ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಎರಡು ಟೆಸ್ಟ್‌ಗಳಲ್ಲಿ ಆಸ್ಟ್ರೇಲಿಯಾವನ್ನು ಟೀಂ ಇಂಡಿಯಾ (IND vs AUS) ಕೇವಲ 3 ದಿನಗಳಲ್ಲಿ ಸೋಲಿಸಿತು. ಆದರೆ ಭಾರತದ ಗೆಲುವಿಗಿಂತ ಹೆಚ್ಚಿನ ಚರ್ಚೆ ಈ ಸಮಯದಲ್ಲಿ ಒಬ್ಬ ಆಟಗಾರನ ಬಗ್ಗೆ ನಡೆಯುತ್ತಿದೆ. ಅವರೇ ಕೆಎಲ್ ರಾಹುಲ್ (KL Rahul). ಆಸ್ಟ್ರೇಲಿಯಾ ವಿರುದ್ಧದ ಉಳಿದ 2 ಟೆಸ್ಟ್ ಪಂದ್ಯಗಳಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಆದರೆ ಅವರ ಉಪನಾಯಕತ್ವವನ್ನು ಬಿಸಿಸಿಐ (BCCI) ಕಸಿದುಕೊಂಡಿದೆ. ಇದಕ್ಕೆ ಕಾರಣ ಕೆಎಲ್ ರಾಹುಲ್ ಅವರ ಇತ್ತೀಚಿನ ಪ್ರದರ್ಶನ ಎನ್ನಲಾಗುತ್ತಿದೆ. ಕಳೆದ 10 ಇನ್ನಿಂಗ್ಸ್‌ಗಳಲ್ಲಿ ರಾಹುಲ್ 125 ರನ್ ಗಳಿಸಿದ್ದಾರೆ. ಇದು ಇತ್ತೀಚಿನ ತಿಂಗಳುಗಳಲ್ಲಿ ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಕಳಪೆ ಪ್ರದರ್ಶನವಾಗಿದೆ. ಹೀಗಾಗಿ ಕೆಎಲ್ ರಾಹುಲ್ ಟೆಸ್ಟ್ ತಂಡದಿಂದ ಹೊರಬರಬಹುದು. ಅವರ ಸ್ಥಾನದಲ್ಲಿ ಶುಭಮನ್ ಗಿಲ್ (Shubman Gill) ಇಂದೋರ್ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಆರಂಭಿಸಬಹುದು ಎನ್ನಲಾಗುತ್ತಿದೆ.
ಬ್ಯಾಟ್ ಕಂಪನಿಗೆ ಭೇಟಿ ನೀಡಿದ ರಾಹುಲ್:
ಕೆಎಲ್ ರಾಹುಲ್ ಬ್ಯಾಟ್ ಮತ್ತು ಕ್ರಿಕೆಟ್ ಗೇರ್, ಕ್ರೀಡಾ ಸರಕುಗಳ ಕಂಪನಿ SG ವಸ್ತುಗಳನ್ನು ಬಳಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಎಲ್ ರಾಹುಲ್ ಇಂದೋರ್ ಟೆಸ್ಟ್ಗೂ ಮುನ್ನ ತಮ್ಮ ಫಾರ್ಮ್ ಪಡೆಯಲು SG ಕಂಪನಿಯ ಕಾರ್ಖಾನೆಗೆ ಭೇಟಿ ನೀಡಿದ್ದರು. ಅಲ್ಲಿ ಬ್ಯಾಟ್‌ಗಳು, ಗ್ಲೋಸ್ ಮತ್ತು ಇತರ ಕ್ರಿಕೆಟ್ ಗೇರ್‌ಗಳನ್ನು ತಯಾರಿಸಲಾಗುತ್ತದೆ.
Cricket is all about precision and perfection! Taking a step closer towards perfection, KL Rahul visited the SG factory to make sure his equipment is flawless.@klrahul #sgcricket #klrahul #believe #become #cricket pic.twitter.com/Tys6CdOEuQ
— SG cricket (@sgcrickett) February 22, 2023
ಕೆಎಲ್ ರಾಹುಲ್ SG ಕಂಪನಿಯ ಬ್ಯಾಟ್ ಅನ್ನು ಬಹಳ ಸಮಯದಿಂದ ಬಳಸುತ್ತಿದ್ದಾರೆ. ಇವರಲ್ಲದೆ ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಚೇತೇಶ್ವರ ಪೂಜಾರ, ಮೊಹಮ್ಮದ್ ಸಿರಾಜ್ ಕೂಡ ಈ ಕಂಪನಿಯ ಬ್ಯಾಟ್ ಬಳಸುತ್ತಾರೆ. SG ಕಂಪನಿಯು ತನ್ನ ಸಾಮಾಜಿಕ ಜಾಲತಾಣದಲ್ಲಿ ಕೆಎಲ್ ರಾಹುಲ್ ಅವರ ವೀಡಿಯೊವನ್ನು ಹಂಚಿಕೊಂಡಿದೆ.
ಇದನ್ನೂ ಓದಿ: ICC Test Rankings: ನೂತನ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ, ಟಾಪ್ 10 ಪಟ್ಟಿಯಲ್ಲಿ ಮೂವರು ಭಾರತೀಯರು
ಒಂದೇ ಒಂದು ಅರ್ಧಶತಕ:
ಕಳೆದ 10 ಇನ್ನಿಂಗ್ಸ್‌ಗಳಲ್ಲಿ ಒಂದೇ ಒಂದು ಅರ್ಧಶತಕವನ್ನು ಸಹ ಮಾಡದ ಕೆಎಲ್ ರಾಹುಲ್ ಟೆಸ್ಟ್‌ನಲ್ಲಿ ರನ್ ಗಳಿಸಲು ಹೆಣಗಾಡುತ್ತಿದ್ದಾರೆ. ಅವರು ಡಿಸೆಂಬರ್ 2021ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕೊನೆಯ ಟೆಸ್ಟ್ ಶತಕವನ್ನು ಗಳಿಸಿದರು. ಆ ಬಳಿಕ ರಾಹುಲ್ ಟೆಸ್ಟ್‌ನಲ್ಲಿ 50 ರನ್‌ಗಳ ಗಡಿ ದಾಟಲು ಸಾಧ್ಯವಾಗಿದ್ದು ಒಂದೇ ಬಾರಿ.
ಕಳೆದ 10 ಇನ್ನಿಂಗ್ಸ್‌ಗಳಲ್ಲಿ ಅವರು 8, 12, 10, 22, 23, 10, 2, 20 ಮತ್ತು 17 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 2 ಟೆಸ್ಟ್‌ಗಳ 3 ಇನ್ನಿಂಗ್ಸ್‌ಗಳಲ್ಲಿ 38 ರನ್‌ಗಳು ಅವರ ಬ್ಯಾಟ್‌ನಿಂದ ಹೊರಬಂದವು. ಕಳೆದ 12 ತಿಂಗಳುಗಳಲ್ಲಿ, ಟೆಸ್ಟ್‌ನಲ್ಲಿ ಅವರ ಸರಾಸರಿ 13.57 ಆಗಿತ್ತು, ಇದು ಆರ್ ಅಶ್ವಿನ್ (37) ಮತ್ತು ಮೊಹಮ್ಮದ್ ಶಮಿ (22) ಗಿಂತ ಕಡಿಮೆಯಾಗಿದೆ. ಈ ಪ್ರದರ್ಶನದ ನಂತರ ರಾಹುಲ್ ಅವರ ಟೆಸ್ಟ್ ವೃತ್ತಿಜೀವನವು ಅಪಾಯದಲ್ಲಿದೆ.
ಆಸ್ಟ್ರೇಲಿಯಾ ವಿರುದ್ಧದ 3 ಮತ್ತು 4 ಟೆಸ್ಟ್‌ಗೆ ಭಾರತದ ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (WK), ಇಶಾನ್ ಕಿಶನ್ (WK), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಉಮೇಶ್ ಯಾದವ್, ಜಯದೇವ್ ಉನದ್ಕತ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ