• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • MS Dhoni: ರಾಕಿ ಭಾಯ್​ ಫೇವರಿಟ್ ಕ್ರಿಕೆಟರ್​ ಯಾರು ಗೊತ್ತಾ? ಅವರೇ ಯಶ್​ ರೋಲ್ ಮಾಡೆಲ್ ಅಂತೆ!

MS Dhoni: ರಾಕಿ ಭಾಯ್​ ಫೇವರಿಟ್ ಕ್ರಿಕೆಟರ್​ ಯಾರು ಗೊತ್ತಾ? ಅವರೇ ಯಶ್​ ರೋಲ್ ಮಾಡೆಲ್ ಅಂತೆ!

ಧೋನಿ-ಯಶ್

ಧೋನಿ-ಯಶ್

MS Dhoni: ಧೋನಿಗೆ ಭಾರತದಲ್ಲಿರುವ ಅನೇಕ ಚಿತ್ರರಂಗದ ಜನಪ್ರಿಯ ನಟರು ಅಭಿಮಾನಿಗಳಾಗಿದ್ದಾರೆ ನೋಡಿ. ಮಹೇಂದ್ರ ಸಿಂಗ್ ಧೋನಿ ತಮ್ಮ ಅಭಿಮಾನಿಗಳಿಗೆ ಕೇವಲ ಒಬ್ಬ ವ್ಯಕ್ತಿಯ ಹೆಸರಲ್ಲ, ಅದು ಅವರ ಭಾವನೆ ಎಂಬುದನ್ನು ಮತ್ತೊಮ್ಮೆ ಇದು ಸಾಬೀತುಪಡಿಸಿದೆ.

  • Share this:

ಕ್ಯಾಪ್ಟನ್ ಕೂಲ್ ಅಂತ ಹೇಳಿದರೆ ಸಾಕು ಆ ಕ್ರಿಕೆಟಿಗನ ಹೆಸರು ಥಟ್ಟನೆ ಕೋಟಿ ಅಭಿಮಾನಿಗಳ ಬಾಯಿಯಲ್ಲಿ ಬರುತ್ತದೆ. ಹೌದು, ಕೂಲ್ ಕ್ಯಾಪ್ಟನ್ ಅಂತಾನೆ ಖ್ಯಾತಿ ಪಡೆದಿರುವ ಭಾರತದ ಕ್ರಿಕೆಟ್‌ನ ಮಾಜಿ ನಾಯಕ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅವರ ಹೆಸರು ಕೇಳದ ಜನರು ಬಹುಶಃ ಭೂಮಿ ಮೇಲೆ ಇರಲಿಕ್ಕಿಲ್ಲ ಅಂತ ಹೇಳಿದರೆ ಅತಿಶಯೋಕ್ತಿಯಲ್ಲ. ಧೋನಿಗೆ ಯಾವ ಕ್ಷೇತ್ರದಲ್ಲಿ ಅಭಿಮಾನಿಗಳು ಇರುವುದಿಲ್ಲ ಹೇಳಿ? ಇವರಿಗಿರುವ ಅಭಿಮಾನಿಗಳು ಬಹುಶಃ ಒಬ್ಬ ಚಿತ್ರರಂಗದ ಜನಪ್ರಿಯ ನಟನಿಗೂ ಇರಲಿಕ್ಕಿಲ್ಲ ನೋಡಿ. ಆದರೆ ಮಹಿ ಎಂದರೆ ಖುಷಿ ಪಡುವ ಕಟ್ಟಾ ಅಭಿಮಾನಿಗಳ ದೊಡ್ಡ ಲಿಸ್ಟ್ ಭಾರತದ ಅನೇಕ ಚಿತ್ರರಂಗಗಳಲ್ಲಿ ಇದ್ದಾರೆ.


ಬಾಲಿವುಡ್​ನಲ್ಲಿ ಧೋನಿ ಫ್ಯಾನ್ಸ್:


ಒಂದೊಮ್ಮೆ ತಮ್ಮ ಮುಂದಿನ ಯೋಜನೆ ಏನು ಅಂತ ಎಂಎಸ್ ಧೋನಿ ಅವರಿಗೆ ಮಾಧ್ಯಮದವರು ಕೇಳಿದಾಗ, ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸುವುದು ನನಗೆ ಬರುವ ಕಲೆ ಅಲ್ಲ ಬಿಡಿ ಅಂತ ಹೇಳಿದ್ದುಂಟು. ಆದರೆ ಈ ಹೇಳಿಕೆ ಚಿತ್ರರಂಗದ ನಟರನ್ನ ಧೋನಿ ಅವರ ಡೈ ಹಾರ್ಡ್ ಫ್ಯಾನ್ಸ್ ಗಳಾಗುವುದನ್ನು ತಡೆಯಲಿಲ್ಲ. ಏಕೆಂದರೆ ಈಗ ಧೋನಿಗೆ ಭಾರತದಲ್ಲಿರುವ ಅನೇಕ ಚಿತ್ರರಂಗದ ಜನಪ್ರಿಯ ನಟರು ಅಭಿಮಾನಿಗಳಾಗಿದ್ದಾರೆ ನೋಡಿ. ಮಹೇಂದ್ರ ಸಿಂಗ್ ಧೋನಿ ತಮ್ಮ ಅಭಿಮಾನಿಗಳಿಗೆ ಕೇವಲ ಒಬ್ಬ ವ್ಯಕ್ತಿಯ ಹೆಸರಲ್ಲ, ಅದು ಅವರ ಭಾವನೆ ಎಂಬುದನ್ನು ಮತ್ತೊಮ್ಮೆ ಇದು ಸಾಬೀತುಪಡಿಸಿದೆ.


ಅರ್ಜುನ್ ಕಪೂರ್ ಧೋನಿಯ ಅಭಿಮಾನಿ:


ಕ್ರಿಕೆಟ್ ಆಟ ಎಂದರೆ ತುಂಬಾನೇ ಇಷ್ಟವಿರುವ ಬಾಲಿವುಡ್ ನಟ ಅರ್ಜುನ್ ಕಪೂರ್ ಅವರಿಗೆ ಎಂ ಎಸ್ ಧೋನಿ ಎಂದರೆ ತುಂಬಾನೇ ಇಷ್ಟವಂತೆ. ಅದಕ್ಕೆ ಇರಬಹುದು ಅರ್ಜುನ್ ಅವರು ಧೋನಿಯ ದೊಡ್ಡ ಅಭಿಮಾನಿಯಾಗಿದ್ದಾರೆ ಮತ್ತು 2020 ರಲ್ಲಿ ಎಂ ಎಸ್ ಧೋನಿ ನಿವೃತ್ತಿ ಘೋಷಣೆಯ ನಂತರ ಅವರ ಇನ್‌ಸ್ಟಾಗ್ರಾಮ್ ನಲ್ಲಿ ಹಾಕಿಕೊಂಡ ಪೋಸ್ಟ್ ಇದನ್ನು ಪುನರುಚ್ಚರಿಸಿದೆ ಅಂತ ಹೇಳಬಹುದು.


ಸ್ಟಾರ್ ಗಳು ತುಂಬಾನೇ ಇದ್ದಾರೆ, ಅನೇಕ ದಂತ ಕಥೆಗಳಿವೆ ಮತ್ತು ಇದೆಲ್ಲದರ ನಂತರ ಮಹೇಂದ್ರ ಸಿಂಗ್ ಧೋನಿ ಇದ್ದಾರೆ. ದೊಡ್ಡ ಸ್ಟಾರ್ ಆಗಿ ಆಟದ ಮೈದಾನದ ಒಳಗೆ ಮತ್ತು ಹೊರಗೆ ಮಿಂಚಿದರು. ಈಗ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುವುದರ ಬಗ್ಗೆ ನಾನು ಹೆಚ್ಚು ಕಾಳಜಿ ವಹಿಸುವುದಿಲ್ಲ, ಏಕೆಂದರೆ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಲು ಈಗ ಕ್ಯಾಮೆರಾ ಫೋನ್ ಗಳಿವೆ. ಆದರೆ ಇದು ನಾನು ಪ್ರೀತಿಸುವ ವ್ಯಕ್ತಿಯ ಜೊತೆ ತೆಗೆಸಿಕೊಂಡಿದ್ದು ವಿಶೇಷವಾಗಿದೆ. ಈ ಸುಂದರ ನೆನಪುಗಳಿಗೆ ಧನ್ಯವಾದಗಳು" ಎಂದು ಅವರು ಒಂದು ಫೋಟೋದೊಂದಿಗೆ ಬರೆದಿದ್ದರು.


ಇದನ್ನೂ ಓದಿ: MS Dhoni: ಧೋನಿ ಅಭಿಮಾನಿಗಳಿಗೆ ಗುಡ್​​ನ್ಯೂಸ್​​​; ಸುರೇಶ್​​ ರೈನಾ ಮಾತು ನಿಜವಾಗಲಿ ಎಂದ ಫ್ಯಾನ್ಸ್!


ರಣವೀರ್ ಸಿಂಗ್ ಧೋನಿ ಫ್ಯಾನ್:


ಬಾಲಿವುಡ್ ನಟ ರಣವೀರ್ ಸಿಂಗ್, ವಿಶ್ವದಾದ್ಯಂತ ಲಕ್ಷಾಂತರ ಜನರಂತೆ ಅವರು ಸಹ ಎಂ ಎಸ್ ಧೋನಿಯ ದೊಡ್ಡ ಅಭಿಮಾನಿ ಅಂತ ಹೇಳಿಕೊಳ್ಳುತ್ತಾರೆ. 2021 ರಲ್ಲಿ ಕ್ರಿಕೆಟ್ ಐಕಾನ್ ಅವರೊಂದಿಗೆ ಸ್ವಲ್ಪ ಸಮಯ ಕಳೆಯುವ ಅವಕಾಶ ಸಿಕ್ಕಾಗ ನಟನಿಗೆ ಅವರ ಜೀವನದ ಒಂದು ಕನಸು ನನಸಾದಂತೆ ಆಯಿತು. ನಟ ರಣವೀರ್ ಮತ್ತು ಧೋನಿ ಮುಂಬೈನಲ್ಲಿ ಸ್ಥಳೀಯ ಫುಟ್ಬಾಲ್ ಪಂದ್ಯದ ಸಮಯದಲ್ಲಿ ಭೇಟಿಯಾದರು.


ಆ ಕ್ಷಣದ ಫೋಟೋಗಳು ಮತ್ತು ವೀಡಿಯೋಗಳು ತಕ್ಷಣವೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದವು. ಸ್ನೇಹಪರ ಪಂದ್ಯಕ್ಕೆ ಮುಂಚಿತವಾಗಿ, ರಣವೀರ್ ತನ್ನ ಫ್ಯಾನ್ಬಾಯ್ ಕ್ಷಣವನ್ನು ಆನಂದಿಸಲು ನಿರ್ಧರಿಸಿದರು. ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಎಂಎಸ್‌ಡಿ ಅವರೊಂದಿಗಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಫೋಟೋದಲ್ಲಿ ಇಬ್ಬರೂ ನಿಯಾನ್ ಹಸಿರು ಜರ್ಸಿಗಳನ್ನು ಧರಿಸಿರುವುದನ್ನು ಕಾಣಬಹುದು. ಫೋಟೋವನ್ನು ಹಂಚಿಕೊಂಡ ನಟ "ಯಾವಾಗಲೂ ದೊಡ್ಡಣ್ಣನ ಆಜ್ಞೆಯ ಮೇರೆಗೆ" ಎಂದು ಬರೆದಿದ್ದಾರೆ.


ತಮಿಳು ನಟ ವಿಜಯ್ ಗೆ ಧೋನಿ ಅಚ್ಚುಮೆಚ್ಚು:


ಇನ್ನೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಅನೇಕ ವರ್ಷಗಳಿಂದ ಆ ತಂಡವನ್ನು ಮುನ್ನೆಡೆಸುತ್ತಿದ್ದು, ತಮಿಳು ನಟ ವಿಜಯ್ ಗೆ ಈ ಕ್ರಿಕೆಟ್ ಆಟಗಾರ ತುಂಬಾನೇ ಇಷ್ಟವಂತೆ. ಎಂ ಎಸ್ ಧೋನಿ ಕೆಲವು ವರ್ಷಗಳ ಹಿಂದೆ ಚೆನ್ನೈನಲ್ಲಿ ವಿಜಯ್ ಅವರನ್ನು ಭೇಟಿಯಾಗಿದ್ದರು. 'ತಲಾ' ಎಂ ಎಸ್ ಧೋನಿ ಮತ್ತು 'ದಳಪತಿ' ವಿಜಯ್ ಒಂದೇ ಫ್ರೇಮ್ ನಲ್ಲಿ ಕಾಣಿಸಿಕೊಂಡು ಲಕ್ಷಾಂತರ ಅಭಿಮಾನಿಗಳನ್ನು ರೋಮಾಂಚನಗೊಳಿಸಿದ್ದರು.


ವಿಜಯ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಧೋನಿ ಅವರ ದೊಡ್ಡ ಅಭಿಮಾನಿಯಾಗಿದ್ದಾರೆ. ಚೆನ್ನೈನ ಚೆಪಾಕ್ ನಲ್ಲಿ ನಡೆದ ಸಿಎಸ್‌ಕೆ ಐಪಿಎಲ್ ಪಂದ್ಯಗಳಿಗೆ ಅವರು ಆಗಾಗ್ಗೆ ಭೇಟಿ ನೀಡುತ್ತಿದ್ದರು ಮತ್ತು ಧೋನಿ ಅವರನ್ನು ಹಲವಾರು ಸಂದರ್ಭಗಳಲ್ಲಿ ಭೇಟಿಯಾಗಿದ್ದಾರೆ. ಚೆನ್ನೈನ ಗೋಕುಲಂ ಸ್ಟುಡಿಯೋಗೆ ಸಮೀಪವಿರುವ ಸ್ಥಳದಲ್ಲಿ ವಿಜಯ್ ಅವರು ನೆಲ್ಸನ್ ದಿಲೀಪ್ ಕುಮಾರ್ ಅವರ 'ಬೀಸ್ಟ್' ಚಿತ್ರದ ಚಿತ್ರೀಕರಣದಲ್ಲಿದ್ದರು ಎಂದು ವರದಿಯಾಗಿದೆ.


ಕೆಜಿಎಫ್ ಸ್ಟಾರ್ ಗೆ ಧೋನಿ ರೋಲ್ ಮಾಡೆಲ್:


'ಕೆಜಿಎಫ್' ಚಿತ್ರದ ಸ್ಟಾರ್ ನಟ ಯಶ್ ಯಾವಾಗಲೂ ಎಂ ಎಸ್ ಧೋನಿಯನ್ನು ಹೊಗಳುತ್ತಾರೆ, ಧೋನಿ ತಮ್ಮ ಜೀವನದಲ್ಲಿ ರೋಲ್ ಮಾಡೆಲ್ ಗಳಲ್ಲಿ ಒಬ್ಬರು ಎಂದು ಆಗಾಗ್ಗೆ ಹೇಳುತ್ತಿರುತ್ತಾರೆ. 2019 ರ ಸಂದರ್ಶನವೊಂದರಲ್ಲಿ, ಜನಪ್ರಿಯ ನಟ ಧೋನಿ ಅವರ ವರ್ತನೆಯು ಅವರಿಗೆ ದೊಡ್ಡ ಸ್ಫೂರ್ತಿಯಾಯಿತು ಮತ್ತು ಕ್ರಿಕೆಟ್ ಐಕಾನ್ ಧೋನಿ ಅವರು ದಿವಂಗತ ನಟ ಶಂಕರ್ ನಾಗ್ ಅವರೊಂದಿಗೆ ಅವರ ಜೀವನದ ಅತಿದೊಡ್ಡ ರೋಲ್ ಮಾಡೆಲ್ ಗಳಲ್ಲಿ ಒಬ್ಬರು ಎಂದು ಹೇಳಿದ್ದರು.


ಧೋನಿ ಸಿನೆಮಾ ಮಾಡ್ತಾ ಅವರ ಅಭಿಮಾನಿ ಆಗಿದ್ರಂತೆ:


2020 ರಲ್ಲಿ ನಿಧನರಾದ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಎಂ ಎಸ್ ಧೋನಿಯ ಅತಿದೊಡ್ಡ ಅಭಿಮಾನಿಗಳಲ್ಲಿ ಒಬ್ಬರು ಎಂಬುದರಲ್ಲಿ ಸಂದೇಹವಿಲ್ಲ. ಸುಶಾಂತ್ ಅವರ ಅಭಿಮಾನಿಗಳಿಗೆ, ಅವರ ಅತ್ಯುತ್ತಮ ಅಭಿನಯವು ಜೀವನಚರಿತ್ರೆ 'ಎಂ ಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ' ನಲ್ಲಿತ್ತು. ಅಭಿಮಾನಿಗಳು ಮಾತ್ರವಲ್ಲದೆ ವಿಮರ್ಶಕರು ಸಹ ಚಿತ್ರದಲ್ಲಿ ಅವರ ಸರಳವಾದ ನಟನೆಯನ್ನು ಶ್ಲಾಘಿಸಿದ್ದರು.


ಧೋನಿಯ ಆಟದ ಶೈಲಿಯನ್ನು ಪರಿಪೂರ್ಣತೆಯಿಂದ ಅನುಕರಿಸುವಾಗ ಮತ್ತು ಮರುಸೃಷ್ಟಿಸುವಾಗ ಮತ್ತು ಚಿತ್ರಕ್ಕಾಗಿ ತಯಾರಿ ನಡೆಸುತ್ತಿರುವಾಗ ಅವರನ್ನು ಹತ್ತಿರದಿಂದ ನೋಡಿ, ಸುಶಾಂತ್ ಶೀಘ್ರದಲ್ಲಿಯೇ ಧೋನಿ ಅವರ ಅಭಿಮಾನಿಯಾದ್ರಂತೆ ಮತ್ತು ನಂತರದಲ್ಲಿ ಈ ಮೆಚ್ಚುಗೆ ಮತ್ತಷ್ಟು ಬೆಳೆಯಿತು.


ವೈರಲ್ ಆಗಿತ್ತಂತೆ ಅಜಯ್ ದೇವಗನ್ -ಧೋನಿ ಫೋಟೋ


2020 ರಲ್ಲಿ, ಅಜಯ್ ದೇವಗನ್ ಮತ್ತು ಧೋನಿ ಅವರ ಒಂದು ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. 'ತಾನ್ಹಾಜಿ-ದಿ ಅನ್ಸಂಗ್ ವಾರಿಯರ್' ಚಿತ್ರದ ಪ್ರದರ್ಶನದ ಸಮಯದಲ್ಲಿ ಅಜಯ್ ಅವರು ಧೋನಿಯನ್ನು ಭೇಟಿಯಾದರು. ಕ್ರಿಕೆಟ್ ಮತ್ತು ಚಲನಚಿತ್ರಗಳು ನಮ್ಮ ದೇಶದ ಧರ್ಮವನ್ನು ಹೇಗೆ ಒಗ್ಗೂಡಿಸುತ್ತವೆ ಎಂದು ನಟ ತಮ್ಮ ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದರು. ಲಕ್ಷಾಂತರ ಅಭಿಮಾನಿಗಳಂತೆ, ಬಾಲಿವುಡ್ ನ ಈ ತಾರೆ ಕೂಡ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕನ ದೊಡ್ಡ ಅಭಿಮಾನಿ.




ಜಿಶು ಸೇನ್ ಗುಪ್ತಾ ಮಾಹಿಯ ದೊಡ್ಡ ಫ್ಯಾನ್:


ನಟ ಜಿಶು ಸೇನ್ ಗುಪ್ತಾ ಕೂಡ ಎಂ ಎಸ್ ಧೋನಿ ಅವರ ದೊಡ್ಡ ಅಭಿಮಾನಿಯಾಗಿದ್ದು, ಕೆಲವು ವರ್ಷಗಳ ಹಿಂದೆ ಟ್ವೆಂಟಿ20 ಪಂದ್ಯಕ್ಕೆ ಮೊದಲು ಅವರನ್ನು ಭೇಟಿಯಾದರು. "ನಾನು ಅವನನ್ನು ಅವರ ಹೋಟೆಲ್ ಕೋಣೆಯಲ್ಲಿ ಭೇಟಿಯಾದೆ ಮತ್ತು ಅವರು ತುಂಬಾನೇ ಸಿಂಪಲ್ ಆಗಿರುವುದು ನನಗೆ ಆವತ್ತೇ ಗೊತ್ತಾಗಿದ್ದು. ನಾನು ಅವರೊಂದಿಗೆ ಕ್ರಿಕೆಟ್ ಮೇಲಿನ ನನ್ನ ಪ್ರೀತಿಯನ್ನು ಹಂಚಿಕೊಂಡಿದ್ದೇನೆ ಮತ್ತು ನಾನು ಸಿಸಿಎಲ್ ನಲ್ಲಿ ಬಂಗಾಳ ಟಾಲಿವುಡ್ ತಂಡಕ್ಕಾಗಿ ಆಡುತ್ತೇನೆ ಎಂದು ತಿಳಿದು ಅವರು ತುಂಬಾನೇ ಸಂತೋಷಪಟ್ಟರು” ಎಂದು ನಟ ಹೇಳಿದರು.


ಧೋನಿಯನ್ನ ಸಾಕಷ್ಟು ಬಾರಿ ಭೇಟಿ ಮಾಡಿದ್ದಾರಂತೆ ಜೋಯಿ ಡೆಬ್ರಾಯ:


ಜನಪ್ರಿಯ ಬಂಗಾಳ ಚಿತ್ರರಂಗದ ನಟ ಜೋಯಿ ಅವರು ಧೋನಿ ಅವರನ್ನು ಸಾಕಷ್ಟು ಬಾರಿ ಭೇಟಿಯಾಗಿದ್ದಾರಂತೆ ಮತ್ತು ಟಿವಿ ಜಾಹೀರಾತಿನ ಚಿತ್ರೀಕರಣದ ಸಮಯದಲ್ಲಿ ಒಟ್ಟಿಗೆ ಕೆಲಸ ಮಾಡುವ ಅವಕಾಶವನ್ನು ಸಹ ಪಡೆದರು. "ನಾನು ಧೋನಿಯನ್ನು ಹಲವು ಬಾರಿ ಭೇಟಿಯಾಗಿದ್ದೆನೆ. ನನ್ನನ್ನು ಮಂತ್ರಮುಗ್ಧರನ್ನಾಗಿಸುವುದು ಅವರ ಸರಳತೆ ಮತ್ತು ಶುದ್ಧವಾದ ಆತ್ಮ. ಶೂಟಿಂಗ್ ಮಾಡುವಾಗ ಅಥವಾ ಬೈಟ್ ನೀಡುವಾಗ ಅವರು ಕ್ಯಾಮೆರಾ ಮುಂದೆ ಅಷ್ಟೇ ನಿರರ್ಗಳವಾಗಿ ಮಾತನಾಡುತ್ತಿದ್ದರು. ಧೋನಿ ಒಂದೇ ಬಾರಿಗೆ ಪರಿಪೂರ್ಣ ಶಾಟ್ ಗಳನ್ನು ನೀಡುತ್ತಿದ್ದರು" ಎಂದು ಜೋಯಿ ಹಿಂದೊಮ್ಮೆ ಹೇಳಿದ್ದರು.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು