ಇಂಗ್ಲೆಂಡ್ ಸರಣಿ ಸೋತಲ್ಲಿ ಕೊಹ್ಲಿ-ರವಿ ಶಾಸ್ತ್ರಿ ಹುದ್ದೆಗೆ ಕಂಟಕ..?

news18
Updated:August 13, 2018, 10:27 PM IST
ಇಂಗ್ಲೆಂಡ್ ಸರಣಿ ಸೋತಲ್ಲಿ ಕೊಹ್ಲಿ-ರವಿ ಶಾಸ್ತ್ರಿ ಹುದ್ದೆಗೆ ಕಂಟಕ..?
news18
Updated: August 13, 2018, 10:27 PM IST
ನ್ಯೂಸ್ 18 ಕನ್ನಡ

ಆಂಗ್ಲರ ನಾಡಲ್ಲಿ ಸತತ ಎರಡು ಟೆಸ್ಟ್ ಪಂದ್ಯಗಳನ್ನು ಸೋತು ಮುಖಬಂಗ ಅನುಭವಿಸಿರುವ ಭಾರತ ತಂಡ ಸದ್ಯ ಸಂಕಷ್ಟಕ್ಕೆ ಸಿಲುಕಿದೆ. ಸೋಲಿನ ಬಗ್ಗೆ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರನ್ನು ಬಿಸಿಸಿಐ ಪ್ರಶ್ನಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಮೂರನೇ ಟೆಸ್ಟ್ ಮುಗಿದ ಬಳಿಕ ಉಳಿದ 2 ಟೆಸ್ಟ್ ಸರಣಿಗೆ ಆಟಗಾರರ ಆಯ್ಕೆ ನಡೆಯಲಿದ್ದು, ಇದಕ್ಕೂ ಮುನ್ನ ಕೊಹ್ಲಿ ಹಾಗೂ ರವಿ ಶಾಸ್ತ್ರಿ  ಅವರಿಗೆ ಸತತ ಎರಡು ಸೋಲಿನ ಬಗ್ಗೆ ಪ್ರಶ್ನಿಸುವ ಸಾಧ್ಯತೆ ಇದೆ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಹಿಂದೆ ದ. ಆಫ್ರಿಕಾ ಸರಣಿಯನ್ನು ಸೋತಾಗ ಅಭ್ಯಾಸಕ್ಕೆ ಸಮಯ ಸಿಕ್ಕಿಲ್ಲ ಎಂಬ ಕಾರಣವನ್ನು ಆಟಗಾರರು ಕೊಟ್ಟಿದ್ದರು. ಆದರೆ ಈ ಭಾರಿ ಆ ರೀತಿ ಹೇಳುವಂತಿಲ್ಲ. ಇಂಗ್ಲೆಂಡ್ ಸರಣಿಗೂ ಮುನ್ನ ನಾವು ವೈಟ್ ಬಾಲ್ ಪಂದ್ಯಗಳನ್ನು ಆಯೋಜಿಸಿದ್ದೆವು. ಇದರಲ್ಲಿ ಮುರಳಿ ವಿಜಯ್, ಅಜಿಂಕ್ಯ ರಹಾನೆ ಭಾರತ ಎ ತಂಡವನ್ನು ಮುನ್ನಡೆಸಿದ್ದರು. ಇಲ್ಲಿ ಅವರಿಗೆ ಸಾಕಷ್ಟು ಸಮಯವನ್ನು ನೀಡಲಾಗಿತ್ತು. ಆದರೂ ಕಳೆದ ಎರಡು ಟೆಸ್ಟ್ ಪಂದ್ಯದಲ್ಲಿ ಕಳಪೆ ಆಟವಾಡಿದ್ದರಿಂದ ಮಂಡಳಿಗೆ ಈ ಬಗ್ಗೆ ಪ್ರಶಸ್ನಿಸುವ ಹಕ್ಕಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನು ಎಲ್ಲಾದರು ಭಾರತ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಸೋಲು ಕಂಡರೆ ರವಿ ಶಾಸ್ತ್ರಿ ಹಾಗೂ ವಿರಾಟ್ ಕೊಹ್ಲಿ ತಮ್ಮ ಹುದ್ದೆಯಲ್ಲಿ ಮುಂದುವರೆಯುವುದು ಅನುಮಾನ ಎನ್ನಲಾಗುತ್ತಿದೆ. ಈ ಹಿಂದೆ ಡಂಕನ್ ಪ್ಲೆಚರ್ ಅವರ ಸಹಾಯಕ ಜೋ ದಾವೆಸ್ ಅವರು ಮತ್ತು ಟ್ರೆವರ್ ಪೆನ್ನಿ ಅವರನ್ನು ಟೀಂ ಇಂಡಿಯಾ ಇಂಗ್ಲೆಂಡ್​ನಲ್ಲಿ 1-3 ಅಂತರದಲ್ಲಿ ಸೋಲುಂಡ ಬೆನ್ನಲ್ಲೆ ಅವರನ್ನು ಬಿಸಿಸಿಐ ಹುದ್ದೆಯಿಂದ ವಜಾಗೊಳಿಸಲಾಗಿತ್ತು.

ಸದ್ಯ ಆಗಸ್ಟ್ 18 ರಿಂದ ಆರಂಭವಾಗುವ 3ನೇ ಟೆಸ್ಟ್ ಪಂದ್ಯ ಸಾಕಷ್ಟ ಕುತೂಹಲ ಮೂಡಿಸಿದ್ದು, ಕೊಹ್ಲಿ ಈ ಪಂದ್ಯಕ್ಕೆ ಫಿಟ್ ಆಗಿಲ್ಲವಾದರೆ ಉಪನಾಯಕ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಬೇಕಾಗುತ್ತದೆ. ಆದರೆ ರಹಾನೆ ಕೂಡ ಫಾರ್ಮ್​​ ವೈಫಲ್ಯ ಅನುಭವಿಸುತ್ತಿದ್ದಾರೆ. ಹೀಗಾಗಿ ಸಿನಿಯರ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರನ್ನು ನಾಯಕನಾಗಿ ಕಣಕ್ಕಿಳಿಯುವ ಸಾಧ್ಯತೆಯೂ ಇದೆ.
First published:August 13, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ