ರಣಜಿ ಟ್ರೋಫಿ: ಗೆಲ್ಲದ ವಿನಯ್ ಬಳಗ: ಡ್ರಾನಲ್ಲಿ ಅಂತ್ಯಕಂಡ ಕರ್ನಾಟಕ-ಗುಜರಾತ್ ಪಂದ್ಯ

ನಿಧಾನಗತಿಯಲ್ಲಿ ಆಟ ಪ್ರದರ್ಶಿಸಿದ ಪರಿಣಾಮ ಅಂತಿಮಾವಗಿ ದಿನದಾಟಕ್ಕೆ ಕರ್ನಾಟಕ 4 ವಿಕೆಟ್ ನಷ್ಟಕ್ಕೆ 107 ರನ್​ ಗಳಿಸಲಷ್ಟೆ ಶಕ್ತವಾಯಿತು. ಹೀಗಾಗಿ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸಲಾಯಿತು.

Vinay Bhat | news18
Updated:December 17, 2018, 5:22 PM IST
ರಣಜಿ ಟ್ರೋಫಿ: ಗೆಲ್ಲದ ವಿನಯ್ ಬಳಗ: ಡ್ರಾನಲ್ಲಿ ಅಂತ್ಯಕಂಡ ಕರ್ನಾಟಕ-ಗುಜರಾತ್ ಪಂದ್ಯ
ವಿನಯ್ ಕುಮಾರ್
  • News18
  • Last Updated: December 17, 2018, 5:22 PM IST
  • Share this:
ಸೂರತ್: ಇಲ್ಲಿನ ಲಾಲಾಭಾಯಿ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಹಾಗೂ ಗುಜರಾತ್ ನಡುವಣ ರಣಜಿ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದೆ. ರಾಜ್ಯಕ್ಕೆ ಗೆಲ್ಲಲು 173 ರನ್​​​ಗಳ ಟಾರ್ಗೆಟ್ ನೀಡಿದ್ದ ಗುಜರಾತ್ ತಂಡ ಕೊನೆಯ ದಿನದಾಟದ ಅಂತ್ಯಕ್ಕೆ 107 ರನ್ ಗಳಿಸಲಷ್ಟೆ ಶಕ್ತವಾಯಿತು.

ಸುಲಭವಾಗಿ ಗೆಲುವು ಸಾಧಿಸಿಬಹುದಾಗಿದ್ದ ಪಂದ್ಯವಾಗಿದ್ದರು ವಿನಯ್ ಬಳಗ ನಿಧಾನಗತಿಯಲ್ಲಿ ಬ್ಯಾಟ್ ಬೀಸಿ ಪಂದ್ಯವನ್ನು ಡ್ರಾ ಮೂಲಕ ಕೊನೆಗೊಳಿಸಿತು. ಕರ್ನಾಟಕವನ್ನು 389 ರನ್​​ಗೆ ಆಲೌಟ್ ಮಾಡಿ ತನ್ನ 2ನೇ ಇನ್ನಿಂಗ್ಸ್​​ ಆರಂಭಿಸಿದ ಗುಜರಾತ್ ತಂಡ 3ನೇ ದಿನದಾಟದ ಅಂತ್ಯಕ್ಕೆ 14 ರನ್​ಗಳ ಮುನ್ನಡೆಯೊಂದಿಗೆ 3 ವಿಕೆಟ್ ಕಳೆದುಕೊಂಡು 187 ರನ್ ಗಳಿಸಿತ್ತು. ಕೊನೆಯ ದಿನವಾದ ಇಂದು ಅದ್ಭುತ ಆಟ ಪ್ರದರ್ಶಿಸಿದ ಮನ್​ಪ್ರೀತ್ ಜುನೆಜಾ ಹಾಗೂ ರುಜುಲ್ ಭಟ್ 74 ರನ್​ಗಳ ಜೊತೆಯಾಟ ಆಡಿದರು.

ಇದನ್ನೂ ಓದಿ: ಯುವರಾಜ್ ಸಿಂಗ್ 2019 ವಿಶ್ವಕಪ್​​​ನಲ್ಲಿ ಆಡಬೇಕು: ಯಾಕಂತೀರಾ? ಈ ಸ್ಟೋರಿ ಓದಿ

ಮನ್​ಪ್ರೀತ್ 98 ಹಾಗೂ ರುಜುಲ್ 91 ರನ್​ಗಳ ನೆರವಿನಿಂದ ಗುಜರಾತ್ ತಂಡ 345 ರನ್​ಗೆ ಸರ್ವಪತನ ಕಂಡಿತು. ಈ ಮೂಲಕ ಕರ್ನಾಟಕಕ್ಕೆ ಗೆಲ್ಲಲು 173 ರನ್​ಗಳ ಗುರಿ ನೀಡಿತು. ರಾಜ್ಯ ತಂಡದ ಪರ ಕೃಷ್ಣಪ್ಪ ಗೌತಮ್ ಹಾಗೂ ರೋನಿತ್ ಮೋರ್ ತಲಾ 4 ವಿಕೆಟ್ ಕಿತ್ತರು.

173 ರನ್​ಗಳ ಗುರಿ ಬೆನ್ನತ್ತಿದ ಕರ್ನಾಟಕ ಆರಂಭದಲ್ಲೇ ದೇವದತ್ ಪಡಿಕ್ಕಲ್(0) ವಿಕೆಟ್ ಕಳೆದುಕೊಂಡಿತು. ಬಳಿಕ ಮಯಾಂಕ್ ಅಗರ್ವಾಲ್ ಬಿರುಸಿನ ಬ್ಯಾಟಿಂಗ್ ನಡೆಸಿ 53 ರನ್​ ಬಾರಿಸಿದರು. ಅಂತೆಯೆ ರವಿಕುಮಾರ್ 33 ರನ್ ಗಳಿಸಿ ಔಟ್ ಆದರು.

ಇದನ್ನೂ ಓದಿ: ರಣಜಿ ಟ್ರೋಫಿ: ಕರ್ನಾಟಕ 389 ಆಲೌಟ್: ಗುಜರಾತ್​ಗೆ 14 ರನ್ಸ್​​ ಮುನ್ನಡೆ

ಬಳಿಕ ನಿಧಾನಗತಿಯಲ್ಲಿ ಆಟ ಪ್ರದರ್ಶಿಸಿದ ಪರಿಣಾಮ ಅಂತಿಮಾವಗಿ ದಿನದಾಟಕ್ಕೆ ಕರ್ನಾಟಕ 4 ವಿಕೆಟ್ ನಷ್ಟಕ್ಕೆ 107 ರನ್​ ಗಳಿಸಲಷ್ಟೆ ಶಕ್ತವಾಯಿತು. ಹೀಗಾಗಿ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸಲಾಯಿತು. ಕರ್ನಾಟಕ 3 ಅಂಕ ಪಡೆದಿದ್ದರೆ, ಗುಜರಾತ್​ 1 ಅಂಕ ತನ್ನದಾಗಿಸಿತು. ಈ ಮೂಲಕ ಕರ್ನಾಟಕ ಆಡಿದ 5 ಪಂದ್ಯಗಳಲ್ಲಿ 1ರಲ್ಲಿ ಜಯ ಹಾಗೂ ಸೋಲುಕಂಡು 3 ಪಂದ್ಯ ಡ್ರಾ ಆಗಿ ಒಟ್ಟು 15 ತನ್ನ ಖಾತೆಗೆ ಸೇರಿಸಿಕೊಂಡಿದೆ.
First published:December 17, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading