• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • Virender Sehwag: ಟೀಂ ಇಂಡಿಯಾ ಕೋಚ್​ ಆಗುವಂತೆ ಕೊಹ್ಲಿ ಹೇಳಿದ್ರು, ಅಚ್ಚರಿಯ​ ಹೇಳಿಕೆ ನೀಡಿದ ಸೆಹ್ವಾಗ್

Virender Sehwag: ಟೀಂ ಇಂಡಿಯಾ ಕೋಚ್​ ಆಗುವಂತೆ ಕೊಹ್ಲಿ ಹೇಳಿದ್ರು, ಅಚ್ಚರಿಯ​ ಹೇಳಿಕೆ ನೀಡಿದ ಸೆಹ್ವಾಗ್

ಕೊಹ್ಲಿ-ಸೆಹ್ವಾಗ್​

ಕೊಹ್ಲಿ-ಸೆಹ್ವಾಗ್​

Virender Sehwag: ಸೆಹ್ವಾಗ್ ಅವರ ಹೆಸರಿನಲ್ಲಿ ಅನೇಕ ದಾಖಲೆಗಳಿದ್ದು, ಅವುಗಳಲ್ಲಿ ಇಂದಿಗೂ ನೆನಪಿಸಿಕೊಳ್ಳುವಂತವು ಎಂದರೆ ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗಳಿಸಿದ 319 ರನ್. ಏಕೆಂದರೆ ಇದು ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತೀಯ ಬ್ಯಾಟರ್ ಗಳಿಸಿದ ಅತ್ಯಧಿಕ ಸ್ಕೋರ್ ಆಗಿದೆ.

ಮುಂದೆ ಓದಿ ...
 • Share this:

ಟೀಂ ಇಂಡಿಯಾದ ಕೋಚ್ ಹುದ್ದೆ ಎಂದರೆ ಸಾಮಾನ್ಯವಾದ ವಿಷಯವಲ್ಲ ಬಿಡಿ, ಏಕೆಂದರೆ ಭಾರತದ ಕ್ರಿಕೆಟ್ ತಂಡದಲ್ಲಿ ಪ್ರಸ್ತುತ ಆಡುತ್ತಿರುವ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ, ಆರ್ ಅಶ್ವಿನ್, ಹಾರ್ದಿಕ್ ಪಾಂಡ್ಯ (Hardik Pandya) ಅವರಂತಹ ಕ್ರಿಕೆಟ್ ಆಟಗಾರರಿರುವ ತಂಡವನ್ನು ಕೋಚ್ ಮಾಡುವುದು ಎಂದರೆ ಸುಲಭದ ಮಾತಂತೂ ಅಲ್ಲವೇ ಅಲ್ಲ. ಈ ಹಿಂದೆ ಹಿರಿಯ ಆಟಗಾರರಾದ ಅನಿಲ್ ಕುಂಬ್ಳೆ ಅವರು ಭಾರತದ ಕ್ರಿಕೆಟ್ ತಂಡದ (Team India) ಕೋಚ್ ಆಗಿದ್ದು ನಮಗೆಲ್ಲಾ ಗೊತ್ತಿರುವ ವಿಚಾರವೇ ಆಗಿದೆ. ಅವರ ನಂತರ ಭಾರತ ಕ್ರಿಕೆಟ್ ತಂಡದ ಕೋಚ್ ಆಗಲು ಅನೇಕ ಹಿರಿಯ ಆಟಗಾರರು ತಮ್ಮ ಆಸಕ್ತಿಯನ್ನು ತೋರಿಸಿದ್ದರು, ಅದರಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ (Virender Sehwag)  ಸಹ ಒಬ್ಬರಂತೆ.


ಸೆಹ್ವಾಗ್ ಶ್ರೇಷ್ಠ ಆರಂಭಿಕ ಆಟಗಾರ:


ಕ್ರಿಕೆಟ್ ಇತಿಹಾಸದ ಶ್ರೇಷ್ಠ ಆರಂಭಿಕ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ವೀರೇಂದ್ರ ಸೆಹ್ವಾಗ್ ತಮ್ಮ ಪ್ರಾಬಲ್ಯದ ಬ್ಯಾಟಿಂಗ್ ಶೈಲಿ ಮತ್ತು ಅದ್ಭುತ ಬೌಂಡರಿಗಳನ್ನು ಹೊಡೆಯುವ ಜಾಣ್ಮೆಯಿಂದ ಅಭಿಮಾನಿಗಳ ಹೃದಯವನ್ನು ಗೆದ್ದವರು ಅಂತ ಹೇಳಬಹುದು.


ಸೆಹ್ವಾಗ್ ಅವರ ಹೆಸರಿನಲ್ಲಿ ಅನೇಕ ದಾಖಲೆಗಳಿದ್ದು, ಅವುಗಳಲ್ಲಿ ಇಂದಿಗೂ ನೆನಪಿಸಿಕೊಳ್ಳುವಂತವು ಎಂದರೆ ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗಳಿಸಿದ 319 ರನ್. ಏಕೆಂದರೆ ಇದು ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತೀಯ ಬ್ಯಾಟರ್ ಗಳಿಸಿದ ಅತ್ಯಧಿಕ ಸ್ಕೋರ್ ಆಗಿದೆ. ಈ ತ್ರಿಶತಕ ಬಂದಿದ್ದು ಕೇವಲ 278 ಎಸೆತಗಳಲ್ಲಿ ಅಂತ ಹೇಳಬಹುದು. ಅಷ್ಟೇ ಅಲ್ಲದೆ, 2009 ರಲ್ಲಿ ಶ್ರೀಲಂಕಾ ವಿರುದ್ಧ ಮುಂಬೈನಲ್ಲಿ ಕೇವಲ 207 ಎಸೆತಗಳಲ್ಲಿ 250 ರನ್ ಸಹ ಬಾರಿಸಿದ್ದರು.


ಇದನ್ನೂ ಓದಿ: Rohit Sharma: ರೋಹಿತ್ ಕೈ ತಪ್ಪುತ್ತಾ ಟೀಂ ಇಂಡಿಯಾ ಕ್ಯಾಪ್ಟನ್ಸಿ? ಹಿಟ್​ಮ್ಯಾನ್ ಸ್ಥಾನಕ್ಕೆ ಬರ್ತಾರಾ ಪಾಂಡ್ಯಾ?


 ಕುಂಬ್ಳೆ ನಂತರದಲ್ಲಿ ಕೋಚ್ ಆಗಲು ಸೆಹ್ವಾಗ್ ಅವರನ್ನ ಕೇಳಿದ್ರಂತೆ:


ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಯನ್ನು ವಹಿಸಿಕೊಳ್ಳಲು ಸೆಹ್ವಾಗ್ ಅವರನ್ನು ಸಂಪರ್ಕಿಸಲಾಗಿತ್ತು ಅಂತ ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಮಾಜಿ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರ ಅಧಿಕಾರಾವಧಿಯ ಕೊನೆಯಲ್ಲಿ ಅವರನ್ನು ಸಂಪರ್ಕಿಸಲಾಯಿತು. ಇತ್ತೀಚೆಗೆ, ಮಾಜಿ ಕ್ರಿಕೆಟಿಗ ಅವರು ಈ ಕೋಚ್ ಹುದ್ದೆಯನ್ನು ಏಕೆ ತೆಗೆದುಕೊಳ್ಳಲಿಲ್ಲ ಎಂಬುದರ ಹಿಂದಿನ ಕಾರಣವನ್ನು ವಿವರಿಸಿದರು.
ಸೆಹ್ವಾಗ್ ಅವರನ್ನು ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸದಿರುವ ಬಗ್ಗೆ ಏನಾದರೂ ವಿಷಾದವಿದೆಯೇ ಎಂದು ಕೇಳಿದರು. ಆಗ ಸೆಹ್ವಾಗ್ ಅವರು ಖಂಡಿತವಾಗಿಯೂ ಇಲ್ಲ, ನಾನು ಇದುವರೆಗೂ ಏನೆಲ್ಲಾ ಸಾಧಿಸಿದ್ದೇನೆಯೊ ನನಗೆ ಅದರ ಬಗ್ಗೆ ತುಂಬಾನೇ ಸಂತೋಷವಿದೆ. ನಜಾಫ್‌ಘರ್ ರೈತರ ಸಣ್ಣ ಕುಟುಂಬದಿಂದ ಬಂದ ನನಗೆ ಭಾರತಕ್ಕಾಗಿ ಆಡುವ ಅವಕಾಶ ಸಿಕ್ಕಿತು, ಅಭಿಮಾನಿಗಳಿಂದ ತುಂಬಾ ಪ್ರೀತಿ ಮತ್ತು ಮೆಚ್ಚುಗೆಯನ್ನು ಪಡೆದಿದ್ದೇನೆ ಮತ್ತು ನಾನು ಟೀಮ್ ಇಂಡಿಯಾದ ನಾಯಕನಾಗಿದ್ದರೆ, ನನಗೆ ಅದೇ ಗೌರವ ಸಿಗುತ್ತಿತ್ತು” ಎಂದು ಹೇಳಿದರು.


ಬಿಸಿಸಿಐನೊಂದಿಗೆ ನಡೆದಿತ್ತು ಮಹತ್ವದ ಸಭೆ:


ಮುಖ್ಯ ಕೋಚ್ ಪಾತ್ರಕ್ಕಾಗಿ ಬಿಸಿಸಿಐನೊಂದಿಗಿನ ಸಭೆಯ ಬಗ್ಗೆಯೂ ಅವರು ಬಹಿರಂಗಪಡಿಸಿದರು. "ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ನನ್ನನ್ನು ಸಂಪರ್ಕಿಸದಿದ್ದರೆ ನಾನು ಆ ಹುದ್ದೆಗೆ ಅರ್ಜಿ ಸಹ ಹಾಕುತ್ತಿರಲಿಲ್ಲ.


ನಾವು ಸಭೆ ನಡೆಸಿದ್ದೇವೆ ಮತ್ತು ಚೌಧರಿ ಅವರು ವಿರಾಟ್ ಕೊಹ್ಲಿ ಮತ್ತು ಅನಿಲ್ ಕುಂಬ್ಳೆ ನಡುವೆ ವಿಷಯಗಳು ಅಷ್ಟೊಂದು ಸರಳವಾಗಿ ಹೋಗುತ್ತಿಲ್ಲ ಎಂದು ಹೇಳಿದರು, ನೀವು ಕೋಚಿಂಗ್ ಸ್ಥಾನವನ್ನು ತೆಗೆದುಕೊಳ್ಳಬೇಕೆಂದು ನಾವು ಬಯಸುತ್ತೇವೆ. 2017 ರ ಚಾಂಪಿಯನ್ಸ್ ಟ್ರೋಫಿಯ ನಂತರ ಕುಂಬ್ಳೆ ಅವರ ಒಪ್ಪಂದವು ಕೊನೆಗೊಳ್ಳುತ್ತದೆ ಮತ್ತು ನಂತರ ನೀವು ತಂಡದೊಂದಿಗೆ ವೆಸ್ಟ್ ಇಂಡೀಸ್ ಗೆ ಪ್ರಯಾಣಿಸಬಹುದು ಎಂದು ಅವರು ನನಗೆ ಹೇಳಿದರು" ಎಂದು ಅವರು ಬಹಿರಂಗಪಡಿಸಿದರು.

top videos


  ಕುಂಬ್ಳೆ ಅವರನ್ನು ಜೂನ್ 2016 ರಲ್ಲಿ ಮುಖ್ಯ ಕೋಚ್ ಆಗಿ ನೇಮಿಸಲಾಗಿತ್ತು ಮತ್ತು 2017 ರ ಚಾಂಪಿಯನ್ಸ್ ಟ್ರೋಫಿಯ ಒಂದು ವರ್ಷದ ನಂತರ ಅವರ ಅಧಿಕಾರಾವಧಿ ಕೊನೆಗೊಂಡಿತು.

  First published: