ಲಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ (KL Rahul) ಮತ್ತು ಸುನೀಲ್ ಶೆಟ್ಟಿ (Suniel Shetty) ಅವರ ಪುತ್ರಿ ಹಾಗೂ ಬಾಲಿವುಡ್ ನಟಿ ಅಥಿಯಾ ಶೆಟ್ಟಿ (Athiya Shetty) ಜನವರಿ 23 ರಂದು ವಿವಾಹವಾಗಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಖಂಡಾಲಾದ ಸುನೀಲ್ ಶೆಟ್ಟಿ ಅವರ ಬಂಗಲೆಯಲ್ಲಿ ನಡೆಯಲಿರುವ ವಿವಾಹದ ವಿಧಿವಿಧಾನಗಳು ಜನವರಿ 21 ರಿಂದ ಪ್ರಾರಂಭವಾಗಲಿವೆ. ಕಾರ್ಯಕ್ರಮಕ್ಕಾಗಿ ಪಂಚತಾರಾ ರೆಸಾರ್ಟ್ ಕೂಡ ಬುಕ್ ಮಾಡಲಾಗಿದೆ. ರಾಹುಲ್ ಮತ್ತು ಅಥಿಯಾ ಅವರ ಮದುವೆಗೆ ಈಗಾಗಲೇ ಭರ್ಜರಿ ಸಿದ್ಧತೆಗಳು ಆರಂಭವಾಗಿದೆ.
ಸ್ಟಾರ್ ಜೋಡಿಯ ವಿವಾಹಕ್ಕೆ ಭರ್ಜರಿ ಸಿದ್ಧತೆ:
ಸುನೀಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಮತ್ತು ಭಾರತೀಯ ಕ್ರಿಕೆಟಿಗ ಕೆಎಲ್ ರಾಹುಲ್ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಮದುವೆಯ ಸಿದ್ಧತೆಗಳು ಭರದಿಂದ ಪ್ರಾರಂಭವಾಗಿವೆ. ಇದರ ಅಂಗವಾಗಿ ಕೆಲ್ ರಾಹುಲ್ ಅವರ ಭವ್ಯ ಬಂಗಲೆ ಸುಂದರ ದೀಪಗಳಿಂದ ಅಲಂಕರಿಸಲ್ಪಟ್ಟಿವೆ. ರಾಹುಲ್ ಮತ್ತು ಅಥಿಯಾ ಶೆಟ್ಟಿ ಜನವರಿ 21 ರಿಂದ ಜನವರಿ 23ರ ವರೆಗೆ ಖಂಡಾಲಾದಲ್ಲಿರುವ ಸುನೀಲ್ ಶೆಟ್ಟಿ ಅವರ ಮನೆಯಲ್ಲಿ ನಡೆಯಲಿದೆ. ಮದುವೆಯ ದಿನ ಹತ್ತಿರವಾಗುತ್ತಿದ್ದಂತೆ ಸುನೀಲ್ ಶೆಟ್ಟಿ ಅವರ ಮನೆಯನ್ನೂ ಸಹ ದೀಪಗಳಿಂದ ಅಲಂಕರಿಸಲ್ಪಟ್ಟಿದ್ದು, ಇದರ ವಿಡಿಯೋಗಳು ಎಲ್ಲಡೆ ಸಖತ್ ವೈರಲ್ ಆಗುತ್ತಿದೆ.
ಸ್ಟಾರ್ ಜೋಡಿಯ ವಸ್ತ್ರವಿನ್ಯಾಸ ಹೇಗಿರಲಿದೆ?:
ಮದುವೆಯಲ್ಲಿ ಸಾಂಪ್ರದಾಯಿಕ ಉಡುಗೆ ತೊಡಲು ಈ ಸ್ಟಾರ್ ಜೋಡಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ವರದಿಗಳ ಪ್ರಕಾರ, ಕೆಎಲ್ ಅವರ ಉಡುಪನ್ನು ಡಿಸೈನರ್ ರಾಹುಲ್ ವಿಜಯ್ ವಿನ್ಯಾಸಗೊಳಿಸಿದ್ದರೆ, ಅಥಿಯಾಳ ಬಟ್ಟೆಯನ್ನು ಆಮಿ ಪಟೇಲ್ ವಿನ್ಯಾಸಗೊಳಿಸಿದ್ದಾರೆ ಎನ್ನಲಾಗಿದೆ. ಮದುವೆಯ ದಿನದಂದು ರಾಯಲ್ ಲುಕ್ ಶೇರ್ವಾನಿಯಲ್ಲಿ ರಾಹುಲ್ ಕಾಣಿಸಿಕೊಳ್ಳಬಹುದು. ರಾಹುಲ್ ವಿಜಯ್ ಭಾರತ ಮತ್ತು ವಿದೇಶಗಳಲ್ಲಿ ಉನ್ನತ ಫ್ಯಾಷನ್ ಬ್ರಾಂಡ್ಗಳೊಂದಿಗೆ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ.
ಅವರು ನಟರಾದ ಅರ್ಜುನ್ ಕಪೂರ್, ವಿಕ್ಕಿ ಕೌಶಲ್ ಮತ್ತು ರಾಜ್ಕುಮಾರ್ ರಾವ್ ಅವರಿಗೆ ಬಟ್ಟೆಗಳನ್ನು ವಿನ್ಯಾಸಗೊಳಿಸಿದ್ದಾರೆ. ಕೆಎಲ್ ಮತ್ತು ಅಥಿಯಾ ಮದುವೆಗಾಗಿ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದರು. ದಂಪತಿಗಳು ತಮ್ಮ ಸಂಬಂಧವನ್ನು 2021ರಲ್ಲಿ ಅಧಿಕೃತಗೊಳಿಸಿದರು. ಕೆಎಲ್ ಮತ್ತು ಅಥಿಯಾ ತಮ್ಮ ರೋಮ್ಯಾಂಟಿಕ್ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.
ಇದನ್ನೂ ಓದಿ: Virat Kohli: ಒಂದೇ ಶತಕಕ್ಕೆ 5 ದಾಖಲೆಗಳು ಉಡೀಸ್! ಕಿಂಗ್ ಈಸ್ ಆಲ್ವೇಸ್ ಕಿಂಗ್ ಎಂದ ಫ್ಯಾನ್ಸ್
ರಾಹುಲ್ ವಿವಾಹಕ್ಕೆ ಸ್ಟಾರ್ಗಳ ಆಗಮನ:
ಸ್ಟಾರ್ ಜೋಡಿಗಳ ಮದುವೆಯಲ್ಲಿ ಅನೇಕ ದಿಗ್ಗಜ ಕ್ರಿಕೆಟಿಗರು ಹಾಜರಾಗಲಿದ್ದಾರಂತೆ. ಈ ವಿಶೇಷ ಪಟ್ಟಿಯಲ್ಲಿ ಭಾರತದ ಹಾಲಿ ನಾಯಕ ರೋಹಿತ್ ಶರ್ಮಾ, ಅನುಭವಿ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಮತ್ತು ಮಾಜಿ ನಾಯಕ ಎಂಎಸ್ ಧೋನಿ ಅವರ ಹೆಸರೂ ಸೇರಿದೆ. ಈ ಮೂವರು ಕ್ರಿಕೆಟಿಗರು ತಮ್ಮ ಇಡೀ ಕುಟುಂಬದೊಂದಿಗೆ ರಾಹುಲ್ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಬಾಲಿವುಡ್ನ ಸ್ಟಾರ್ಗಳೂ ಸಹ ಮದುವೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.
ಅಥಿಯಾ-ರಾಹುಲ್ ಭವ್ಯ ಬಂಗಲೆ:
ಮಾಧ್ಯಮ ವರದಿಗಳ ಪ್ರಕಾರ, ಮದುವೆಗೆ ಮುಂಚೆಯೇ ಈ ತಾರಾ ಜೋಡಿ ಮುಂಬೈನಲ್ಲಿ ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ತೆಗೆದುಕೊಂಡಿದೆ. ಈ 4BHK ಅಪಾರ್ಟ್ಮೆಂಟ್ ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿ ಸಮುದ್ರ ತೀರದಲ್ಲಿದೆ ಎಂದು ಹೇಳಲಾಗುತ್ತಿದೆ. ಈ ಅಪಾರ್ಟ್ಮೆಂಟ್ಗಾಗಿ ಸ್ಟಾರ್ ಜೋಡಿಗಳು ಪ್ರತಿ ತಿಂಗಳು ಸುಮಾರು 10 ಲಕ್ಷ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ ಎಂದು ವರದಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ