ಅಭಿಮಾನಿಗಳ ಪ್ರಕಾರ ಟೀಂ ಇಂಡಿಯಾ ಸೋಲಿಗೆ ಕೊಹ್ಲಿ-ಧೋನಿ ಕಾರಣ: ಹೇಗಂತಿರಾ..?

ರೋಹಿತ್ ಶರ್ಮಾ, ಶಿಖರ್ ಧವನ್ ಸೇರಿದಂತೆ ಪ್ರಮುಖರು ಕ್ರೀಸ್ ಕಚ್ಚಿ ನಿಲ್ಲುವ ಮುನ್ನವೆ ಬೌಲ್ಟ್​​ ಇವರನ್ನೆಲ್ಲ ಪೆವಿಲಿಯನ್​ಗೆ ಅಟ್ಟಿದರು. ಮೇಲ್ನೋಟಕ್ಕೆ ಸೋಲಿಗೆ ಇದೆ ಪ್ರಮುಖ ಕಾರಣ ಎಂದು ಕಂಡುಬಂದರು, ಅಸಲಿ ವಿಷಯ ಬೇರೆನೆಯಿದೆ.

Vinay Bhat | news18
Updated:January 31, 2019, 12:49 PM IST
ಅಭಿಮಾನಿಗಳ ಪ್ರಕಾರ ಟೀಂ ಇಂಡಿಯಾ ಸೋಲಿಗೆ ಕೊಹ್ಲಿ-ಧೋನಿ ಕಾರಣ: ಹೇಗಂತಿರಾ..?
ಫೈಲ್ ಫೋಟೋ
Vinay Bhat | news18
Updated: January 31, 2019, 12:49 PM IST
ಟೀಂ ಇಂಡಿಯ ಬ್ಯಾಟ್ಸ್​ಮನ್​​ಗಳ ಕಳಪೆ ಪ್ರದರ್ಶನದಿಂದಾಗಿ ಏಕದಿನ ಸರಣಿಯ 4ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಕೊನೆಗೂ ಗೆಲುವಿನ ರುಚಿ ಕಂಡಿದೆ. ಸರಣಿ ಭಾರತದ ಪಾಲಾಗಿದ್ದರು ಸೋಲಿನ ಅಂತರವನ್ನು 3-1ಕ್ಕೆ ಇಳಿಸುವಲ್ಲಿ ಕೇನ್ ಪಡೆ ಯಶಸ್ವಿಯಾಗಿದೆ.

30.5 ಓವರ್​​ನಲ್ಲಿ ಕೇವಲ 92 ರನ್​ಗೆ ಸರ್ವಪತನ ಕಂಡ ಭಾರತ 7ನೇ ಬಾರಿ ಅತಿ ಕಡಿಮೆ ಸ್ಕೋರ್​ಗೆ ಆಲೌಟ್ ಆಯಿತು. ನ್ಯೂಜಿಲೆಂಡ್ ಕೇವಲ 14.4 ಓವರ್​ನಲ್ಲೆ 93 ರನ್ ಬಾರಿಸಿ ಗೆಲುವಿನ ದಡ ಸೇರಿತು. ಈ ಮೂಲಕ ಕಿವೀಸ್ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ.

ರೋಹಿತ್ ಶರ್ಮಾ, ಶಿಖರ್ ಧವನ್, ಶುಭ್ಮನ್ ಗಿಲ್, ಕೇದರ್ ಜಾಧವ್, ಹಾರ್ದಿಕ್ ಪಾಂಡ್ಯರನ್ನು ಕ್ರೀಸ್ ಕಚ್ಚಿ ನಿಲ್ಲುವ ಮುನ್ನವೆ ಬೌಲ್ಟ್​​ ಇವರನ್ನೆಲ್ಲ ಪೆವಿಲಿಯನ್​ಗೆ ಅಟ್ಟಿದರು. ಮೇಲ್ನೋಟಕ್ಕೆ ಭಾರತದ ಸೋಲಿಗೆ ಇದೆ ಪ್ರಮುಖ ಕಾರಣ ಎಂದು ಕಂಡುಬಂದರು, ಅಸಲಿ ವಿಷಯ ಬೇರೆನೆಯಿದೆ.

ಇದನ್ನೂ ಓದಿ: ಬೌಲ್ಟ್​​​ ಬೌಲಿಂಗ್ ದಾಳಿಗೆ ಭಾರತ ಬೌಲ್ಡ್​​​; ಮಾನ ಉಳಿಸಿಕೊಂಡ ಕೇನ್ ಪಡೆ

ಭಾರತದ ಈ ರೀತಿಯ ಹೀನಾಯ ಪ್ರದರ್ಶನಕ್ಕೆ ವಿರಾಟ್ ಕೊಹ್ಲಿ ಹಾಗೂ ಎಂ ಎಸ್ ಧೋನಿಯೇ ಕಾರಣ. ಇವರಿಬ್ಬರ ಅನುಪಸ್ಥಿತಿಯೆ ಪ್ರಮುಖ ಕಾರಣ. ವಿಶ್ರಾಂತಿ ಮೇರೆಗೆ ಕೊಹ್ಲಿ ಸದ್ಯ ನ್ಯೂಜಿಲೆಂಡ್ ಸರಣಿಯಿಂದ ಹೊರಗುಳಿದಿದ್ದರೆ, ಧೋನಿ ಇಂಜುರಿಯಿಂದ ಇನ್ನೂ ಗುಣಮುಖರಾಗಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಇವರಿಬ್ಬರು ಪಂದ್ಯದಲ್ಲಿ ಆಡದಿರುವುದೆ ಸೋಲಿಗೆ ಮುಖ್ಯ ಕಾರಣ ಎಂಬುದು ಅಭಿಮಾನಿಗಳ ಕಾರಣವಾಗಿದೆ. ಹೀಗಾಗೆ ಟೀಂ ಇಂಡಿಯಾ ಅಭಿಮಾನಿಗಳು ಟ್ವಿಟ್ಟರ್​​ನಲ್ಲಿ ಸೋಲಿಗೆ ಕಿಡಿ ಕಾರುತ್ತಿದ್ದಾರೆ.

 

First published:January 31, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...