ಎರಡನೇ ಟೆಸ್ಟ್ ಗೆಲುವಿಗೆ ವಿರಾಟ್ ರಣತಂತ್ರ; ಸ್ಟಾರ್ ಆಟಗಾರರಿಗೆ ಕೊಕ್..?

news18
Updated:August 8, 2018, 10:34 PM IST
ಎರಡನೇ ಟೆಸ್ಟ್ ಗೆಲುವಿಗೆ ವಿರಾಟ್ ರಣತಂತ್ರ; ಸ್ಟಾರ್ ಆಟಗಾರರಿಗೆ ಕೊಕ್..?
news18
Updated: August 8, 2018, 10:34 PM IST
ನ್ಯೂಸ್ 18 ಕನ್ನಡ

ಮೊದಲ ಟೆಸ್ಟ್ ಸೋತು ಆಘಾತ ಅನುಭವಿಸಿರುವ ಟೀಂ ಇಂಡಿಯಾ ಗೆಲುವಿನ ಜಪ ಮಾಡುತ್ತಿದೆ. ಕ್ರಿಕೆಟ್ ಕಾಶಿಯಲ್ಲಿ ಕ್ರಿಕೆಟ್ ಜನಕರಿಗೆ ಶಾಕ್ ನೀಡಲು ಕೊಹ್ಲಿ ಪಡೆ ರಣತಂತ್ರ ಹೆಣೆದುಕೊಂಡಿದೆ. ಫಲವಾಗಿ ಎರಡನೇ ಟೆಸ್ಟ್​​ನಲ್ಲಿ ಬದಲಾವಣೆಯ ಗಾಳಿ ಬೀಸುವ ಸಾಧ್ಯತೆ ಇದೆ. ಮೊದಲ ಟೆಸ್ಟ್‌ನಲ್ಲಿ ಮಾಡಿದ ತಪ್ಪುಗಳು ಕೊಹ್ಲಿ ಪಡೆಗೆ ಅರಿವಾದಂತೆ ಕಾಣುತ್ತಿದೆ. ಹೀಗಾಗಿ ಮೊದಲ ಟೆಸ್ಟ್‌ನಲ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದ ಸ್ಟಾರ್ ಗಳಿಗೆ ಕೊಕ್ ನೀಡುವ ಪ್ಲಾನ್ ವಿರಾಟ್​ದ್ದಾಗಿದೆ‌. ಅಲ್ಲದೆ ಫೀಲ್ಡಿಂಗ್ ವಿಭಾಗವನ್ನು ಸಹ ಗಮನದಲ್ಲಿಟ್ಟುಕೊಂಡು ತಂಡ ಪ್ರಕಟಿಸುವ ಸಾಧ್ಯತೆ ಇದೆ.

ಧವನ್ ಮೇಲೆ ಅಪಾಯದ ತೂಗುಬತ್ತಿ:ಮೊದಲ ಟೆಸ್ಟ್‌ ಪಂದ್ಯದಲ್ಲಿ ಕಳಪೆ ಆಟ ಆಡಿದ ಶಿಖರ್ ಧವನ್ ಸ್ಥಾನದ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಿದೆ. ರನ್ ಬರ, ಕ್ಯಾಚ್ ಕೈ ಚೆಲ್ಲಿದ್ದನ್ನು ನೋಡಿದರೆ, ಗಬ್ಬರ್ ಬೆಂಚ್ ಕಾಯುವ ಲಕ್ಷಣಗಳು ಹೆಚ್ಚಿವೆ. ಬರ್ಮಿಂಗ್ಹ್ಯಾಮ್‌ ಟೆಸ್ಟ್ ಪಂದ್ಯದಲ್ಲಿ ಮೂವರು ಓಪನರ್ಸ್​​​ಗಳೊಂದಿಗೆ ಕಣಕ್ಕೆ ಇಳಿದಿದ್ದ ವಿರಾಟ್ ಪಡೆ, ಈ ಬಾರಿ ಮಧ್ಯಮ ಕ್ರಮಾಂಕದ ಬಲ ಹೆಚ್ಚಿಸಲು ಉಪಾಯ ಮಾಡಿಕೊಳ್ಳುತ್ತಿದೆ. ಹೀಗೆ ಆದಲ್ಲಿ ಶಿಖರ್ ಧವನ್ ಹೊರ ನಡೆಯುವುದು ಬಹುತೇಕ ಖಚಿತ. ಇವರ ಸ್ಥಾನದಲ್ಲಿ ಕನ್ನಡಿಗ ರಾಹುಲ್, ಮುರಳಿ ವಿಜಯ್ ಜೊತೆಗೂಡಿ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.

ಪೂಜಾರಗೆ ಸ್ಥಾನ ನೀಡುವ ಸಾಧ್ಯತೆ:


Loading...

ಲಾರ್ಡ್ಸ್‌ ಟೆಸ್ಟ್ ನಲ್ಲಿ ಮೂರನೇ ಕ್ರಮಾಂಕದಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರಗೆ ಸ್ಥಾನ ನೀಡುವಂತೆ ಕಾಣುತ್ತಿದೆ. ಪೂಜಾರ ಕೌಂಟಿಯಲ್ಲಿ ಹಾಗೂ ಅಭ್ಯಾಸ ದ ವೇಳೆ ಫ್ಲಾಫ್ ಶೋ ನೀಡಿದ್ದರಿಂದ ಮೊದಲ ಟೆಸ್ಟ್ ನಿಂದ ಕೈ ಬಿಡಲಾಗಿತ್ತು. ಆದರೆ, ಮೊದಲ ಟೆಸ್ಟ್​​ನಲ್ಲಿ ಮಧ್ಯಮ ಕ್ರಮಾಂಕ ಕಳಪೆ ಆಟ ಹಿನ್ನೆಲೆಯಲ್ಲಿ ಇವರಿಗೆ ಮಣೆ ಹಾಕಬಹುದು. ಅಲ್ಲದೆ ಪೂಜಾರ ಸ್ಲಿಪ್​​​ನಲ್ಲಿ ಉತ್ತಮ ಫೀಲ್ಡರ್ ಎಂಬುದು ಪ್ಲಸ್ ಪಾಯಿಂಟ್.

ಪಾಂಡ್ಯ ಜಾಗಕ್ಕೆ ಮತ್ತೊಬ್ಬ ಸ್ಪಿನ್ನರ್?:ಹಾರ್ದಿಕ್ ಪಾಂಡ್ಯ ಸಿಕ್ಕ ಅವಕಾಶದಲ್ಲಿ ಚೇತೋಹಾರಿ ಪ್ರದರ್ಶನ ನೀಡಿದರೂ ಸಹ ಅಪಾಯದ ತೂಗುಗತ್ತಿ ಇವರ ಮೇಲೆ ನೇತಾಡುತ್ತಿದೆ. ಇಂಗ್ಲೆಂಡ್ ಬ್ಯಾಟ್ಸ್‌ಮನ್​​​ಗಳನ್ನು ಕಾಡಲು ಇನ್ನೊಬ್ಬ ಸ್ಪಿನ್​​​ ಬೌಲರ್​​ಗೆ ಮಣೆ ಹಾಕುವ ಚಾನ್ಸ್ ದಟ್ಟವಾಗಿದೆ. ಹೀಗೆ ಆದಲ್ಲಿ ವಿಶ್ವದ ಮಾಜಿ ನಂಬರ್ ಒನ್ ಬೌಲರ್ ರವೀಂದ್ರ ಜಡೇಜಾ ಅಥವಾ  ಕುಲ್ದೀಪ್ ಯಾದವ್ ತಂಡದಲ್ಲಿ ಸ್ಥಾನ ಪಡೆಯಬಹುದು.

ದಿನೇಶ್ ಕಾರ್ತಿಕ್​ಗೆ ಔಟ್-ರಿಷಭ್ ಪಂತ್ ಇನ್?:ಇನ್ನು 2004ರಲ್ಲೇ ಟೀಂ ಇಂಡಿಯಾಕ್ಕೆ ಕಾಲಿಟ್ಟ ದಿನೇಶ್ ಕಾರ್ತಿಕ್​​ಗೆ ಅವಕಾಶ ಅಷ್ಟೇನು ಲಭಿಸಿಲ್ಲ. ಧೋನಿ ಟೀಂ ಇಂಡಿಯಾದ ಕೀಪರ್​ ಆಗಿ ಹೊರ ಹೊಮ್ಮಿದ ಬಳಿಕ ಕಾರ್ತಿಕ್ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದು ಬೆರಳಣಿಕೆಯಷ್ಟು ಪಂದ್ಯದಲ್ಲಿ ಮಾತ್ರ. ಜೊತೆಗೆ ವೃದ್ದಿಮಾನ್ ಸಾಹ ಕೂಡ ತಂಡ ಸೇರಿದ ಕಾರಣ ಕಾರ್ತಿಕ್​​ ಕೆಲ ವರ್ಷ ತಂಡದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಆದರೆ ಸದ್ಯ ಧೋನಿ ಟೆಸ್ಟ್​ಗೆ ನಿವೃತ್ತಿಗೊಂಡ ಕಾರಣ ಹಾಗೂ ಸಾಹ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಇಂಗ್ಲೆಂಡ್ ಸರಣಿಯಲ್ಲಿ ಕಾರ್ತಿಕ್​ಗೆ ಅವಕಾಶ ನೀಡಲಾಯಿತು. ಆದರೆ ಕಾರ್ತಿಕ್​ರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬರುತ್ತಿಲ್ಲ. ಹೀಗಾಗಿ ಕಾರ್ತಿಕ್ ಬದಲು ಮತ್ತೊಬ್ಬ ವಿಕೆಟ್ ಕೀಪರ್-ಬ್ಯಾಟ್ಸ್​ಮನ್​​ ರಿಷಭ್ ಪಂತ್​ಗೆ 2ನೇ ಟೆಸ್ಟ್​​ನಲ್ಲಿ ಸ್ಥಾನ ಲಭಿಸುವ ಸಂಭವವಿದೆ.

ಒಟ್ಟಾರೆ ಲಾರ್ಡ್ಸ್ ಅಂಗಳದಲ್ಲಿ ಗೆಲುವಿನ ಬ್ಲ್ಯೂ ಪ್ರಿಂಟ್ ಸಿದ್ದ ಪಡಿಸಿಕೊಳ್ಳುತ್ತಿರುವ ಟೀಂ ಇಂಡಿಯಾ ಪುಟಿದೇಳುವ ಲೆಕ್ಕಾಚಾರ ಹಾಕಿಕೊಂಡಿದೆ. ಮತ್ತೊಮ್ಮೆ ಕ್ರಿಕೆಟ್ ಕಾಶಿಯಲ್ಲಿ ಜಯದ ದೀಪವನ್ನು ಕೊಹ್ಲಿ ಪಡೆ ಬೆಳೆಗಿಸುತ್ತಾರ ಕಾದು ನೋಡಬೇಕಿದೆ.
First published:August 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ