ಭಾರತ ತಂಡದ ಆಟಗಾರ ಕೆಎಲ್ ರಾಹುಲ್ ಇತ್ತೀಚೆಗೆ ಬಾಲಿವುಡ್ ನಟಿ ಅಥಿಯಾ ಶೆಟ್ಟಿ (KL Rahul-Athiya) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಎಲ್ ರಾಹುಲ್ ತನ್ನ ಗೆಳತಿ ಅಥಿಯಾ ಶೆಟ್ಟಿಯನ್ನು ವಿವಾಹವಾದರು. ಒಂದು ವಾರಕ್ಕೂ ಹೆಚ್ಚು ಕಾಲ ಕೆಎಲ್-ಅಥಿಯಾ ಮದುವೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು ಹೀಗಿರುವಾಗ ನೆರೆಯ ರಾಷ್ಟ್ರವಾದ ಪಾಕಿಸ್ತಾನದಲ್ಲಿಯೂ (Pakistan) ಈ ಸ್ಟಾರ್ ಜೋಡಿಯ ಮದುವೆಯ ಕುರಿತು ಸುದ್ದಿಯಾಗಿದೆ. ಹೌದು, ಪಾಕಿಸ್ತಾನದಲ್ಲಿ ಕೂಡ ಕೆಎಲ್ ರಾಹುಲ್ (KL Rahul) ಅವರ ಮದುವೆ ವಿಚಾರ ಅಲ್ಲಿನ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಸದ್ಯ ಪಾಕ್ ಮಾಧ್ಯಮದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಇಬ್ಬರು ಆ್ಯಂಕರ್‌ಗಳು ಕೆಎಲ್ ರಾಹುಲ್‌ಗೆ ಮದುವೆಯಲ್ಲಿ ನೀಡಲಾದ ಉಡುಗೊರೆಗಳ ಬಗ್ಗೆ ಮಾತನಾಡಿದ್ದಾರೆ.
ಪಾಕ್ನಲ್ಲಿಯೂ ಸುದ್ದಿಯಾಯ್ತು ರಾಹುಲ್ ವಿವಾಹ:
ಈ ವಿಡಿಯೋ ಪಾಕಿಸ್ತಾನದ ಪ್ರಸಿದ್ಧ ಸುದ್ಧಿ ವಾಹಿನಿ ಸಂಬಂಧಿಸಿದೆ. ಕೆಎಲ್ ರಾಹುಲ್ ಮದುವೆಗೆ ಸಿನಿಮಾ ನಟ ಸುನೀಲ್ ಶೆಟ್ಟಿ ತಮ್ಮ ಮಗಳಿಗೆ 50 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಆ್ಯಂಕರ್‌ಗಳು ಮಾತನಾಡಿಕೊಂಡಿದ್ದಾರೆ. ವಿರಾಟ್ ಕೊಹ್ಲಿ 2 ಕೋಟಿ ಬೆಲೆ ಬಾಳುವ ಕಾರು ನೀಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ 80 ಲಕ್ಷ ಬೆಲೆಯ ಬೈಕ್ ನೀಡಿದ್ದಾರೆ. ಸಲ್ಮಾನ್ ಖಾನ್ ಕೂಡ ದುಬಾರಿ ಉಡುಗೊರೆ ನೀಡಿದ್ದಾರೆ ಎಂದು ಸುದ್ದಿಯನ್ನು ಓದುವಾಗ ಇಬ್ಬರೂ ಆಂಕರ್‌ಗಳು ಆಶ್ಚರ್ಯಗೊಂಡಿದ್ದಾರೆ.
"Abdullah start ho jao"pic.twitter.com/Le7BwYKXPY
— Shivani Shukla (@iShivani_Shukla) January 30, 2023
ದುಬಾರಿ ಗಿಫ್ಟ್ ಹಿಂದಿ ಕಹಾನಿ:
ಅಥಿಯಾ ತಂದೆ ಸುನೀಲ್ ಶೆಟ್ಟಿ ಪರ ವಕ್ತಾರರು ಈ ಜೋಡಿಯ ಮದುವೆಗೆ ಬಂದಿದೆ ಎನ್ನಲಾದ ಗಿಫ್ಟ್ಗಳ ಬಗ್ಗೆ ಹೇಳಿಕೆ ನೀಡಿದ್ದಾರೆ. ದುಬಾರಿ ಗಿಫ್ಟ್ಗಳ ಬಗ್ಗೆ ಕುರಿತ ಎಲ್ಲಾ ವರದಿಗಳು ಆಧಾರರಹಿತವಾಗಿದೆ ಎಂದು ಹೇಳಿದ್ದಾರೆ. ಹೌದು, ಅಥಿಯಾ-ಕೆಎಲ್ ರಾಹುಲ್ ಮದುವೆಯಲ್ಲಿ ದುಬಾರಿ ಉಡುಗೊರೆ ಬಗ್ಗೆ ಹರಿದಾಡ್ತಿರುವ ಸುದ್ದಿಗಳು ಸುಳ್ಳು ಎಂದು ಕುಟುಂಬಸ್ಥರೊಬ್ಬರು ತಿಳಿಸಿದ್ದಾರೆ. ಇನ್ನು, ಸುನೀಲ್ ಶೆಟ್ಟಿ ಫಾರ್ಮ್ ಹೌಸ್ ನಲ್ಲಿ ನಡೆದ ಮದುವೆಗೆ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದರು. ಈ ವೇಳೆ ಕೆಎಲ್ ರಾಹುಲ್, ಅಥಿಯಾ ಜೋಡಿಗೆ ಬಾಲಿವುಡ್ ಹಾಗೂ ಕ್ರಿಕೆಟಿಗರು ಕೋಟಿ ಕೋಟಿ ಉಡುಗೊರೆಯನ್ನೇ ನೀಡಿದ್ದಾರೆ ಎಂದು ವರದಿಯಾಗಿತ್ತು.
ಸದ್ಯಕ್ಕಿಲ್ಲ ಸ್ಟಾರ್ ಜೋಡಿಯ ಹನಿಮೂನ್:
ರಾಹುಲ್ ಜನವರಿ 23ರಂದು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದಕ್ಕಾಗಿ ಕೆಎಲ್ ರಾಹುಲ್ ಬಿಸಿಸಿಐನಿಂದ ರಜೆ ಪಡೆದುಕೊಂಡಿದ್ದರು. ನ್ಯೂಜಿಲೆಂಡ್ ವಿರುದ್ಧದ ಇತ್ತೀಚಿನ ODI ಮತ್ತು T20 ಸರಣಿಯಿಂದ ಆಯ್ಕೆಗಾರರು ಅವರನ್ನು ಹೊರಗಿಟ್ಟಿದ್ದರು. ಈಗ ಅವರು ಮುಂದಿನ ತಿಂಗಳು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮತ್ತೆ ಕಣಕ್ಕಿಳಿಯಲಿದ್ದಾರೆ. ಫೆಬ್ರವರಿ-ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, ಇದಕ್ಕಾಗಿ ತಂಡವನ್ನು ಆಯ್ಕೆ ಮಾಡಲಾಗಿದೆ. 4 ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ತಂಡದಲ್ಲಿ ಕೆಎಲ್ ರಾಹುಲ್ ಹೆಸರಿದೆ. ಹೀಗಾಗಿ ಮದುವೆಯ ನಂತರ ರಾಹುಲ್ ಅಥಿಯಾ ಹನಿಮೂನ್ ಹೋಗುತ್ತಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ