ಇಂಡಿಯನ್ ಪ್ರೀಮಿಯರ್ ಲೀಗ್‌ನ ಇಂದಿನ 2ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (KKR vs LSG) ನಡುವೆ ಮಹತ್ವದ ಪಂದ್ಯ ನಡೆಯಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ (Eden Gardens) ಲಕ್ನೋ ಸೂಪರ್ ಜೈಂಟ್ಸ್ ಅನ್ನು ಎದುರಿಸಲಿದೆ. ಇಲ್ಲಿ ಉಭಯ ತಂಡಗಳು ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ. ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸಲು ಈ ಪಂದ್ಯವು ಉಭಯ ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದೆ. ಈಗಾಗಲೇ ಟಾಸ್ ಆಗಿದ್ದು, ಟಾಸ್ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ನಿತೀಶ್ ರಾಣಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ಉಭಯ ತಂಡಗಳಿಗೆ ಮಹತ್ವದ ಪಂದ್ಯ:
ಕೋಲ್ಕತ್ತಾ ಗೆದ್ದರೆ 14 ಅಂಕಗಳಿಗೆ ತಲುಪಲಿದೆ. ಆದರೆ ಲಕ್ನೋ ತಂಡವು ಇಲ್ಲಿ ಗೆದ್ದು 17 ಅಂಕದೊಂದಿಗೆ ಪ್ಲೇಆಫ್ಗೆ ಲಗ್ಗೆಯಿಡಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇದುವರೆಗೆ 13-13 ಪಂದ್ಯಗಳನ್ನು ಆಡಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಕೊನೆಯ ಲೀಗ್ ಪಂದ್ಯದಲ್ಲಿ ಆಡಲಿವೆ. ಈ ಋತುವಿನಲ್ಲಿ ಉಭಯ ತಂಡಗಳ ನಡುವೆ ಮೊದಲ ಹಣಾಹಣಿ ಇದಾಗಿದೆ. ಈ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಲಕ್ನೋ ತಂಡವು ಪ್ರಸಿದ್ಧ ಫುಟ್ಬಾಲ್ ಕ್ಲಬ್ ಮೋಹನ್ ಬಗಾನ್‌ನ ಮರೂನ್ ಜರ್ಸಿಯಲ್ಲಿ ಆಡಲಿದೆ.
ಹವಾಮಾನ ಮುನ್ಸೂಚನೆ:
ಕೋಲ್ಕತ್ತಾದ ಹವಾಮಾನವು ಉತ್ತಮವಾಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಐಪಿಎಲ್ ಪಂದ್ಯದ ವೇಳೆ ಮಳೆಯು ಹಾಳಾಗುವ ಸಾಧ್ಯತೆಯಿಲ್ಲ. 20 ಓವರ್‌ಗಳ ಘರ್ಷಣೆಯ ಸಮಯದಲ್ಲಿ ಗಾಳಿಯ ವೇಗ ಗಂಟೆಗೆ 18 ಕಿ.ಮೀ ತಾಪಮಾನವು ಸುಮಾರು 32 ಡಿಗ್ರಿ ಸೆಲ್ಸಿಯಸ್‌ನಿಂದ 34 ಡಿಗ್ರಿ ಸೆಲ್ಸಿಯಸ್ ಆಗಿರಬಹುದು. ಆದರೆ ಆರ್ದ್ರತೆಯು ಸುಮಾರು 80 ಪ್ರತಿಶತದಷ್ಟು ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: IPL 2023: ಆರ್ಸಿಬಿಗಿದೆ ಪ್ಲೇಆಫ್ ಅದೃಷ್ಟ, ಬಟ್ ಯಾಮಾರಿದ್ರೆ ರಾಜಸ್ಥಾನ್ಗೆ ಸಿಗಲಿದೆ ಚಾನ್ಸ್!
ಪ್ಲೇಆಫ್ ಲೆಕ್ಕಾಚಾರ:
ಇನ್ನು, ಐಪಿಎಲ್ 2023ರ ಪ್ಲೇಆಫ್ ಹಂತಕ್ಕೆ ಈಗಾಗಲೇ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಲಗ್ಗೆ ಇಟ್ಟಿದೆ. ಇದೀಗ 15 ಅಂಕ ಹೊಂದಿರುವ ಲಕ್ನೋ ಸೂಪರ್ ಜೈಂಟ್ಸ್ ಸಹ ಕೆಕೆಆರ್ ವಿರುದ್ಧ ಗೆದ್ದು ಪ್ಲೇಆಫ್ಗೆ ತಲುಪಲು ಸಿದ್ಧವಾಗಿದೆ. ಇತ್ತ ಕೋಲ್ಕತ್ತಾ ತಂಡ ಸಹ ಪ್ಲೇಆಫ್ ಆಸೆಯಿದೆ. ಆದರೆ ಕೆಕೆಆರ್ಗೆ ಈ ಹಾದಿ ಸಾಕಷ್ಟು ಕಠಿಣವಾಗಿದ್ದು, ರನ್ರೇಟ್ ಮೈನಸ್ನಲ್ಲಿದೆ. ಗೆದ್ದರೂ ಇತರ ತಂಡಗಳ ಫಲಿತಾಂಶಕ್ಕಾಗಿ ಕಾಯಬೇಕಿದೆ.
ಲಕ್ನೋ - ಕೋಲ್ಕತ್ತಾ ಪ್ಲೇಯಿಂಗ್ 11:
ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ 11: ರಹಮಾನುಲ್ಲಾ ಗುರ್ಬಾಜ್(w), ಜೇಸನ್ ರಾಯ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ(ಸಿ), ಆಂಡ್ರೆ ರಸೆಲ್, ರಿಂಕು ಸಿಂಗ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.
ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11: ಕ್ವಿಂಟನ್ ಡಿಕಾಕ್ (ವಾಕ್), ಕರಣ್ ಶರ್ಮಾ, ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ (ಸಿ), ಆಯುಷ್ ಬಡೋನಿ, ಕೃಷ್ಣಪ್ಪ ಗೌತಮ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಮೊಹ್ಸಿನ್ ಖಾನ್.
ಇಂಪ್ಯಾಕ್ಟ್ ಪ್ಲೇಯರ್ಸ್:
ಕೋಲ್ಕತ್ತಾ ನೈಟ್ ರೈಡರ್ಸ್ ಇಂಪ್ಯಾಕ್ಟ್ ಪ್ಲೇಯರ್ಸ್: ಸುಯಶ್ ಶರ್ಮಾ, ಮನ್ದೀಪ್ ಸಿಂಗ್, ಅನುಕುಲ್ ರಾಯ್, ಎನ್ ಜಗದೀಸನ್, ಡೇವಿಡ್ ವೈಸ್.
ಲಕ್ನೋ ಸೂಪರ್ ಜೈಂಟ್ಸ್ ಇಂಪ್ಯಾಕ್ಟ್ ಪ್ಲೇಯರ್ಸ್: ಕೈಲ್ ಮೇಯರ್ಸ್, ಯಶ್ ಠಾಕೂರ್, ಡೇನಿಯಲ್ ಸಾಮ್ಸ್, ಯುದ್ವೀರ್ ಸಿಂಗ್ ಚರಕ್, ದೀಪಕ್ ಹೂಡಾ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ