ಟೀಂ ಇಂಡಿಯಾದ ಮಾನ ಉಳಿಸಿದ ಕ್ಯಾಪ್ಟನ್: 2ನೇ ಇನ್ನಿಂಗ್ಸ್​ನಲ್ಲಿ ಆಂಗ್ಲರಿಗೆ ಆರಂಭಿಕ ಆಘಾತ

news18
Updated:August 2, 2018, 11:14 PM IST
ಟೀಂ ಇಂಡಿಯಾದ ಮಾನ ಉಳಿಸಿದ ಕ್ಯಾಪ್ಟನ್: 2ನೇ ಇನ್ನಿಂಗ್ಸ್​ನಲ್ಲಿ ಆಂಗ್ಲರಿಗೆ ಆರಂಭಿಕ ಆಘಾತ
news18
Updated: August 2, 2018, 11:14 PM IST
ನ್ಯೂಸ್ 18 ಕನ್ನಡ

ಬರ್ಮಿಂಗ್​​ಹ್ಯಾಮ್​​ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ಮೊದಲನೇ ಇನ್ನಿಂಗ್ಸ್​​ನಲ್ಲಿ 274 ರನ್​ಗೆ ಆಲೌಟ್ ಆಗಿ 13 ರನ್​ಗಳ ಹಿನ್ನಡೆ ಅನುಭವಿಸಿತು. ಇತ್ತ ತನ್ನ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್ 9 ರನ್​ಗೆ 1 ವಿಕೆಟ್ ಕಳೆದುಕೊಂಡು 22 ರನ್​ಗಳ ಮುನ್ನಡೆಯೊಂದಿಗೆ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಎರಡನೇ ಇನ್ನಿಂಗ್ಸ್​ನಲ್ಲಿ ಆರಂಭಿಕರಾಗಿ ಬಂದ ಕುಕ್ ಹಾಗೂ ಜೆನ್ನಿಂಗ್ಸ್​ ಪರ ಕುಕ್ ಅವರು ಅಶ್ವಿನ್ ಎಸೆತದಲ್ಲಿ ಶೂನ್ಯಕ್ಕೆ ಬೌಲ್ಡ್ ಆದ ವೇಳೆ 2ನೇ ದಿನದ ಆಟವನ್ನು ಅಂತ್ಯಗೊಳಿಸಲಾಯಿತು.

ಎರಡನೇ ದಿನದ ಆರಂಭದಲ್ಲೇ ಆಂಗ್ಲರನ್ನು 287 ರನ್​ಗೆ ಆಲೌಟ್ ಮಾಡಿ ಬ್ಯಾಟಿಂಗ್ ಪ್ರಾರಂಭಿಸಿದ ಭಾರಕ್ಕೆ ಉತ್ತಮ ಆರಂಭ ದೊರಕಿತಾದರು ಬಳಿಕ ನಾಟಕೀಯ ಕುಸಿತ ಕಂಡಿತು. ಮೊದಲ ವಿಕೆಟ್​ಗೆ ಧವನ್ ಹಾಗೂ ಮುರಳಿ ವಿಜಯ್ 50 ರನ್​ಗಳ ಕಾಣಿಕೆ ನೀಡಿದರು. 20 ರನ್​ ಗಳಿಸಿ ವಿಜಯ್ ಔಟ್ ಆದರೆ ಬಂದ ಬೆನ್ನಲೆ ಒಂದು ಬೌಂಡರಿ ಬಾರಿಸಿ ಕೆ. ಎಲ್. ರಾಹುಲ್ ಪೆವಿಲಿಯನ್ ಸೇರಿಕೊಂಡರು. ಇದರ ಬೆನ್ನಲ್ಲೆ 26 ರನ್ ಬಾರಿಸಿದ್ದ ಧವನ್ ಅವರು ಕುರ್ರಾನ್​​ಗೆ ವಿಕೆಟ್ ಒಪ್ಪಿಸಿದರು. ಉಪ ನಾಯಕ ಅಜಿಂಕ್ಯ ರಹಾನೆ 15 ರನ್​ಗೆ ಹಾಗೂ ದಿನೇಶ್ ಕಾರ್ತಿಕ್ ಶೂನ್ಯಕ್ಕೆ ನಿರ್ಗಮಿಸಿದರು. ಬಳಿಕ ಒಂದಾದ ನಾಯಕ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಇನ್ನಿಂಗ್ಸ್​ ಕಟ್ಟಲು ಮುಂದಾದರು. ಆದರೆ ಈ ಜೋಡಿಗೆ 48 ರನ್​ಗಳ ಜೊತೆಯಾಟ ನೀಡಲಷ್ಟೆ ಶಕ್ತವಾಯಿತು. ಹಾರ್ದಿಕ್ ಪಾಂಡ್ಯ 22 ರನ್​ ಗಳಿಸಿ ಕುರ್ರನ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಬಳಿಕ ಬಂದ ಅಶ್ವಿನ್ ಕೂಡ ಕೇವಲ 10 ರನ್​ಗೆ ತಮ್ಮ ಇನ್ನಿಂಗ್ಸ್​ ಅನ್ನು ಮುಗಿಸಿದರು.

ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ ಏಕಾಂಗಿ ಹೋರಾಟ ನಡೆಸಿ ಟೀಮ್ ಇಂಡಿಯಾ ಪರ ನಾಯಕನ ಆಟವಾಡಿದ ಕೊಹ್ಲಿ ಇಂಗ್ಲೆಂಡ್​ ನೆಲದಲ್ಲಿ ಮೊಟ್ಟ ಮೊದಲನೇ ಹಾಗೂ ಟೆಸ್ಟ್​ ಕ್ರಿಕೆಟ್​ನಲ್ಲಿ 22 ನೇ ಶತಕ ಸಿಡಿಸುವ ಮೂಲಕ ವಿರಾಟ್​​ ಆರ್ಭಟ ಮೆರೆದರು. ಆದರೆ ಕೊಹ್ಲಿ ಹೊರತು ಪಡಿಸಿದರೆ ಉಳಿದ ಬ್ಯಾಟ್ಸ್​ಮನ್​​ಗಳು ನಿರೀಕ್ಷಿತ ಪ್ರದರ್ಶನ ನೀಡಿವಲ್ಲಿ ಸಂಪೂರ್ಣ ಎಡವಿದರು. ಮೊಹಮ್ಮದ್ ಶಮಿ(2) ಹಾಗೂ ಇಶಾಂತ್ ಶರ್ಮಾ(5) ಸಹ ಬಂದ ಬೆನ್ನಲ್ಲೆ ಔಟ್ ಆದರು. ಆದರೆ ಕೊನೆಯ ವಿಕೆಟ್​ಗೆ ಕೊಹ್ಲಿ ಜೊತೆಯಾದ ಉಮೇಶ್ ಯಾದವ್ ನಾಯಕನಿಗೆ ಉತ್ತಮ ಸಾಥ್ ನೀಡಿದರು. ಯಾದವ್ ಗಳಿಸಿದ್ದು 1 ರನ್ ಆದರು ಕೊಹ್ಲಿಯ ಆರ್ಭಟದ ನೆರವಾಗಿ ಈ ಜೋಡಿ 57 ರನ್​ಗಳ ಕಾಣಿಕೆ ನೀಡಿತು. ಕೊನೆಯಲ್ಲಿ 149 ರನ್​ ಗಳಿಸಿ ಕೊಹ್ಲಿ ಔಟ್ ಆಗುವ ಮೂಲಕ ಭಾರತ 274 ರನ್​ಗೆ ಆಲೌಟ್ ಆಯಿತು.

ಇಂಗ್ಲೆಂಡ್ ಪರ ಮಾರಕ ಬೌಲಿಂಗ್ ಮಾಡಿದ ಸ್ಯಾಮ್ ಕುರ್ರನ್ 4 ವಿಕೆಟ್ ಪಡೆದು ಮಿಂಚಿದರೆ, ಆಂಡರ್ಸನ್, ರಶೀದ್ ಖಾನ್ ಹಾಗೂ ಬೆನ್ ಸ್ಟೋಕ್ಸ್ ತಲಾ 2 ವಿಕೆಟ್ ಕಿತ್ತರು.
First published:August 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...