಕುಮಾರ್ ಹಾಗೂ ಜಸ್​ಪ್ರೀತ್ ಬುಮ್ರಾ ಅವರ ಪಾತ್ರ ಮುಂಬವರು ವಿಶ್ವಕಪ್​​ನಲ್ಲಿ ಪ್ರಮುಖವಾಗಿದೆ. ಹೀಗಾಗಿ ಇವರಿಬ್ಬರನ್ನು ಐಪಿಎಲ್​​ನಿಂದ ದೂರವಿಟ್ಟು, ವಿಶ್ರಾಂತಿ ನೀಡಬೇಕು ಎಂದಿದ್ದಾರೆ. ಇದರ ಜೊತೆಗೆ ಪ್ರಮುಖ ಟೀಂ ಇಂಡಿಯಾ ಆಟಗಾರರಿಗೂ ವಿಶ್ರಾಂತಿ ನೀಡುವಂತೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: '360 ಡಿಗ್ರಿಯಲ್ಲಿ ಬೌಲಿಂಗ್': ಕ್ರಿಕೆಟ್​ ಲೋಕಕ್ಕೆ ಅಚ್ಚರಿ ಮೂಡಿಸಿದ ಭಾರತೀಯ ಬೌಲರ್​

ಸದ್ಯ ತಿಳಿದಿರುವ ಮಾಹಿತಿಯ ಪ್ರಕಾರ 2019ರ ಐಪಿಎಲ್ ಟೂರ್ನಿ ಮಾರ್ಚ್​ 29 ರಿಂದ ಆರಂಭವಾಗಿ ಮೇ 19ಕ್ಕೆ ಕೊನೆಗೊಳ್ಳಲಿದೆ. ಇದಾಗಿ 15 ದಿನಗಳಲ್ಲಿ ವಿಶ್ವಕಪ್ ಆರಂಭವಾಗಿಲಿದೆ. ಹೀಗಾಗಿ ಸ್ಟಾರ್ ಬೌಲರ್​ಗಳಿಗೆ ವಿಶ್ರಾಂತಿ ಇಲ್ಲದಂತಾಗುತ್ತದೆ. ಎಲ್ಲದಾರು ಬೌಲರ್​ಗಳು ಇಡೀ ಐಪಿಎಲ್ ಆಡಿದರೆ ಟೀಂ ಇಂಡಿಯಾ ಬೌಲಿಂಗ್ ವಿಭಾಗದ ಮೇಲೆ ವ್ಯತಿರಕ್ತ ಪರಿಣಾಮ ಬೀರಲಿದೆ. ಹೀಗಾಗಿ ಅವರನ್ನು ಐಪಿಎಲ್​ನಲ್ಲಿ ಆಡಿಸಬಾರದು ಎಂದು ಕೊಹ್ಲಿ ಅವರು ಸಿಒಎ ಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
First published:November 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...