ಬೆಂಗಳೂರು, ಡಿ. 13: ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಪ್ರೋ ಕಬಡ್ಡಿ ಲೀಗ್ ಟೂರ್ನಿಗೆ ಬೆಂಗಳೂರು ಬುಲ್ಸ್ ಸಖತ್ತಾಗಿ ಸಿದ್ಧವಾಗುತ್ತಿದೆ. ಸೂಪರ್ ಸ್ಟಾರ್ ರೇಡರ್ ಪವನ್ ಕುಮಾರ್ ಶೆಹ್ರಾವತ್ ಅವರ ಜೊತೆ ಇನ್ನೂ ಕೆಲ ಪ್ರಮುಖ ಆಕ್ರಮಣಕಾರಿ ರೇಡರ್ಗಳನ್ನ ಬುಲ್ಸ್ ತಂಡ ಹರಾಜಿನಲ್ಲಿ ಕೊಂಡು ತಂದಿದೆ. ಈಗ ಫುಲ್ ಚಾರ್ಜ್ ಆಗಿರುವ ಬೆಂಗಳೂರು ಬುಲ್ಸ್ನ ಫ್ಯಾನ್ಸ್ಗೆ ಕಿಚ್ಚ ಸುದೀಪ್ ಸೂಪರ್ ಚಾರ್ಜ್ ಕೊಟ್ಟಿದ್ಧಾರೆ. ಬೆಂಗಳೂರು ಬುಲ್ಸ್ ತಂಡವನ್ನ ಬೆಂಬಲಿಸಿ ಕಿಚ್ಚ ಸುದೀಪ್ ಘರ್ಜಿಸಿದ್ದಾರೆ. ಒಂದು ವಿಡಿಯೋ ಮಾಡಿ ಬುಲ್ಸ್ ತಂಡವನ್ನ ಬೆಂಬಲಿಸಿದ್ಧಾರೆ.
ಕುತೂಹಲವೆಂದರೆ ಕಿಚ್ಚ ಸುದೀಪ್ ಅವರ ಈ ಬೆಂಗಳೂರು ಬುಲ್ಸ್ ಪ್ರೋಮೋವನ್ನು ಸೌತ್ ಆಫ್ರಿಕಾದ ಮಾಜಿ ಕ್ರಿಕೆಟಿಗ ಹರ್ಷೆಲ್ ಗಿಬ್ಸ್ ಮೆಚ್ಚಿಕೊಂಡಿದ್ದಾರೆ. ಚೆನ್ನಾಗಿ ಕಾಣಿಸುತ್ತಿರುವಿರಿ ಗೆಳೆಯ ಎಂದು ಗಿಬ್ಸ್ ಬರೆದಿದ್ಧಾರೆ. ಗಿಬ್ಸ್ ನಿಮಗೆ ನೆನಪಿರಬಹುದು, ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಆರು ಬಾಲ್ಗೆ ಆರು ಸಿಕ್ಸರ್ ಭಾರಿಸಿದ ಮೊದಲ ಬ್ಯಾಟರ್ ಅವರು.
View this post on Instagram
ಕಿಚ್ಚನ ಪ್ರೋಮೋದಲ್ಲಿ ಏನಿದೆ?
ಪೈಲ್ವಾನ್ ಸಿನಿಮಾ ರೀತಿಯ ದೃಶ್ಯಗಳು ಮತ್ತು ಬೆಂಗಳೂರು ಬುಲ್ಸ್ ಆಟಗಾರರರ ಆಟದ ದೃಶ್ಯಗಳು ಮೇಳೈಸಿ ಈ ವಿಡಿಯೋದಲ್ಲಿ ಚಿತ್ರೀಕರಿಸಲಾಗಿದೆ. ಪುಟ್ಟ ಹುಡುಗರಿಗೆ ಕಿಚ್ಚ ಸುದೀಪ್ ಕಬಡ್ಡಿ ಹೇಳಿಕೊಡುತ್ತಾರೆ. “ಕನ್ನಡದವ್ರಿಗೆ ಗೂಳಿ ಅಂದ್ರೆ ಬರೀ ಗೂಳಿ ಅಲ್ಲಾರೀ… ಕಣ್ಣಲ್ಲಿ ಕಣ್ಣಿಟ್ರೆ ಅದು ತಾಕತ್ತು….” ಎಂದು ಶುರುವಾಗುವ ಕಿಚ್ಚನ ಡೈಲಾಗ್, ಮೀಟ್ರೈತೆ ಅಂದ್ರೆ ಇತ್ ಕಡೆ ಬನ್ನಿ ಎಂದು ಸಾಗುತ್ತದೆ.
ಇದನ್ನೂ ಓದಿ: Video: ಬೆಂಗಳೂರು ಬುಲ್ಸ್ ಪ್ರೋಕಬಡ್ಡಿ ಚಾಂಪಿಯನ್ ಆಗಿದ್ದು ಹೀಗೆ, ರೋಚಕ ಫೈನಲ್ ವಿಡಿಯೋ
ಬುಲ್ಸ್ ಅಂದ್ರೆ ಬರೀ ಗೂಳಿ ಅಲ್ಲ ಕಣ್ರೀ, ನಮ್ಮ ಆರು ಕೋಟಿ ಕನ್ನಡಿಗರ ಗಮತ್ತು, ಕೊಂಬು ಎತ್ತು, ಮಾಡು ಸದ್ದು, ನಮ್ಮೂರವರ ಕಬಡ್ಡಿ ನೋಡು ಎಂದು ಹುರಿದುಂಬಿಸುವ ಕಿಚ್ಚ, ನಮ್ಮ ಊರು, ನಮ್ಮ ಆಟ, ನಮ್ಮ ಹುಡುಗ್ರು ನಮ್ಮ ಬುಲ್ಸ್ ಎಂದು ಹೇಳುತ್ತಾರೆ.
ಕೆಣಕಿದ್ರೆ ಗೆಲ್ಲಬಹುದು ಗುರಾಯಿಸಿದ್ರೆ ಗುಮ್ಮಬಹುದು 👊
ಕಬಡ್ಡಿ ಕಲಿಗಳ ಹೈ ವೋಲ್ಟೇಜ್ ಹೋರಾಟಕ್ಕೆ ರೆಡಿಯಾಗಿದೆ PKL 🥳
ನಮ್ಮ @bengalurubulls ಆಟ ನೋಡಿ ಅಂತಿದ್ದಾರೆ @kicchasudeep 🙌
👉 ವೀಕ್ಷಿಸಿ, #vivoProKabaddi
🗓️ ಡಿ. 22 ರಿಂದ
📺 #StarSports1Kannada & Disney + Hotstar pic.twitter.com/MsBvGYE8S6
— Star Sports Kannada (@StarSportsKan) December 13, 2021
ಪ್ರೋಕಬಡ್ಡಿ ಲೀಗ್ ಯಾವಾಗಿನಿಂದ:
ಈ ಬಾರಿ ನಡೆಯಲಿರುವ ಪ್ರೋ ಕಬಡ್ಡಿ ಲೀಗ್ 8ನೇ ಸೀಸನ್ನದ್ದಾಗಿದೆ. ಒಟ್ಟು 12 ತಂಡಗಳು ಇದ್ದು ಎರಡು ಸುತ್ತುಗಳ ಪಂದ್ಯಗಳನ್ನ ಆಡಲಿವೆ. ಎಲ್ಲಾ ತಂಡಗಳ ಬೇರೆಲ್ಲಾ ತಂಡಗಳನ್ನ ಎರಡೆರಡು ಬಾರಿ ಎದುರಿಸುತ್ತವೆ. ಮೊದಲ ಹಂತದ ಸ್ಪರ್ಧೆಗಳು ಡಿ. 22ರಿಂದ ಜ. 20ರವರೆಗೆ ನಡೆಯಲಿವೆ.
ಟಿವಿ ಪ್ರಸಾರ:
ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ಶೆರಟಾನ್ ಹೋಟೆಲ್ನ ಒಳಾಂಗಣದಲ್ಲಿ ಈ ಸೀಸನ್ನ ಎಲ್ಲಾ ಪಂದ್ಯಗಳು ನಡೆಯಲಿವೆ. ಆದರೆ, ಕೋವಿಡ್ ಕಾರಣಕ್ಕೆ ಪ್ರೇಕ್ಷಕರಿಗೆ ಮೈದಾನದೊಳಗೆ ಪ್ರವೇಶ ಇರುವುದಿಲ್ಲ. ಸ್ಟಾರ್ ಸ್ಪೋರ್ಟ್ಸ್ ವಾಹಿನಿಗಳಲ್ಲಿ ನೇರ ಪ್ರಸಾರ ಇರುತ್ತದೆ. ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲೂ ಪಂದ್ಯಗಳನ್ನ ಕನ್ನಡ ವೀಕ್ಷಕವಿವರಣೆಯೊಂದಿಗೆ ನೋಡಬಹುದು. ಡಿಜಿಟಲ್ನಲ್ಲಿ ಹಾಟ್ ಸ್ಟಾರ್ ಆ್ಯಪ್ ಮತ್ತು ವೆಬ್ಸೈಟ್ನಲ್ಲಿ ಲೈವ್ ಸ್ಟ್ರೀಮಿಂಗ್ ಇರುತ್ತದೆ.
ಇದನ್ನೂ ಓದಿ: PKL 8- ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ ಬೆಂಗಳೂರು ಬುಲ್ಸ್; ಇಲ್ಲಿದೆ ಅದರ ಬಲಾಬಲ
ಬೆಂಗಳೂರು ಬುಲ್ಸ್ ಒಮ್ಮೆ ಚಾಂಪಿಯನ್:
ಈ ಬಾರಿ ನಡೆಯುತ್ತಿರುವುದು ಎಂಟನೇ ಸೀಸನ್. 2018ರಲ್ಲಿ ನಡೆದ ಆರನೇ ಸೀಸನ್ನಲ್ಲಿ ಬೆಂಗಳೂರು ಬುಲ್ಸ್ ಚಾಂಪಿಯನ್ ಆಗಿತ್ತು. ಪವನ್ ಕುಮಾರ್ ಶೆಹ್ರಾವತ್ ಸೂಪರ್ ಆಟ ಆಡಿ ಬುಲ್ಸ್ ತಂಡಕ್ಕೆ ಮೊದಲ ಬಾರಿಗೆ ಪ್ರಶಸ್ತಿ ಸಿಗುವಂತೆ ಮಾಡಿದರು. 2019ರಲ್ಲಿ ನಡೆದ ಏಳನೇ ಸೀಸನ್ನಲ್ಲಿ ಬುಲ್ಸ್ ಪ್ಲೇ ಆಫ್ ಹಂತದವರೆಗೂ ಹೋಗಿ ನಿರ್ಗಮಿಸಿದತು. ಈಗ ಎರಡು ವರ್ಷದ ಬಳಿಕ ನಡೆಯುತ್ತಿರುವ ಎಂಟನೇ ಸೀಸನ್ನಲ್ಲಿ ಚಾಂಪಿಯನ್ ಆಗುವ ಫೇವರಿಟ್ ತಂಡಗಳಲ್ಲಿ ಬೆಂಗಳೂರು ಬುಲ್ಸ್ ಕೂಡ ಒಂದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ