ಸಿಡ್ನಿ: ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ಬಳಿಕ ಟೀಂ ಇಂಡಿಯಾ ಆಟಗಾರರ ಸಂತಸ ಮುಗಿಲು ಮುಟ್ಟಿದೆ. ಇದೇ ಮೊದಲ ಬಾರಿ ಕಾಂಗರೂಗಳ ನಾಡಿನಲ್ಲಿ ಭಾರತ ಟೆಸ್ಟ್ ಸರಣಿ ಗೆದ್ದು ಬೀಗಿದರೆ, ಇದು ನನ್ನ ನಾಯಕತ್ವದಲ್ಲಿ ಎಂಬುದು ವಿರಾಟ್ ಕೊಹ್ಲಿಗೆ ಡಬಲ್ ಖುಷಿ ನೀಡಿದೆ.
ಅಂತೆಯೆ ಭಾರತೀಯ ಆಟಗಾರರು ಪಂದ್ಯ ಮುಗಿದ ಬಳಿಕ ಹೋಟೆಲ್ಗೆ ತೆರಳಿದ್ದು, ಭಾರತ್ ಆರ್ಮಿ ಅಭಿಮಾನಿಗಳು ಟೀಂ ಇಂಡಿಯಾಕ್ಕೆ ಭರ್ಜರಿ ಸ್ವಾಗತ ಕೋರಿದ್ದಾರೆ. ಆಟಗಾರರು ಹೋಟೆಲ್ ಒಳಗೆ ಕಾಲಿಡುತ್ತಿದ್ದಂತೆ ಫೇಮಸ್ ಹಿಂದಿ ಚಿತ್ರಗೀತೆಗಳನ್ನು ಪ್ಲೇ ಮಾಡಿ ಡ್ರಂ ಬಾರಿಸಿ ಅದ್ಧೂರಿಯಾಗಿ ವೆಲ್ಕಮ್ ಮಾಡಿದ್ದಾರೆ.
ಈ ಸಂದರ್ಭ ಸಂತೋಷ ತಾಳಲಾರದೆ ಭಾರತೀಯ ಆಟಗಾರರು ಸಖತ್ ಸ್ಟೆಪ್ಸ್ ಹಾಕಿದರು. ಅದರಲ್ಲು ಹಾರ್ದಿಕ್ ಪಾಂಡ್ಯ ಅವರ ಟಪ್ಪಾಂಗುಚ್ಚಿ ಹಾಗೂ
ವಿರಾಟ್ ಕೊಹ್ಲಿ ಅವರ ನಾಗಿನ್ ಡ್ಯಾನ್ಸ್ ಎಲ್ಲರ ಗಮನ ಸೆಳೆಯಿತು. ಇವರ ಜೊತೆ ಮಯಾಂಕ್ ಅಗರ್ವಾಲ್, ಇಶಾಂತ್ ಶರ್ಮಾ ಕೂಡ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: 'ವಿಶ್ವಕಪ್' ವಿಚಾರವಾಗಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಯುವರಾಜ್ ಸಿಂಗ್
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಪೈಕಿ ಅಡಿಲೇಡ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ 31 ರನ್ಗಳ ಗೆಲುವು ದಾಖಲಿಸಿದರೆ, ಪರ್ಥ್ನಲ್ಲಿ ನಡೆದ ಎರಡನೇ ಟೆಸ್ಟ್ 146 ರನ್ಗಳಿಂದ ಆಸೀಸ್ ಪಾಲಾಯಿತು. ಅಂತೆಯ ಮೆಲ್ಬೋರ್ನ್ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ 137 ರನ್ಗಳ ಜಯ ಸಾಧಿಸಿತು. ಅಂತಿಮ ನಾಲ್ಕನೇ ಟೆಸ್ಟ್ ಪಂದ್ಯ ಮಳೆಯಿಂದ ಡ್ರಾನಲ್ಲಿ ಅಂತ್ಯಕಂಡ ಪರಿಣಾಮ, ಭಾರತ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸರಣಿಯಲ್ಲಿ 2-1 ಅಂತರದದಲ್ಲಿ ಟೆಸ್ಟ್ ಸರಣಿ ವಶ ಪಡಿಸಿಕೊಂಡು, ಐತಿಹಾಸಿಕ ಗೆಲುವು ಕಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ