Virat Kohli: ಧೋನಿ ಒಬ್ರಿಗೆ ನನ್ನ ಮೇಲೆ ಕಾಳಜಿ ಇರೋದು ಅಂತ ಸುಳ್ಳು ಹೇಳಿದ್ರಾ? ವಿರಾಟ್​ಗೆ ಬಿಸಿಸಿಐ ಕ್ಲಾಸ್​!

Virat Kohli: ಕೊಹ್ಲಿಯ ಹೇಳಿಕೆಗೆ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿರುಗೇಟು ನೀಡಿದ್ದಾರೆ. ‘ವಿರಾಟ್‌ ಕೊಹ್ಲಿಗೆ ಎಲ್ಲರ ಬೆಂಬಲವಿದೆ. ಅವರಿಗೆ ತಂಡದ ಆಟಗಾರರ ಜೊತೆಗೆ ಬಿಸಿಸಿಐ ಸಹ ಸಪೋರ್ಟ್ ಮಾಡುತ್ತಿದೆ ಎಂದಿದ್ದಾರೆ.

ಕೊಹ್ಲಿ-ಬಿಸಿಸಿಐ

ಕೊಹ್ಲಿ-ಬಿಸಿಸಿಐ

  • Share this:
ಏಷ್ಯಾಕಪ್ 2022 ರಲ್ಲಿ (Asia Cup 2022) ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Viart Kohli) ಭರ್ಜರಿ ಫಾರ್ಮ್​ನಲ್ಲಿದ್ದಾರೆ. ನಡೆದ 3 ಪಂದ್ಯದಲ್ಲಿಯೂ ಕೊಹ್ಲಿ ಭರ್ಜರಿಯಾಗಿ ಬ್ಯಾಟಿಂಗ್​ ಮಾಡುವ ಮೂಲಕ ಮತ್ತೆ ತಮ್ಮ ಹಳೆಯ ಫಾರ್ಮ್​ಗೆ ಮರಳಿದ್ದಾರೆ. ಕಳೆದ ಕೊನೆಯ 2 ಪಂದ್ಯಗಳಲ್ಲಿಯೂ ಕೊಹ್ಲಿ ಭರ್ಜರಿ ಬ್ಯಾಟಿಂಗ್​ ಮಾಡುವ ಮೂಲಕ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಇದಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ ಅವರು, ತಮ್ಮ ಟೆಸ್ಟ್ ಕ್ರಿಕೆಟ್ ನ (Test Cricket) ನಾಯಕತ್ವವನ್ನು ತೊರೆದ ಬಗ್ಗೆ ಸಹ ಕೆಲವೊಂದು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಈ ವೇಳೆ ಈ ವರ್ಷದ ಆರಂಭದಲ್ಲಿ ಟೆಸ್ಟ್ ನಾಯಕತ್ವವನ್ನು ತ್ಯಜಿಸಿದ ನಂತರ ನನಗೆ ಕೇವಲ ಎಂಎಸ್ ಧೋನಿ ಅವರಷ್ಟೇ ಫೋನ್ ಕರೆ ಮಾಡಿದ್ದರು, ಅವರನ್ನು ಹೊರತುಪಡಿಸಿ ಬೇರೆ ಯಾರಿಂದಲೂ ನನಗೆ ಕರೆಗಳು ಬಂದಿಲ್ಲ ಎಂದು ಹೇಳದ್ದರು. ಆದರೆ ಇದೀಗ ಅದೇ ಹೇಳಿಕೆಗೆ ಬಿಸಿಸಿಐ (BCCI) ತಿರುಗೇಟು ನೀಡಿದೆ.

ಕೊಹ್ಲಿ ವಿರುದ್ಧ ತಿರುಗಿಬಿದ್ದ ಬಿಸಿಸಿಐ:

ಕೊಹ್ಲಿಯ ಹೇಳಿಕೆಗೆ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿರುಗೇಟು ನೀಡಿದ್ದಾರೆ. ‘ವಿರಾಟ್‌ ಕೊಹ್ಲಿಗೆ ಎಲ್ಲರ ಬೆಂಬಲವಿದೆ. ಅವರಿಗೆ ತಂಡದ ಆಟಗಾರರ ಜೊತೆಗೆ ಬಿಸಿಸಿಐ ಸಹ ಸಪೋರ್ಟ್ ಮಾಡುತ್ತಿದೆ. ಆದರೆ ಅವರು ಬೆಂಬಲ ಸಿಗುತ್ತಿಲ್ಲ ಎಂದು ಹೇಳುತ್ತಿರುವುದು ನಿಜವಲ್ಲ. ಅವರಿಗಾಗಿ ಸಾಕಷ್ಟು ಸಮಯ ವಿರಾಮ ನೀಡಲಾಗಿತ್ತು. ಜೊತೆಗೆ ವಿಶ್ರಾಂತಿ ಸಹ ಪಡೆಯುತ್ತಿದ್ದರು. ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಾಗ ಬಿಸಿಸಿಐನ ಎಲ್ಲರೂ ಸಾಮಾಜಿಕ ಮಾಧ್ಯಮದಲ್ಲಿ ಅವರಿಗೆ ಶುಭ ಕೋರಿದ್ದರು. ಆದರೆ ಇದೀಗ ಅವರು ಏನು ಮಾತನಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ‘ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಧೋನಿ ಮಾತ್ರ ಸಮದೇಶ ಕಳುಹಿಸಿದ್ದರು:

ಕೊಹ್ಲಿ ಅವರು ಜನವರಿ 2022ರಲ್ಲಿ ಅವರು ತಮ್ಮ ಟೆಸ್ಟ್ ಕ್ರಿಕೆಟ್ ನ ನಾಯಕತ್ವವನ್ನು ತೊರೆದರು. ಈ ಕುರಿತು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಕೊಹ್ಲಿ"ನಾನು ನನ್ನ ಟೆಸ್ಟ್ ನಾಯಕತ್ವವನ್ನು ತೊರೆದಾಗ, ಧೋನಿ ಮಾತ್ರ ನನಗೆ ಕರೆ ಮಾಡಿದರು, ಅನೇಕರು ನನ್ನ ಮೊಬೈಲ್ ಸಂಖ್ಯೆಯನ್ನು ಹೊಂದಿದ್ದರೂ ಸಹ ಬೇರೆ ಯಾರೂ ನನಗೆ ಒಂದು ಕರೆ ಸಹ ಮಾಡಲಿಲ್ಲ.

ಇದನ್ನೂ ಓದಿ: IND vs SL Asia Cup 2022: ಇಂದು ಭಾರತ-ಶ್ರೀಲಂಕಾ ಪಂದ್ಯ, ಇಲ್ಲಿದೆ ಉಭಯ ತಂಡಗಳ ಹೆಡ್​ ಟು ಹೆಡ್​

ನೀವು ಯಾರೊಂದಿಗಾದರೂ ಒಂದು ನಿರ್ದಿಷ್ಟ ಪ್ರಮಾಣದ ಗೌರವ ಹೊಂದಿದ್ದರೆ ಅವರು ನಿಮ್ಮ ಸಂಬಂಧದಲ್ಲಿ ಭದ್ರತೆ ಇದೆ ಎಂದು ತೋರಿಸುತ್ತದೆ. ನಾನು ಯಾರಿಗಾದರೂ ಏನನ್ನಾದರೂ ಹೇಳಲು ಬಯಸಿದರೆ, ನಾನು ಸಾರ್ವಜನಿಕವಾಗಿ ಹೋಗಿ ಅದರ ಬಗ್ಗೆ ಮಾತನಾಡುವ ಬದಲು, ವೈಯಕ್ತಿಕವಾಗಿ ಅವರನ್ನು ಸಂಪರ್ಕಿಸುತ್ತೇನೆ ಮತ್ತು ನಾನು ಏನು ಯೋಚಿಸುತ್ತೇನೆ ಮತ್ತು ಏನು ಮಾಡಬೇಕು ಎಂದು ಅವರಿಗೆ ಹೇಳುತ್ತೇನೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: Asia Cup 2022: ಪಾಕ್​ ಪಂದ್ಯದಲ್ಲಿ ಮಾಡಿದ ತಪ್ಪನ್ನೇ ರಿಪಿಟ್​ ಮಾಡ್ತಾರಾ ರೋಹಿತ್​? ಮೊನ್ನೆ ಸೋತಿದ್ದು ಇದೇ ಕಾರಣಕ್ಕಂತೆ!

ಎಲ್ಲಾ ನಾಯಕತ್ವವನ್ನು ಒಮ್ಮೆ ತೊರೆದಿದ್ದ ಕೊಹ್ಲಿ:

2021ರ ಟ್ವೆಂಟಿ20 ವಿಶ್ವಕಪ್ ನ ಭಾರತ ಮೊದಲ ಪಂದ್ಯದಲ್ಲೇ ಎದುರಾಳಿ ಪಾಕಿಸ್ತಾನ ವಿರುದ್ಧ ಸೋತ ನಂತರ ನಾಕ್ಔಟ್ ಆದಾಗ ಕೊಹ್ಲಿ ಅವರು ಒಂದೊಂದಾಗಿ ಎಲ್ಲಾ ಮಾದರಿಯ ಕ್ರಿಕೆಟ್ ನ ನಾಯಕತ್ವವನ್ನು ತ್ಯಜಿಸಿದರು. ಹೀಗೆ ಟ್ವೆಂಟಿ20 ವಿಶ್ವಕಪ್ ನಿಂದ ಹೊರ ಬಿದ್ದ ನಂತರ ವಿರಾಟ್ ಕೊಹ್ಲಿ ಅವರು ತಮ್ಮ ಟ್ವೆಂಟಿ20 ಕ್ರಿಕೆಟ್ ನ ನಾಯಕತ್ವವನ್ನು ತೊರೆದರು ಮತ್ತು ನಂತರ ಅವರ ಏಕದಿನ ನಾಯಕತ್ವವನ್ನು ಬಿಸಿಸಿಐ ಕಸಿದುಕೊಂಡಿತು ಎಂದು ಹೇಳಲಾಗುತ್ತದೆ.
Published by:shrikrishna bhat
First published: