'ನಿವೃತ್ತಿ ಬಳಿಕ ಮತ್ತೆಂದೂ ಬ್ಯಾಟ್​ ಎತ್ತಲಾರೆ' ವಿರಾಟ್​ ಕೊಹ್ಲಿ ಅಚ್ಚರಿಯ ಹೇಳಿಕೆ

ಸದ್ಯ ಟೀಂ ಇಂಡಿಯಾವನ್ನು ಪ್ರತಿನಿಧಿಸುವ ಆಟಗಾರರು ಐಪಿಎಲ್​ ಹೊರತು ಪಡಿಸಿ ಇನ್ಯಾವುದೇ ಕ್ರಿಕೆಟ್​ ಲೀಗ್​ನಲ್ಲಿ ಭಾಗವಹಿಸಲು ಅವಕಾಶವಿಲ್ಲ.

zahir | news18
Updated:January 12, 2019, 3:57 PM IST
'ನಿವೃತ್ತಿ ಬಳಿಕ ಮತ್ತೆಂದೂ ಬ್ಯಾಟ್​ ಎತ್ತಲಾರೆ' ವಿರಾಟ್​ ಕೊಹ್ಲಿ ಅಚ್ಚರಿಯ ಹೇಳಿಕೆ
ವಿರಾಟ್ ಕೊಹ್ಲಿ
zahir | news18
Updated: January 12, 2019, 3:57 PM IST
ವಿಶ್ವದ ಸ್ಟಾರ್​ ಆಟಗಾರರಲ್ಲಿ ಗುರುತಿಸಿಕೊಂಡಿರುವ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ತಮ್ಮ ನಿವೃತ್ತಿ ಜೀವನದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಪ್ರತಿಯೊಂದು ಫಾರ್ಮಾಟ್​ನಲ್ಲೂ ತನ್ನ ಚಾಕಚಕ್ಯತೆಯನ್ನು ಪ್ರದರ್ಶಿಸಿರುವ ಕೊಹ್ಲಿ ಅವರ ಮುಂದಿನ ಕ್ರಿಕೆಟ್​ ಜೀವನದ ಕುರಿತಾದ ಪ್ರಶ್ನೆಗಳನ್ನು ಕೇಳಲಾಗಿತ್ತು.

ಈ ವೇಳೆ ಒಂದು ಬಾರಿ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ ಬಳಿಕ ನಾನು ಮತ್ತೆ ಕ್ರಿಕೆಟ್​ ಬ್ಯಾಟ್​ ಎತ್ತಲಾರೆ ಎಂಬ ಶಾಕಿಂಗ್​ ಉತ್ತರವನ್ನು ಕೊಹ್ಲಿ ನೀಡಿದ್ದಾರೆ. ತಾವು ನಿವೃತ್ತಿಯಾದ ಬಳಿಕ ಆಸ್ಟ್ರೇಲಿಯಾದ ಬಿಗ್​ಬ್ಯಾಶ್​ ಲೀಗ್​ನಲ್ಲಿ ಆಡುವೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ವಿರಾಟ್​ ಈ ರೀತಿಯಾಗಿ ಉತ್ತರಿಸಿದರು.

ಕಳೆದ ಐದು ವರ್ಷಗಳಿಂದ ಸಾಕಷ್ಟು ಕ್ರಿಕೆಟ್​ ಆಡುತ್ತಿದ್ದೇನೆ. ಬೇಕಾದಷ್ಟು ಕ್ರಿಕೆಟ್​ ಆಡಿದ ನಂತರವಷ್ಟೇ ನಿವೃತ್ತಿಯ ನಿರ್ಧಾರ ತೆಗೆದುಕೊಳ್ಳಲಿದ್ದೇನೆ. ನಿವೃತ್ತಿ ಘೋಷಿಸಿದ ಬಳಿಕ ಕ್ರಿಕೆಟ್​ ಆಡುವುದಿಲ್ಲ. ಭವಿಷ್ಯದಲ್ಲೂ ತನ್ನ ನಿಲುವಿನಲ್ಲಿ ಬದಲಾವಣೆ ಆಗುವ ಸಾಧ್ಯತೆಗಳಿಲ್ಲ ಎಂದು ಕೊಹ್ಲಿ ತಿಳಿಸಿದರು.

ಎಬಿ ಡಿವಿಲಿಯರ್ಸ್​ ಮತ್ತು ಬ್ರೆಂಡನ್ ಮೆಕಲಮ್​ ಸೇರಿದಂತೆ ವಿಶ್ವ ಸ್ಟಾರ್ ಆಟಗಾರರು ಅಂತರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ ಬಳಿಕ ಐಪಿಎಲ್ ಮತ್ತು ಬಿಗ್ ಬ್ಯಾಶ್​ ಲೀಗ್​ನಲ್ಲಿ ಆಡುತ್ತಿದ್ದಾರೆ. ಆದರೆ ಭಾರತದ ಯಾವುದೇ ಸ್ಟಾರ್ ಆಟಗಾರರು ಬಿಗ್​ ಬ್ಯಾಶ್​ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ನಿವೃತ್ತಿ ಬಳಿಕ ಕೊಹ್ಲಿ ಆಸ್ಟ್ರೇಲಿಯನ್​ ಲೀಗ್​ನಲ್ಲಿ ಆಡುತ್ತೀರಾ ಎಂಬ ಪ್ರಶ್ನೆಯನ್ನು ಕೊಹ್ಲಿಗೆ ಕೇಳಲಾಗಿತ್ತು.

ಇದನ್ನೂ ಓದಿ: ಅಶ್ಲೀಲ ಹೇಳಿಕೆ: ಆಸ್ಟ್ರೇಲಿಯಾ ಸರಣಿಯಿಂದ ಹಾರ್ದಿಕ್ ಪಾಂಡ್ಯ​, ಕನ್ನಡಿಗ ರಾಹುಲ್ ಔಟ್

ಸದ್ಯ ಟೀಂ ಇಂಡಿಯಾವನ್ನು ಪ್ರತಿನಿಧಿಸುವ ಆಟಗಾರರು ಐಪಿಎಲ್​ ಹೊರತು ಪಡಿಸಿ ಇನ್ಯಾವುದೇ ಕ್ರಿಕೆಟ್​ ಲೀಗ್​ನಲ್ಲಿ ಭಾಗವಹಿಸಲು ಅವಕಾಶವಿಲ್ಲ. ಆದರೆ ನಿವೃತ್ತಿಯ ಬಳಿಕ ಅಂತಹದೊಂದು ಆಯ್ಕೆ ಇದೆಯಲ್ಲವೇ ಎಂಬುದನ್ನು ಆಸೀಸ್ ಮಾಧ್ಯಮದವರು ಕೊಹ್ಲಿಯ ಮುಂದಿಟ್ಟಿದ್ದರು. ಇದಕ್ಕೆ ಅಂತಹ ಯಾವುದೇ ಆಲೋಚನೆಗಳಿಲ್ಲ. ಒಂದು ಬಾರಿ ನಿವೃತ್ತಿ ಪಡೆದ ಬಳಿಕ ಮತ್ತೆ ಕ್ರಿಕೆಟ್​ ಮೈದಾನದಲ್ಲಿ ಬ್ಯಾಟ್​ ಬೀಸುವುದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೇವಲ 1400 ರೂ. ಉಳಿತಾಯ ಮಾಡಿ, ಕೆಲಸಕ್ಕೆ ಸೇರುವ ಮುನ್ನ 1 ಕೋಟಿ ರೂ. ನಿಮ್ಮದಾಗಿಸಿ..!
Loading...

First published:January 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ