Sunil Chhetri: ಸುನಿಲ್ ಛೆತ್ರಿ ಮೇಲೆ ವಿಶೇಷ ನಂಬಿಕೆ ಇಟ್ಟಿದ್ದಾರಂತೆ ಅಮಿತಾಭ್, ಹಾಟ್ ಸೀಟ್ ಮೇಲೆ ಭಾರತದ ಸ್ಟಾರ್​​ ಕ್ರೀಡಾಪಟುಗಳು

ಈಗಾಗಲೇ ‘ಕೌನ್ ಬನೇಗಾ ಕರೋಡ್‌ಪತಿ 14’ ಆಗಸ್ಟ್ 7 ರಿಂದ ಸೋನಿ ಎಂಟರ್ಟೈನ್ಮೆಂಟ್ ಚಾನೆಲ್ ನಲ್ಲಿ ಶುರುವಾಗಿದೆ. ಈ ಬಾರಿ ಸೆಲೆಬ್ರಿಟಿಗಳಾದ ನಟ ಅಮೀರ್ ಖಾನ್, ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರ ಸುನಿಲ್ ಛೆತ್ರಿ, ಎಂಟು ಬಾರಿ ವಿಶ್ವ ಚಾಂಪಿಯನ್ ಬಾಕ್ಸರ್ ಮೇರಿ ಕೋಮ್ ಮತ್ತು ಶೌರ್ಯ ಪ್ರಶಸ್ತಿ ಪಡೆದ ಮೊದಲ ಮಹಿಳಾ ಅಧಿಕಾರಿ ಮಿಥಾಲಿ ಮಧುಮಿತಾ ಮತ್ತು ಭಾರತದ ಮೊದಲ ಬ್ಲೇಡ್-ರನ್ನರ್ ಮೇಜರ್ ಡಿ.ಪಿ.ಸಿಂಗ್ ಅವರಂತಹ ಸಾಧಕರನ್ನು ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಈ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ.

ಕೌನ್ ಬನೇಗಾ ಕರೋಡ್‌ಪತಿ ಶೋನಲ್ಲಿ ಮೇರಿ ಕೋಮ್ ಮತ್ತು ಸುನಿಲ್ ಛೆತ್ರಿ

ಕೌನ್ ಬನೇಗಾ ಕರೋಡ್‌ಪತಿ ಶೋನಲ್ಲಿ ಮೇರಿ ಕೋಮ್ ಮತ್ತು ಸುನಿಲ್ ಛೆತ್ರಿ

  • Share this:
ಈ ‘ಕೌನ್ ಬನೇಗಾ ಕರೋಡ್‌ಪತಿ’ ಶೋ (Kaun Banega Crorepati  Show) ಮತ್ತೆ ಶುರುವಾಗುತ್ತಿದೆ ಅಂತ ತಿಳಿದ ಕೂಡಲೇ ಜನರು ತಮ್ಮ ಅಚ್ಚುಮೆಚ್ಚಿನ ಶೋ ಬಗ್ಗೆ ಇರುವ ಎಲ್ಲಾ ಮಾಹಿತಿಗಳು (Information) ಮತ್ತು ಈ ಬಾರಿಯ ಶೋ ಹೇಗಿರುತ್ತದೆ? ಯಾರೆಲ್ಲಾ ಸೆಲೆಬ್ರಿಟಿ ಅತಿಥಿಗಳು (Celebrity Guest) ಬರುತ್ತಾರೆ ಅಂತ ಸಹ ನೋಡಲು ತುಂಬಾನೇ ಕಾತುರತೆಯಿಂದ ಕಾಯುತ್ತಿದ್ದುದ್ದಕ್ಕೆ ಕೊನೆಗೂ ತೆರೆ ಬಿದ್ದಿದೆ. ಹೌದು.. ಈಗಾಗಲೇ ‘ಕೌನ್ ಬನೇಗಾ ಕರೋಡ್‌ಪತಿ 14’ ಆಗಸ್ಟ್ 7 ರಿಂದ ಸೋನಿ ಎಂಟರ್ಟೈನ್ಮೆಂಟ್ ಚಾನೆಲ್ ನಲ್ಲಿ (Sony Entertainment Channel) ಶುರುವಾಗಿದೆ.

ಈ ಬಾರಿ ಷೋನಲ್ಲಿ ಯಾರ‍್ಯಾರು ಭಾಗವಹಿಸಲಿದ್ದಾರೆ 
ಈ ಬಾರಿ ಸೆಲೆಬ್ರಿಟಿಗಳಾದ ನಟ ಅಮೀರ್ ಖಾನ್, ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರ ಸುನಿಲ್ ಛೆತ್ರಿ, ಎಂಟು ಬಾರಿ ವಿಶ್ವ ಚಾಂಪಿಯನ್ ಬಾಕ್ಸರ್ ಮೇರಿ ಕೋಮ್ ಮತ್ತು ಶೌರ್ಯ ಪ್ರಶಸ್ತಿ ಪಡೆದ ಮೊದಲ ಮಹಿಳಾ ಅಧಿಕಾರಿ ಮಿಥಾಲಿ ಮಧುಮಿತಾ ಮತ್ತು ಭಾರತದ ಮೊದಲ ಬ್ಲೇಡ್-ರನ್ನರ್ ಮೇಜರ್ ಡಿ.ಪಿ.ಸಿಂಗ್ ಅವರಂತಹ ಸಾಧಕರನ್ನು ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಈ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ.

ಉದ್ಘಾಟನಾ ಸಂಚಿಕೆಯನ್ನು ದೇಶದ ಸ್ವಾತಂತ್ರ್ಯದ ಆಚರಣೆಗೆ ಸಮರ್ಪಣೆ 
ದೇಶವು ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುತ್ತಿರುವಾಗ, ಕೆಬಿಸಿ  ಉದ್ಘಾಟನಾ ಸಂಚಿಕೆಯನ್ನು ದೇಶದ ಸ್ವಾತಂತ್ರ್ಯದ ಆಚರಣೆಗೆ ಸಮರ್ಪಿಸಿದ್ದಾರೆ ಎಂದು ಹೇಳಬಹುದು. ಈ ಗೇಮ್ ಶೋಗೆ ಮುಂಚಿತವಾಗಿ, ತಯಾರಕರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಲವಾರು ಪ್ರೋಮೋಗಳನ್ನು ಬಿಡುತ್ತಿದ್ದಾರೆ. ಈಗ ಹೊಸದಾಗಿ ಬಂದ ಒಂದು ಸಂಚಿಕೆಯ ಪ್ರೋಮೋದ ವಿಡಿಯೋವೊಂದರಲ್ಲಿ, ಅವರು ಸುನಿಲ್ ಅವರೊಂದಿಗೆ ತಮ್ಮ ಆಟದ ಬಗ್ಗೆ ಮಾತನಾಡುತ್ತಿರುವುದನ್ನು ಕಾಣಬಹುದು.
"ಈ ದೇಶದಲ್ಲಿ ಅನೇಕ ಜನರು ತಮ್ಮನ್ನು ತಾವು ಅನೇಕ ರೀತಿಯ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಆದರೆ ಈ ದೇಶವನ್ನೇ ತಮ್ಮ ಹೃದಯದಲ್ಲಿರಿಸಿಕೊಂಡು ಕ್ರೀಡೆಯಲ್ಲಿ ತೊಡಗಿಸಿಕೊಂಡವರು ತುಂಬಾನೇ ಕಡಿಮೆ ಜನರು ಇದ್ದಾರೆ" ಅಂತ ಹೇಳುತ್ತಾ ಬಿಗ್ ಬಿ ಅಮಿತಾಭ್ ಅವರು ಕ್ರೀಡಾ ಐಕಾನ್ ಗಳನ್ನು ಸ್ವಾಗತಿಸುತ್ತಾ ಹೇಳುತ್ತಾರೆ.

ಅಮಿತಾಭ್ ಬಚ್ಚನ್ ಛೆತ್ರಿಗೆ ಏನು ಹೇಳಿದ್ರು ನೋಡಿ
ಮೇರಿ ಕೋಮ್ ಮತ್ತು ಛೆತ್ರಿ ಇಬ್ಬರೂ ಹಾಟ್ ಸೀಟ್ ಮೇಲೆ ಕುಳಿತಿರುವುದನ್ನು ನಾವು ಈ ಪ್ರೋಮೋದಲ್ಲಿ ಕಾಣಬಹುದು ಮತ್ತು ಬಿಗ್ ಬಿ ಅಮಿತಾಭ್ ಅವರು ಛೆತ್ರಿಯವರನ್ನು ಪರಿಚಯಿಸುತ್ತಾ "ಫುಟ್ಬಾಲ್ ನಲ್ಲಿ ದೇಶದ ಎಲ್ಲಾ ಕನಸುಗಳು ನಿಮ್ಮೊಂದಿಗೆ ಸಂಬಂಧ ಹೊಂದಿವೆ. ಈ ಬಾರಿ ನೀವು ನಮಗಾಗಿ ಏಷ್ಯನ್ ಕಪ್ ಅನ್ನು ತರುತ್ತೀರಿ ಅಂತ ನಮಗೆ ವಿಶ್ವಾಸವಿದೆ" ಎಂದು ಹೇಳುವುದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ:  Karan Johar: ನನಗೆ ರಣವೀರ್​ ಮೇಲೆ ಲವ್​ ಆಗಿದೆ ಎಂದ ಕರಣ್​ ಜೋಹರ್​! ಇದೇನು ಗುರು ಹಿಂಗದ್ರು!

ಇದಕ್ಕೆ ಉತ್ತರಿಸಿದ ಛೆತ್ರಿ ಅವರು "ಸರ್, ನಾನು 17 ವರ್ಷಗಳಿಂದ ದೇಶಕ್ಕಾಗಿ ಆಡುತ್ತಿದ್ದೇನೆ. ಸರ್, ಅನೇಕ ದಿನಗಳ ನಂತರ, ಅನೇಕ ಯುವಕರು ಒಂದೇ ಬಾರಿಗೆ ಪ್ರಬುದ್ಧರಾಗುತ್ತಿರುವ ಸಮಯ ಬಂದಿದೆ. ಹಲವಾರು ಪ್ರತಿಭಾವಂತ ಮತ್ತು ಗುರಿಯನ್ನು ಸಾಧಿಸುವ ಛಲ ಮತ್ತು ಆ ಹಸಿವನ್ನು ಹೊಂದಿರುವ ಯುವಕರು ತಂಡದಲ್ಲಿ ಇದ್ದಾರೆ ಮತ್ತು ಪ್ರತಿಯೊಬ್ಬರೂ ದೇಶಕ್ಕಾಗಿ ಒಳ್ಳೆಯದನ್ನು ಮಾಡಲು ಬಯಸುತ್ತಾರೆ" ಎಂದು ಹೇಳಿದರು.

ಮೇರಿ ಕೋಮ್ ಅವರನ್ನು ಹಾದಿ ಹೊಗಳಿದ ಬಚ್ಚನ್
ನಂತರ, ಅಮಿತಾಭ್ ಅವರು ಸುನಿಲ್ ಅವರ ಪಕ್ಕದಲ್ಲಿಯೇ ಹಾಟ್ ಸೀಟ್ ಮೇಲೆ ಕುಳಿತ ಮಹಿಳಾ ಬಾಕ್ಸರ್ ಮೇರಿ ಕೋಮ್ ಮತ್ತು ಅವರ ಸಾಧನೆಗಳ ಬಗ್ಗೆ ಮಾತನಾಡುತ್ತಾರೆ. "ಎಂಸಿ ಮೇರಿ ಕೋಮ್ ಬಗ್ಗೆ ಏನು ಹೇಳಬೇಕು. ಎಂಟು ವಿಶ್ವ ಚಾಂಪಿಯನ್ಶಿಪ್ ಪದಕಗಳನ್ನು ಗೆದ್ದ ವಿಶ್ವದ ಏಕೈಕ ಬಾಕ್ಸರ್ ಅವರು” ಅಂತ ಅಮಿತಾಭ್ ಅವರು ತುಂಬಾನೇ ಹೆಮ್ಮೆಯಿಂದ ಹೇಳುವುದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ: Nayanthara: OTTಯಲ್ಲಿ ಬರ್ತಿದೆ ನಯನತಾರಾ ಮದುವೆ ಮ್ಯಾಜಿಕಲ್ ಡಾಕ್ಯುಮೆಂಟರಿ; ನೆಟ್​ಫಿಕ್ಸ್​ನಿಂದ ಟೀಸರ್ ರಿಲೀಸ್​  

ಆಗ ಮೇರಿ ಕೋಮ್ "ಸರ್ ಸರ್, ವಿಶೇಷವಾಗಿ ಮದುವೆಯ ನಂತರ ಮತ್ತು ತಾಯಿಯಾದ ನಂತರ ಮಹಿಳೆ ದೇಶಕ್ಕಾಗಿ ಆಡುವುದನ್ನು ಮುಂದುವರಿಸುವುದು ಎಂದಿಗೂ ಸುಲಭವಾದ ವಿಷಯವಲ್ಲ" ಎಂದು ಹೇಳುತ್ತಾರೆ.

ನಂತರ, ಛೆತ್ರಿ ತಮ್ಮ ಫುಟ್ಬಾಲ್ ತಂತ್ರಗಳನ್ನು ತೋರಿಸುತ್ತಾರೆ ಮತ್ತು ತಮ್ಮ ಚಲನಚಿತ್ರದ ಒಂದು ಹಾಡನ್ನು ಹಾಡುವಂತೆ ಬಿಗ್ ಬಿ ಯನ್ನು ಸಹ ವಿನಂತಿಸುತ್ತಾರೆ.
Published by:Ashwini Prabhu
First published: