• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • KKR vs LSG: ಕೋಲ್ಕತ್ತಾ ವಿರುದ್ಧ ಲಕ್ನೋಗೆ ರೋಚಕ ಜಯ, ಪ್ಲೇಆಫ್​ಗೆ ಲಗ್ಗೆಯಿಟ್ಟ 3ನೇ ಟೀಂ

KKR vs LSG: ಕೋಲ್ಕತ್ತಾ ವಿರುದ್ಧ ಲಕ್ನೋಗೆ ರೋಚಕ ಜಯ, ಪ್ಲೇಆಫ್​ಗೆ ಲಗ್ಗೆಯಿಟ್ಟ 3ನೇ ಟೀಂ

ಲಕ್ನೋಗೆ ರೋಚಕ ಜಯ

ಲಕ್ನೋಗೆ ರೋಚಕ ಜಯ

KKR vs LSG: ಕೆಕೆಆರ್​ ತಂಡವು ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್​ ಗಳಿಸುವ ಮೂಲಕ ಕೇವಲ 1 ರನ್​ನಿಂದ ಸೋಲನ್ನಪ್ಪಿತು. ಈ ಮೂಲಕ ಲಕ್ನೋ ಸೂಪರ್​ ಜೈಂಟ್ಸ್ ತಂಡ ಪ್ಲೇಆಫ್​ಗೆ ಎಂಟ್ರಿಕೊಟ್ಟಿದೆ.

  • Share this:

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಮತ್ತೊಮ್ಮೆ ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟ್ಸ್​ಮನ್ ನಿಕೋಲಸ್ ಪೂರನ್ ಅದ್ಭುತ ಇನ್ನಿಂಗ್ಸ್‌ನೊಂದಿಗೆ ತಂಡಕ್ಕೆ ನೆರವಾದರು. ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 176 ರನ್ ಗಳಿಸಿತು. ಈ ಮೂಲಕ ಮಹತ್ವದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತದ ಟಾರ್ಗೆಟ್​ ನೀಡಿದರು. ಈ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್​ ತಂಡವು ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್​ ಗಳಿಸುವ ಮೂಲಕ ಕೇವಲ 1 ರನ್​ನಿಂದ ಸೋಲನ್ನಪ್ಪಿತು. ಈ ಮೂಲಕ ಲಕ್ನೋ ಸೂಪರ್​ ಜೈಂಟ್ಸ್ ತಂಡ ಪ್ಲೇಆಫ್​ಗೆ ಎಂಟ್ರಿಕೊಟ್ಟಿದೆ.


ಮಿಂಚಿದ ಜೇಸನ್​ ರಾಯ್:


ಇನ್ನು, ಲಕ್ನೋ ಸೂಪರ್​ ಜೈಂಟ್ಸ್ ನೀಡಿದ ಟಾರ್ಗೆಟ್​ ಬೆನ್ನಟ್ಟಿದ ಕೋಲ್ಕತ್ತಾ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಕೆಕೆಆರ್​ ಪರ ಇಂದು ಆರಂಭಿಕರಾಗಿ ಕಣಕ್ಕಿಳಿದ ಜೇಸನ್ ರಾಯ್ ಮತ್ತು ವೆಂಕಟೇಶ್​ ಅಯ್ಯರ್ ಉತ್ತಮ ಜೊತೆಯಾಟವಾಡಿದರು. ಮೊದಲ ವಿಕೆಟ್​ಗೆ 61 ರನ್ ಕಲೆಹಾಕಿದರು. ಈ ವೇಳೆ ವೆಂಕಟೇಶ್​ ಅಯ್ಯರ್ 15 ಎಸೆತದಲ್ಲಿ ಸಿಕ್ಸ್ ಮತ್ತು 3 ಫೋರ್​ ಮೂಲಕ 24 ರನ್, ಜೇಸನ್ ರಾಯ್ 28 ಎಸೆತದಲ್ಲಿ 1 ಸಿಕ್ಸ್ ಮತ್ತು 7 ಬೌಂಡರಿ ಮೂಲಕ 45 ರನ್​ ಗಳಿಸಿ ವಿಕೆಟ್ ಒಪ್ಪಿದರು. ನಾಯಕ ನಿತೀಶ್​ ರಾಣಾ 8 ರನ್, ಗರ್ಬಾಜ್​ 10 ರನ್, ಶಾರ್ದೂಲ್​ ಠಾಕೂರ್​ 3 ರನ್, ಸುನೀಲ್​ ನರೇನ್​ 1 ರನ್, ರಿಂಕು ಸಿಂಗ್​ 67 ರನ್​ ಗಳಿಸಿದರೂ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಲಿಲ್ಲ.


ಮತ್ತೆ ಅಬ್ಬರಿಸಿದ ಪೂರನ್:


ಇನ್ನು, ಲಕ್ನೋ ಸೂಪರ್​ ಜೈಂಟ್ಸ್ ಪರ ನಿಕೋಲಸ್ ಪೂರನ್ (30 ಎಸೆತಗಳಲ್ಲಿ 58; 4 ಬೌಂಡರಿ, 5 ಸಿಕ್ಸರ್) ಅಬ್ಬರಿಸುವ ಮೂಲಕ ತಂಡಕ್ಕೆ ನೆರವಾದರು. ಕ್ವಿಂಟನ್ ಡಿ ಕಾಕ್ (28) ಮತ್ತು ಪ್ರೇರಕ್ ಮಂಕಡ್ (26) ರನ್​ ಗಳಿಸಿದರು. ಸುನಿಲ್ ನರೈನ್ ಮತ್ತು ವೈಭವ್ ಅರೋರಾ ತಲಾ ಎರಡು ವಿಕೆಟ್ ಪಡೆದರು. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಲಕ್ನೋ ಸೂಪರ್ ಜೈಂಟ್ಸ್ ಸತತವಾಗಿ ವಿಕೆಟ್ ಕಳೆದುಕೊಂಡಿತು. ಕರಣ್ ಶರ್ಮಾ (3) ವಿಫಲರಾದರು. ಆದರೆ ಕ್ವಿಂಟನ್ ಡಿ ಕಾಕ್ ಮತ್ತು ಪ್ರೇರಕ್ ಮಂಕಡ್ ಕೆಲ ಸಮಯ ಉತ್ತಮ ಜೊತೆಯಾಟವಾಡಿದರು. ಆದರೆ ಪ್ರೇರಕ್ ನಿರ್ಣಾಯಕ ಕ್ಷಣದಲ್ಲಿ ಔಟಾದರು.


ಇದನ್ನೂ ಓದಿ: IPL 2023 Playoffs: ಇನ್ನೂ ಮುಗಿಯದ ಪ್ಲೇಆಫ್​ ಲೆಕ್ಕಾಚಾರ, ಮುಂಬೈ ಸೋತ್ರೆ ಆರ್​ಸಿಬಿಗೆ ಭರ್ಜರಿ ಲಾಭ


ಮಾರ್ಕಸ್ ಸ್ಟೊಯಿನಿಸ್ (0) ಮತ್ತು ಕೃನಾಲ್ ಪಾಂಡ್ಯ (9) ವಿಫಲರಾದರು. ಭಾರಿ ನಿರೀಕ್ಷೆ ಹೊಂದಿದ್ದ ಕ್ವಿಂಟನ್ ಡಿ ಕಾಕ್ ಕೂಡ ಬೇಗನೇ ಔಟಾದರು. ಲಕ್ನೋ ಒಂದು ಹಂತದಲ್ಲಿ 71 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಕ್ರೀಸ್ ಗೆ ಬಂದ ಪೂರನ್ ತಂಡಕ್ಕೆ ಆಸರೆಯಾದರು. ಬದೋನಿ (25) ಜತೆ 6ನೇ ವಿಕೆಟ್‌ಗೆ 74 ರನ್‌ ಸೇರಿಸಿದರು. ಈ ಅನುಕ್ರಮದಲ್ಲಿ ಪೂರನ್ ಅರ್ಧಶತಕ ಪೂರೈಸಿದರು. ಕೊನೆಯಲ್ಲಿ ಕೃಷ್ಣಪ್ಪ ಗೌತಮ್ 6 ಮತ್ತು 4 ವಿಕೆಟ್‌ಗಳೊಂದಿಗೆ ಲಕ್ನೋ ಇನ್ನಿಂಗ್ಸ್‌ಗೆ ಅಂತ್ಯ ಹಾಡಿದರು.




ಐಪಿಎಲ್ 2023 ಪ್ಲೇಆಫ್​ ಲೆಕ್ಕಾಚಾರ:

top videos


    ಐಪಿಎಲ್ 2023ರಲ್ಲಿ ಈಗಾಗಲೇ ಗುಜರಾತ್​ ಟೈಟನ್ಸ್ ಮತ್ತು ಚೆನ್ನೈ ಸೂಪರ್​ ಕಿಂಗ್ಸ್ ತಂಡಗಳು ಪ್ಲೇಆಫ್​ಗೆ ತಲುಪಿದೆ. ಈ ಎರಡೂ ತಂಡಗಳು ಅಗ್ರ 2 ಸ್ಥಾನದಲ್ಲಿ ಇರುವುದರಿಂದ ಪ್ಲೇಆಫ್​ನ ಮೊದಲ ಪಂದ್ಯದಲ್ಲಿಯೇ ಸೆಣಸಾಡಲಿದೆ. ಈ ಪಂದ್ಯದಲ್ಲಿ ಸೋತ ತಂಡಕ್ಕೆ ಕ್ವಾಲಿಫೈಯರ್​ 2ರಲ್ಲಿ ಅವಕಾಶವಿದ್ದರೆ ಅತ್ತ ಗೆದ್ದ ತಂಡ ನೇರವಾಗಿ ಫೈನಲ್​ಗೆ ತಲುಪಲಿದೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು