ಸಿನಿಮಾ ಶೂಟಿಂಗ್ ನಡುವೆ ಸ್ಯಾಂಡಲ್‌ವುಡ್ (Sandalwood) ಮಂದಿ ಇದೀಗ ಕ್ರಿಕೆಟ್ ಆಡಲು ಸಿದ್ಧರಾಗಿದ್ದಾರೆ. ಕೆಸಿಸಿ 3ನೇ ಸೀಸನ್ (KCC 3rd Season) ಆರಂಭಕ್ಕೆ ಮುಹೂರ್ತ ಪಿಕ್ಸ್ ಆಗಿದೆ. ಕೆಸಿಸಿ 2023ರ ಹೊಸ ಆವೃತ್ತಿಯು ಫೆಬ್ರವರಿ (February Month) 24 ಮತ್ತು 25ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ ನಟ ಸುದೀಪ್ (Actor Sudeep) ಹೇಳಿದ್ದಾರೆ. ಅಲ್ಲದೇ ಎಲ್ಲಾ ತಂಡಗಳಲ್ಲಿಯೂ ಈ ಬಾರಿ ಸ್ಟಾರ್ ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿಯೂ ಗೇಲ್, ರೈನಾ ಸಹ ಈ ಬಾರಿ ಕೆಸಿಸಿ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.
ಕೆಸಿಸಿ ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗರು:
ಇನ್ನು, ಈ ಬಾರಿ ಕೆಸಿಸಿ ಮತ್ತಷ್ಟು ರಂಗು ಹೆಚ್ಚಲಿದೆ. ಹೌದು, ಏಕೆಂದರೆ ಈ ಬಾರಿ ಕೆಸಿಸಿ ಟೂರ್ನಿಗೆ ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗರು ಸಹ ಭಾಗಿಯಾಗಲಿದ್ದಾರೆ. ಕ್ರಿಸ್ ಗೇಲ್, ಸುರೇಶ್ ರೈನಾ, ಬ್ರಿಯಾನ್ ಲಾರಾ, ಹರ್ಷಲ್ ಗಿಬ್ಸ್, ತಿಲಕರತ್ನೆ ದಿಲ್ಶಾನ್ ಮತ್ತು ಸುಬ್ರಮಣ್ಯಂ ಬದರಿನಾಥ್ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಕಿಚ್ಚ ಸುದೀಪ್ ಅವರ ತಂಡದಲ್ಲಿ ಕ್ರಿಸ್ ಗೇಲ್ ಕಾಣಿಸಿಕೊಳ್ಳಲಿದ್ದಾರೆ. ಅದೇ ರೀತಿ ಬ್ರಿಯಾನ್ ಲಾರಾ ಶಿವಣ್ಣನ ತಂಡದ ಪರ ಕಣಕ್ಕಿಳಿಯಲಿದ್ದಾರೆ.
Expect some sizzle on the field with @henrygayle & @KicchaSudeep in team #HoysalaEagles 🔥@kp_sreekanth @Karthik1423 #NandaKishore @dinakar219 #RocklineVenkatesh #SadashivShenoy @KRG_Connects pic.twitter.com/uIdlVkqbDK
— KRG Connects (@KRG_Connects) January 27, 2023
ಕೆಸಿಸಿ ವೇಳಾಪಟ್ಟಿ:
ಇನ್ನು, ಫೆಬ್ರವರಿ 24 ಮತ್ತು 25ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಫೆಬ್ರವರಿ 24ರ ಪಂದ್ಯಗಳು
1. ಹೊಯ್ಸಳ ಈಗಲ್ಸ್ vs ಒಡೆಯರ್ ಚಾರ್ಜರ್ಸ್
2. ಗಂಗಾ ವಾರಿಯರ್ಸ್ vs ಹೊಯ್ಸಳ ಈಗಲ್ಸ್
3. ಹೊಯ್ಸಳ ಈಗಲ್ಸ್ vs ಒಡೆಯರ್ ಚಾರ್ಜರ್ಸ್
4. ಕದಂಬ ಲಯನ್ಸ್ vs ರಾಷ್ಟ್ರಕೂಟ ಪ್ಯಾಂಥರ್ಸ್
ಫೆಬ್ರವರಿ 25ರ ಪಂದ್ಯಗಳು
1. ವಿಜಯನಗರ ಪೇಟ್ರಿಯಾಟ್ಸ್ vs ಕದಂಬ ಲಯನ್ಸ್
2. ಗಂಗಾ ವಾರಿಯರ್ಸ್ vs ಒಡೆಯರ್ ಚಾರ್ಜರ್ಸ್
3. ರಾಷ್ಟ್ರಕೂಟ ಪ್ಯಾಂಥರ್ಸ್ vs ವಿಜಯನಗರ ಪೇಟ್ರಿಯಾಟ್ಸ್
ಕೆಸಿಸಿ ತಂಡಗಳ ಸಂಪೂರ್ಣ ಲಿಸ್ಟ್:
ಹೊಯ್ಸಳ ಈಗಲ್ಸ್: ಕ್ರಿಸ್ ಗೇಲ್, ಸುದೀಪ್ (ನಾಯಕ), ಸಾಗರ್ ಗೌಡ, ಅಭಿಷೇಕ್ ಬಾಡ್ಕರ್, ನಾಗಾರ್ಜುನ ಶರ್ಮಾ, ವಿಶ್ವ, ಸುನೀಲ್ ಗೌಡ, ರೋಹಿತ್ ಗೌಡ, ರಿತೇಶ್ ಭಟ್ಕಳ್, ಅನೂಪ್ ಭಂಡಾರಿ, ಅರ್ಜುನ್ ಬಚ್ಚನ್, ತರುಣ್ ಸುಧೀರ್, ಮಂಜು ಪಾವಗಡ.
ಒಡೆಯರ್ ಚಾರ್ಜರ್ಸ್: ಬ್ರಿಯಾನ್ ಲಾರಾ, ಶಿವರಾಜಕುಮಾರ್(ನಾಯಕ), ನಿರೂಪ್ ಭಂಡಾರಿ, ಹರ್ಷ, ಪವನ್, ವಿಜಯ್, ಗಣೇಶ್ ರಾಜ್, ಮಧು, ಆರ್ಯನ್, ಥಮನ್, ಅರ್ಜುನ್ ಯೋಗಿ, ರಾಹುಲ್ ಪ್ರಸನ್ನ, ಮೋಹಿತ್ ಬಿ.ಎ.
ಕದಂಬ ಲಯನ್ಸ್: ತಿಲಕರತ್ನೆ ದಿಲ್ಶಾನ್, ಗಣೇಶ್ (ನಾಯಕ), ಲೋಕಿ, ಪ್ರತಾಪ್, ಯೋಗೇಶ್, ವ್ಯಾಸರಾಜ್, ಪ್ರೀತಂ ಗುಬ್ಬಿ, ರಕ್ಷಿತ್, ರಿಷಿ ಬೋಪಣ್ಣ, ರಾಜೀವ್ ಹನು, ರೇಣುಕ್, ಲೋಕಿ ಸಿಕೆ, ಪವನ್ ಒಡೆಯರ್.
ವಿಜಯನಗರ ಪೇಟ್ರಿಯಾಟ್ಸ್: ಹರ್ಷಲ್ ಗಿಬ್ಸ್, ಉಪೇಂದ್ರ, ಪ್ರದೀಪ್ (ನಾಯಕ), ಸಚಿನ್, ವಿಕಾಸ್, ಧರ್ಮ, ವಿಟ್ಠಲ್, ಕಿರಣ್, ಮಹೇಶ್, ಆದರ್ಶ್, ರಜತ್ ಹೆಗ್ಡೆ, ತ್ರಿವಿಕ್ರಮ್, ಗರುಡ ರಾಮ್.
ಗಂಗಾ ವಾರಿಯರ್ಸ್: ಸುರೇಶ್ ರೈನಾ, ಡಾರ್ಲಿಂಗ್ ಕೃಷ್ಣ (ನಾಯಕ), ಡಾಲಿ ಧನಂಜಯ, ಶಿವಕುಮಾರ್, ಕರಣ್ ಆರ್ಯ, ನವೀನ್ ರಘು, ವೈಭವ್ ರಾಮ್, ಮಲ್ಲಿಕಾಚರಣ್ ವಾಡಿ, ನರೇಶ್, ಸುದರ್ಶನ್, ಸುನಿಲ್ ರಾವ್, ಸಿಂಪಲ್ ಸುನಿ, ಪ್ರಸನ್ನ, ಪ್ರವೀಣ್.
ರಾಷ್ಟ್ರಕೂಟ ಪ್ಯಾಂಥರ್ಸ್: ಸುಬ್ರಮಣ್ಯಂ ಬದ್ರಿನಾಥ್, ಜೆಕೆ (ನಾಯಕ), ಧ್ರುವ ಸರ್ಜಾ, ಪ್ರತಾಪ್ ನಾರಾಯಣ್, ಮನು ಅಯ್ಯಪ್ಪ, ಅಲಕ್ ಆನಂದ, ಜಗ್ಗಿ, ಸೈಯದ್, ನಿಹಾಲ್ ಉಳ್ಳಾಲ್, ಅನೀಶ್ವರ್ ಗೌತಮ್, ವಿನೋದ್ ಕಿಣಿ, ಚಂದನ್ ಕುಮಾರ್, ಸಂಜಯ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ