2ನೇ ಇನ್ನಿಂಗ್ಸ್​​ನಲ್ಲೂ ಟೀಂ ಇಂಡಿಯಾಕ್ಕೆ ಕೊಹ್ಲಿ ಆಧಾರ: ಗೆಲುವಿಗೆ ಇನ್ನು 84 ರನ್ ಬಾಕಿ

news18
Updated:August 3, 2018, 11:32 PM IST
2ನೇ ಇನ್ನಿಂಗ್ಸ್​​ನಲ್ಲೂ ಟೀಂ ಇಂಡಿಯಾಕ್ಕೆ ಕೊಹ್ಲಿ ಆಧಾರ: ಗೆಲುವಿಗೆ ಇನ್ನು 84 ರನ್ ಬಾಕಿ
news18
Updated: August 3, 2018, 11:32 PM IST
ನ್ಯೂಸ್ 18 ಕನ್ನಡ

ಎಡ್ಜ್​​​​ಬಾಸ್ಟನ್ (ಆ. 03): ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್​ ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು, ಮೂರನೇ ದಿನದಾಟದ ಅಂತ್ಯಕ್ಕೆ ಭಾರತ 5 ವಿಕೆಟ್ ಕಳೆದುಕೊಂಡು 110 ರನ್​ ಗಳಿಸಿದೆ. ಟೀಂ ಇಂಡಿಯಾಕ್ಕೆ ಗೆಲ್ಲಲು ಇನ್ನು 84 ರನ್​​ಗಳು ಬೇಕಾಗಿದೆ. ನಾಯಕ ವಿರಾಟ್ ಕೊಹ್ಲಿ 43 ಹಾಗೂ ದಿನೇಶ್ ಕಾರ್ತಿಕ್ 18 ರನ್​ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್​​ನಲ್ಲಿ 9 ರನ್​ಗಳಿಸಿ 1 ವಿಕೆಟ್ ಕಳೆದುಕೊಂಡಿತ್ತು. ಮೂರನೇ ದಿನವಾದ ಇಂದು ಬ್ಯಾಟಿಂಗ್ ಮುಂದುವರೆಸಿದ ಆಂಗ್ಲರ ಮೇಲೆ ಆರ್. ಅಶ್ವಿನ್ ಹಾಗೂ ಇಶಾಂತ್ ಶರ್ಮಾ ಬೌಲಿಂಗ್ ದಾಳಿ ನಡೆಸಿದರು. ಸ್ಯಾಮ್ ಕುರ್ರನ್ ಬಿರುಸಿ ಬ್ಯಾಟಿಂಗ್ ನಡೆಸಿ 63 ರನ್​ ಕಲೆಹಾಕಿದ್ದು ಬಿಟ್ಟರೆ ಜಾನಿ ಬೈರ್ಸ್ಟೊ 28 ಹಾಗೂ ಡೇವಿಡ್ ಮಲನ್ 20 ರನ್​​ ಗಳಿಸಿದ್ದೇ ಹೆಚ್ಚು ಉಳಿದ ಬ್ಯಾಟ್ಸ್​ಮನ್​ಗಳ ಸ್ಕೋರ್ 20ರ ಗಡಿ ದಾಟಲಿಲ್ಲ. ಅಂತಿಮವಾಗಿ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್​​ನಲ್ಲಿ 180 ರನ್​ಗೆ ಸರ್ವಪತನ ಕಂಡಿತು. ಈ ಮೂಲಕ ಇಂಗ್ಲೆಂಡ್ ಟೀಂ ಇಂಡಿಯಾಕ್ಕೆ ಗೆಲ್ಲಲು 194 ರನ್​ಗಳ ಟಾರ್ಗೆಟ್ ನೀಡಿತು.

ಈ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕರಾಗಿ ಕಣಕ್ಕಿಳಿದ ಮುರಳಿ ವಿಜಯ್ ಹಾಗೂ ಶಿಖರ್ ಧವನ್ ಬೇಗನೆ ಔಟ್ ಆಗಿ ಪೆವಿಲಿಯನ್ ಸೇರಿಕೊಂಡರೆ, ಕೆ. ಎಲ್. ರಾಹುಲ್ ಕೇವಲ 13 ರನ್​ಗೆ ಔಟ್ ಆಗಿದ್ದಾರೆ. ವಿಜಯ್ ಕೇವಲ 6 ರನ್​​ಗಳಿಸಿ ಔಟ್ ಆದರೆ, ಧವನ್ 13 ರನ್​​ಗೆ ಇನ್ನಿಂಗ್ಸ್​ ಮುಗಿಸಿದ್ದಾರೆ. ಬಳಿಕ ಬಂದ ಅಜಿಂಕ್ಯ ರಹಾನೆ ಕೂಡ ಕೇವಲ 2 ರನ್​ಗೆ ಔಟ್ ಆಗಿದ್ದು, ಅಶ್ವಿನ್ ಸಹ 13 ರನ್​ ಗಳಿಸಿ ಆಂಡರ್ಸನ್​ಗೆ ವಿಕೆಟ್ ಒಪ್ಪಿಸಿದರು. ಸದ್ಯ ನಾಯಕ ವಿರಾಟ್ ಕೊಹ್ಲಿ ಜೊತೆ ಸೇರಿರುವ ದಿನೇಶ್ ಕಾರ್ತಿಕ್ ಎಚ್ಚರಿಕೆಯ ಆಟವಾಡುತ್ತಿದ್ದು ನಾಳೆಯ ದಿನದ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಇಂಗ್ಲೆಂಡ್ ಪರ ಸ್ಟುವರ್ಟ್​ ಬ್ರಾಡ್ 2, ಆಂಡರ್ಸ್​ನ್, ಸ್ಟೋಕ್ಸ್​, ಸ್ಯಾಮ್ ಕುರ್ರನ್ ತಲಾ 1 ವಿಕೆಟ್ ಪಡೆದಿದ್ದಾರೆ.
First published:August 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ