IND vs ZIM: ಜಿಂಬಾಬ್ವೆ ಸರಣಿಯಲ್ಲಿ ಮಹತ್ವದ ಬದಲಾವಣೆ, ಧವನ್ ಬದಲಿಗೆ ಕನ್ನಡಿಗನಿಗೆ ನಾಯಕತ್ವ

ಶಿಖರ್ ಧವನ್ ಬದಲಿಗೆ ಕನ್ನಡಿಗ ಕೆಎಲ್ ರಾಹುಲ್ (KL Rahul) ಅವರನ್ನು ಜಿಂಬಾಬ್ವೆ ಸರಣಿಗೆ ನಾಯಕರನ್ನಾಗಿ BCCI ಆಯ್ಕೆ ಮಾಡಿದೆ. ಆದರೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. 

ಕೆ.ಎಲ್ ರಾಹುಲ್

ಕೆ.ಎಲ್ ರಾಹುಲ್

  • Share this:
 ಟೀಂ ಇಂಡಿಯಾ ಇದೇ ತಿಂಗಳು 18ರಿಂದ ಜಿಂಬಾಬ್ವೆ ಪ್ರವಾಸವ ಮಾಡಲಿದೆ. ಈಗಾಗಲೇ ಬಿಸಿಸಿಐ (BCCI) ಟಿಂ ಇಂಡಿಯಾವನ್ನು (Team India) ಪ್ರಕಟಿಸಿದೆ. ಜಿಂಬಾಬ್ವೆ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡವನ್ನು ಘೋಷಿಸಿದ್ದು, ನಾಯಕನಾಗಿ ಶಿಖರ್ ಧವನ್ (Shikhara Dhawan) ಅವರನ್ನು ಮೊದಲಿಗೆ ಆಯ್ಕೆ ಮಾಡಲಾಗಿತ್ತು. ಅದರೆ ಇದೀಗ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಕನ್ನಡಿಗ ಕೆಎಲ್ ರಾಹುಲ್ (KL Rahul) ಅವರನ್ನು ಜಿಂಬಾಬ್ವೆ ಸರಣಿಗೆ ನಾಯಕರನ್ನಾಗಿ BCCI ಆಯ್ಕೆ ಮಾಡಿದೆ. ಆದರೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ವೈದ್ಯಕೀಯ ತಂಡವು ರಾಹುಲ್ ಆಡಲು ಫಿಟ್ ಆಗಿದ್ದಾರೆ ಎಮದು ಹೇಳಿದ್ದು, ಇದೀಗ ಅವರು ಜಿಂಬಾಬ್ವೆ ಸರಣಿಗೆ ಆಯ್ಕೆ ಆಗಿದ್ದಾರೆ. ಶಿಖರ್ ಧವನ್ (Shikhara Dhawan) ಅವರನ್ನು ಉಪ ನಾಯಕರನ್ನಾಗಿ ಆಯ್ಕೆ ಮಾಲಾಗಿದೆ.

ಕನ್ನಡಿಗನಿಗೆ ನಾಯಕತ್ವದ ಜವಾಬ್ದಾರಿ:

ಹೌದು, ಈ ರೀತಿಯ ಮಹತ್ವದ ಬದಲಾವಣೆಯನ್ನು ಬಿಸಿಸಿಐ ಕಳೆದ ರಾತ್ರಿ ಮಾಡಿದ್ದು, ಜಿಂಬಾಬ್ವೆ ಸರಣಿಗೆ ಈ ಮೊದಲು ಶಿಖರ್ ಧವನ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಇದೀಗ ಧಿಡೀರ್​ ಬದಲಾವಣೆ ಮಾಡಲಾಗಿದ್ದು, ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ಕನ್ನಡಿಗ ಕೆಎಲ್ ರಾಹುಲ್​ ವೈದ್ಯಕೀಯ ತಪಾಸಣೆ ನಂತರ ಫಿಟ್​ ಆಗಿದ್ದಾಗಿ ರಿಪೋರ್ಟ್ ಬಂದಂತಹ ಕಾರಣ ಅವರನ್ನು ಜಿಂಬಾಬ್ವೆ ಸರಣಿಗೆ ಬಿಸಿಸಿಐ ಆಯ್ಕೆ ಮಾಡಿದೆ. ಅಲ್ಲದೇ ಅವರನ್ನೇ ನಾಯಕರನ್ನಾಗಿ ಆಐ್ಕೆ ಮಾಡುವ ಮೂಲಕ, ಶಿಖರ್ ಧವನ್ ಅವರನ್ನು ಉಪ ನಾಯಕರನ್ನಾಗಿ ಆಯ್ಕೆ ಮಾಡಿ ಬದಲಾವಣೆ ಮಾಡಿದೆ.

ರಾಹುಲ್ ಮೇ ಅಂತ್ಯದಲ್ಲಿ ಐಪಿಎಲ್ ಮುಗಿದ ಬಳಿಕ ಎರಡು ತಿಂಗಳಿಗೂ ಹೆಚ್ಚು ಕಾಲ ಕ್ರಿಕೆಟ್ ಮೈದಾನದಿಂದ ಹೊರಗುಳಿದಿದ್ದರು. ಅಲ್ಲಿಂದ ಅವರು ಯಾವುದೇ ಪಂದ್ಯವನ್ನು ಆಡಿಲ್ಲ. ಜೂನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿಗೆ ಟೀಂ ಇಂಡಿಯಾವನ್ನು ರಾಹುಲ್ ಮುನ್ನಡೆಸಬೇಕಿತ್ತು. ಆದರೆ ಇದಕ್ಕೂ ಮುನ್ನ ಅವರಿಗೆ ಗಾಯದ ಸಮಸ್ಯೆ ಕಾರಣ ಅವರು ಶಸ್ತ್ರಚಿಕಿತ್ಸೆ ಒಳಗಾಗಿದ್ದರು. ಬಳಿಕ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಕೊರೋನಾಗೆ ತುತ್ತಾಗಿದ್ದರಿಂದ ಆ ಸರಣಿಯಿಂದಲೂ ದೂರುಳಿದಿದ್ದರು. ಆದರೆ ಇದೀಗ ಅವರು ನಾಯಕರಾಗಿ ಯಾ್ಕೆ ಆಗಿದ್ದಾರೆ. ಅಲ್ಲದೇ ಏಷ್ಯಾ ಕಪ್​ 2022ಗೂ ಉಪನಾಯಕರಾಗಿ ಆಯ್ಕೆ ಆಗಿದ್ದಾರೆ.

IND vs ZIM ಏಕದಿನ ಸರಣಿಯ ವೇಳಾಪಟ್ಟಿ:

ಭಾರತ-ಜಿಂಬಾಬ್ವೆ ಮೊದಲ ಏಕದಿನ ಪಂದ್ಯ - 18 ಆಗಸ್ಟ್ ಹರಾರೆ ಸ್ಪೋರ್ಟ್ ಕ್ಲಬ್
ಭಾರತ-ಜಿಂಬಾಬ್ವೆ 2ನೇ ಏಕದಿನ ಪಂದ್ಯ - 20 ಆಗಸ್ಟ್ ಹರಾರೆ ಸ್ಪೋರ್ಟ್ ಕ್ಲಬ್
ಭಾರತ-ಜಿಂಬಾಬ್ವೆ 3ನೇ ಏಕದಿನ ಪಂದ್ಯ - 22 ಆಗಸ್ಟ್ ಹರಾರೆ ಸ್ಪೋರ್ಟ್ ಕ್ಲಬ್

ಇದನ್ನೂ ಓದಿ: IND vs ZIM: ಜಿಂಬಾಬ್ವೆ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಬಿಗ್​ ಶಾಕ್, ತಂಡದಿಂದ ಪ್ರಮುಖ ಆಟಗಾರ ಔಟ್?

ಜಿಂಬಾಬ್ವೆ ಸರಣಿಗೆ ಭಾರತ ತಂಡ:

ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (WK), ಸಂಜು ಸ್ಯಾಮ್ಸನ್ (WK), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ , ದೀಪಕ್ ಚಹಾರ್.
Published by:shrikrishna bhat
First published: