(VIDEO): ಪಂತ್​ರನ್ನು ಕೆಣಕಿದ್ದಕ್ಕೆ ಬ್ರಾಡ್ ಮೇಲೆ ಕೊಹ್ಲಿ ವಿರಾಟ ರೂಪ

news18
Updated:August 28, 2018, 4:19 PM IST
(VIDEO): ಪಂತ್​ರನ್ನು ಕೆಣಕಿದ್ದಕ್ಕೆ ಬ್ರಾಡ್ ಮೇಲೆ ಕೊಹ್ಲಿ ವಿರಾಟ ರೂಪ
news18
Updated: August 28, 2018, 4:19 PM IST
ನ್ಯೂಸ್ 18 ಕನ್ನಡ

ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್ ಪಂದ್ಯದ ವೇಳೆ ಭಾರತದ ರಿಷಭ್ ಪಂತ್​​​ರನ್ನು ಕೆಣಕಿದ್ದ ಸ್ಟುವರ್ಟ್ ಬ್ರಾಡ್​​ಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಮೈದಾನದಲ್ಲೇ ತಿರುಗೇಟು ನೀಡಿದ್ದ ವಿಡಿಯೋ ಇದೀಗ ವೈರಲ್ ಆಗಿದೆ.

ನಾಟಿಂಗ್​ಹ್ಯಾಮ್​​ ಟೆಸ್ಟ್ ಪಂದ್ಯದ ವೇಳೆ ಟೀಂ ಇಂಡಿಯಾ ಯುವ ಆಟಗಾರ ರಿಷಭ್ ಪಂತ್‍ರನ್ನು ನಿಂದಿಸಿದ್ದ ಸ್ಟುವರ್ಟ್ ಬ್ರಾಡ್‍ಗೆ ಕೊಹ್ಲಿ ಆನ್ ಫೀಲ್ಡ್​​ನಲ್ಲೇ ತಿರುಗೇಟು ನೀಡಿದ್ದಾರೆ. ಮೊದಲ ಇನ್ನಿಂಗ್ಸ್ ನ 92ನೇ ಓವರನ್​ಲ್ಲಿ 26 ರನ್ ಗಳಿಸಿದ್ದ ಪಂತ್ ಔಟಾಗಿದ್ದರು. ಈ ವೇಳೆ ಪೆವಿಲಿಯನ್ ನತ್ತ ನಡೆದಿದ್ದ ಪಂತ್ ಬಳಿ ಬಂದ ಬ್ರಾಡ್ ನಿಂದಿಸಿದ್ದರು. ಈ ದೃಶ್ಯಗಳು ವಿಡಿಯೋದಲ್ಲಿ ಕೂಡ ಸೆರೆಯಾಗಿತ್ತು. ಪಂತ್​​ರನ್ನು ನಿಂದಿಸಿದ್ದ ಬ್ರಾಡ್‍ಗೆ ಅದೇ ಪಂದ್ಯದಲ್ಲಿ ಕೊಹ್ಲಿ ತಿರುಗೇಟು ನೀಡಿದ್ದು, ಕೊಹ್ಲಿ ಮಾತಿಗೆ ಬ್ರಾಡ್ ಉತ್ತರ ನೀಡಲಾಗದೇ ತಬ್ಬಿಬ್ಬಾಗಿರುವ ದೃಶ್ಯಗಳು ಸೆರೆಯಾಗಿವೆ.

ಇಬ್ಬರ ನಡುವಿನ ಸಂಭಾಷಣೆಯ ವಿಡಿಯೋ ವೈರಲ್ ಆಗಿದೆ. ಜೊತೆಗೆ ವಿರಾಟ್​​​  ಅಗ್ರೆಷನ್​​​ನ್ನು ಕಂಡ ಅಭಿಮಾನಿಗಳು ಆಸ್ಟ್ರೇಲಿಯಾದ ಮಾಜಿ ನಾಯಕ​ ರಿಕಿ ಪಾಂಟಿಂಗ್​​ಗೆ ಕೊಹ್ಲಿಯನ್ನು ಹೋಲಿಸತೊಡಗಿದ್ದಾರೆ.

First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...