ಕೊಹ್ಲಿ, ಪೃಥ್ವಿ ಶಾ ಜೊತೆ ಮೂವರು ಅರ್ಧಶತಕ: ದಿನದಾಟದ ಅಂತ್ಯಕ್ಕೆ ಆಸೀಸ್: 24/0

ಕ್ರಿಕೆಟ್ ಆಸ್ಟ್ರೇಲಿಯಾ ದಿನದಾಟದ ಅಂತ್ಯಕ್ಕೆ 24/0. ಡಾರ್ಸಿ ಶಾರ್ಟ್​​ 10*, ಮ್ಯಾಕ್ಸ್​ ಬ್ರ್ಯಾಂಟ್​​​ 14*. ಕ್ರಿಕೆಟ್ ಆಸ್ಟ್ರೇಲಿಯಾ ಇನ್ನು 334 ರನ್​ಗಳ ಹಿನ್ನಡೆಯಲ್ಲಿದೆ.

Vinay Bhat | news18
Updated:November 29, 2018, 1:01 PM IST
ಕೊಹ್ಲಿ, ಪೃಥ್ವಿ ಶಾ ಜೊತೆ ಮೂವರು ಅರ್ಧಶತಕ: ದಿನದಾಟದ ಅಂತ್ಯಕ್ಕೆ ಆಸೀಸ್: 24/0
ವಿರಾಟ್ ಕೊಹ್ಲಿ (ಟೀಂ ಇಂಡಿಯಾ ನಾಯಕ)
  • Advertorial
  • Last Updated: November 29, 2018, 1:01 PM IST
  • Share this:
ಸಿಡ್ನಿ: ಮಳೆ ಬಂದ ಕಾರಣ ನಿನ್ನೆ ಆರಂಭ ಆಗಬೇಕಿದ್ದ ಭಾರತ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ಎಲೆವೆನ್ ನಡುವಣ 4 ದಿನಗಳ ಅಭ್ಯಾಸ ಪಂದ್ಯ ಇಂದಿನಿಂದ ಆರಂಭವಾಗಿದ್ದು, ಮೊದಲ ದಿನ ಕೊಹ್ಲಿ ಪಡೆ ಸಾಧಾರಣ ಪ್ರದರ್ಶನ ತೋರಿದೆ. ಭಾರತ 10 ವಿಕೆಟ್​​ಗೆ 358 ರನ್ ಕಲೆಹಾಕಿದರೆ, ದಿನದಾಟದ ಅಂತ್ಯಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಎಲೆವೆನ್ ತಂಡ ವಿಕೆಟ್ ನಷ್ಟವಿಲ್ಲದೆ 24 ರನ್ ಬಾರಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭದಲ್ಲೇ ಕೆ. ಎಲ್ ರಾಹುಲ್(3) ಔಟ್ ಆಗುವ ಮೂಲಕ ಮತ್ತದೆ ಕಳಪೆ ಪ್ರದರ್ಶನ ತೋರಿದ್ದು ಆಘಾತವಾಯಿತು. ಆದರೆ, ನಂತರ ಬಂದ ಆಟಗಾರರು ಅದ್ಭುತ ಪ್ರದರ್ಶನ ತೋರಿದರು. ಐವರು ಪ್ರಮುಖ ಬ್ಯಾಟ್ಸ್​ಮನ್​​ಗಳು ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು. ವಿದೇಶಿ ನೆಲದಲ್ಲೂ ಮಿಂಚಿದ ಮುಂಬೈ ಪೋರ ಪೃಥ್ವಿ ಶಾ 69 ಎಸೆತಗಳಲ್ಲಿ 66 ರನ್ ಬಾರಿಸಿದರೆ, ಚೇತೇಶ್ವರ ಪುಜಾರ 54 ರನ್​ ಗಳಿಸಿ ಔಟ್ ಆದರು.

 ಇನ್ನು ನಾಯಕ ವಿರಾಟ್ ಕೊಹ್ಲಿ 64, ಅಜಿಂಕ್ಯ ರಹಾನೆ 56 ಹಾಗೂ ಹನುಮ ವಿಹಾರಿ 53 ರನ್ ಬಾರಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರೋಹಿತ್ ಶರ್ಮಾ 40 ರನ್ ಗಳಿಸಿದರು. ರಿಷಭ್ ಪಂತ್ 11 ರನ್ ಗಳಿಸಿ ಅಜೇಯರಾಗಿ ಉಳಿದರೆ, ಆರ್. ಅಶ್ವಿನ್, ಮೊಹಮ್ಮದ್ ಶಮಿ ಹಾಗೂ ಉಮೇಶ್ ಯಾದವ್ ಸೊನ್ನೆ ಸುತ್ತಿದರು. ಪರಿಣಾಮ ಭಾರತ 92 ಓವರ್​ನಲ್ಲಿ ತನ್ನ 10 ವಿಕೆಟ್ ಕಳೆದುಕೊಂಡು 358 ರನ್ ಕಲೆಹಾಕಿತು. ಕ್ರಿಕೆಟ್ ಆಸ್ಟ್ರೇಲಿಯಾ ಎಲೆವನ್ ಪರ ಆರೋನ್ ಹಾರ್ಡಿ 4 ವಿಕೆಟ್ ಕಿತ್ತು ಮಿಂಚಿದರು.

 ಇದಕ್ಕುತ್ತರವಾಗಿ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 24 ರನ್ ಗಳಿಸಿದೆ. ಡಾರ್ಸಿ ಶಾರ್ಟ್​​ 10 ಹಾಗೂ ಮ್ಯಾಕ್ಸ್​ ಬ್ರ್ಯಾಂಟ್​​​ 14 ರನ್​​ ಬಾರಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಇನ್ನು 334 ರನ್​ಗಳ ಹಿನ್ನಡೆಯಲ್ಲಿದೆ.

First published:November 29, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ