• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IPL ಸಮಾರೋಪ ಸಮಾರಂಭದಲ್ಲಿ ಬಾಲಿವುಡ್​ ತಾರೆಯರ ಜೊತೆ ಕರ್ನಾಟಕ, ಜಾರ್ಖಂಡ್‌ನ ಜಾನಪದ ಕಲಾ ಪ್ರದರ್ಶನ

IPL ಸಮಾರೋಪ ಸಮಾರಂಭದಲ್ಲಿ ಬಾಲಿವುಡ್​ ತಾರೆಯರ ಜೊತೆ ಕರ್ನಾಟಕ, ಜಾರ್ಖಂಡ್‌ನ ಜಾನಪದ ಕಲಾ ಪ್ರದರ್ಶನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಐಪಿಎಲ್ 2022ರ ಈ ಬಾರಿ ಸಮಾರೋಪ ಸಮಾರಂಭ ವಿಶೇಷವಾಗಿದ್ದು, ಕರ್ನಾಟಕ (Karnataka) ಜಾನಪದ ಕಲಾ ತಂಡಗಳು ಸಹ ಇದರಲ್ಲಿ ಪಾಲ್ಗೊಳುತ್ತಿದೆ.

  • Share this:

ಐಪಿಎಲ್ 2022 (IPL 2022) 15ನೇ ಆವೃತ್ತಿಯ ಪೈನಲ್ ಪಂದ್ಯದಲ್ಲಿ ಈ ಬಾರಿ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (GT vs RR) ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ (Narendra Modi Stadium) ನಡೆಯಲಿದೆ. ಈಗಾಗಲೇ ಪಂದ್ಯದ ಟಿಕೆಟ್‌ಗಳನ್ನು ಬಿಸಿಸಿಐ (BCCI) ಈಗಾಗಲೇ ಆನ್‌ಲೈನ್‌ನಲ್ಲಿ ಮಾರಾಟ ಮಾಡಿದೆ. ಕೊರೋನಾ ನಿರ್ಬಂಧಗಳನ್ನು ತೆಗೆದುಹಾಕುವುದರೊಂದಿಗೆ, 100 ಪ್ರತಿಶತ ಪ್ರೇಕ್ಷಕರ ನಡುವೆ ಪಂದ್ಯಗಳನ್ನು ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಫೈನಲ್ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದ್ದು, ಐಪಿಎಲ್ 2022 ರ ಸಮಾರೋಪ ಸಮಾರಂಭವು ಟಾಸ್‌ಗೆ ಒಂದು ಗಂಟೆ ಮೊದಲು ನಡೆಯಲಿದೆ ಎಂದು BCCI ಅಧಿಕೃತವಾಗಿ ತಿಳಿಸಿದೆ. ಅದರಲ್ಲಿಯೂ ಈ ಬಾರಿ ಸಮಾರೋಪ ಸಮಾರಂಭ ವಿಶೇಷವಾಗಿದ್ದು, ಕರ್ನಾಟಕ (Karnataka) ಜಾನಪದ ಕಲಾ ತಂಡಗಳು ಸಹ ಇದರಲ್ಲಿ ಪಾಲ್ಗೊಳುತ್ತಿದೆ.


ಐಪಿಎಲ್ ಫೈನಲ್ ಕಾರ್ಯಕ್ರಮದಲ್ಲಿ ಕರ್ನಾಟಕದ ಜಾನಪದ ಕಲೆ:


ಹೌದು, ಈಗಾಗಲೇ ಐಪಿಎಲ್ 2022ರ ಫೈನಲ್ ಪಂದ್ಯಕ್ಕೆ ಕೆಲವೇ ಕ್ಷಣಗಳು ಬಾಕಿ ಉಳಿದಿವೆ. ಇದರ ನಡುವೆ ಪಂದ್ಯಕ್ಕೂ ಒಂದು ಗಂಟೆ ಮೊದಲು ಸಮಾರೋಪ ಸಮಾರಂಬ ಇರಲಿದ್ದು, ಬಾಲಿವುಡ್ ತಾರೆಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಇದರ ಜೊತೆಗೆ ನಮ್ಮ ಕರ್ನಾಟಕ ರಾಜ್ಯದ ಜಾನಪದ ಕಲೆಯ ಪ್ರದರ್ಶನವೂ ಸಹ ನಡೆಯಲಿದೆ ಎಂದು ತಿಳಿದುಬಂದಿದೆ. ಈಗಾಗಲೇ ಮಂಡ್ಯದ ಕಲಾ ತಂಡಗಳು ಗುಜರಾತ್ ತಲುಪಿದ್ದು, ಸಂಜೆಯ ಕಾರ್ಯಕ್ರಮದ್ಲಲಿ ಕಲಾ ಪ್ರದರ್ಶನ ನಡೆಸಿಕೊಡಲಿದ್ದಾರೆ.


ಮಂಡ್ಯದ ಬಸವರಾಜು ಮತ್ತು ಚಿಕ್ಕ ಬೋರಯ್ಯ ನೇತೃತ್ವದ ಜಾನಪದ ಕಲಾ ತಂಡಗಳು ಸಮಾರೋಪ ಸಮಾರಂಭದಲ್ಲಿ ಡೊಳ್ಳು ಕುಣಿತ, ವೀರಗಾಸೆ, ಪೂಜಾ ಕುಣಿತ ಮತ್ತು ಕೆಲ ಆಯ್ದ ಚರ್ಮ ವಾದ್ಯಗಳ ಕಲಾ ಪ್ರದರ್ಶನವು ನಡೆಯಲಿದೆ. ಅದಲ್ಲದೇ ಜಾರ್ಖಂಡ್‌ನ ಪ್ರಸಿದ್ಧ ಚೌ ನೃತ್ಯವೂ ವಿಶೇಷ ಆಕರ್ಷಣೆಯಾಗಿ ಪ್ರದರ್ಶನಗೊಳ್ಳಲಿದೆ. ಇದಕ್ಕಾಗಿ ಬಿಸಿಸಿಐ ಜಾರ್ಖಂಡ್‌ನ 10 ನೃತ್ಯ ನಿರ್ದೇಶಕರ ತಂಡವನ್ನು ಅಂತಿಮಗೊಳಿಸಿದೆ.


ಇದನ್ನೂ ಓದಿ: IPL 2022: ಐಪಿಎಲ್ ಸಮಾರೋಪ ಸಮಾರಂಭದಲ್ಲಿ ಬಾಲಿವುಡ್​ ತಾರೆಯರ ರಂಗು, ಇಲ್ಲಿದೆ ಫುಲ್ ಡೀಟೇಲ್ಸ್​


ರೆಹಮಾನ್ ಸಂಗೀತ ಸಂಜೆ ಮತ್ತು ರಣವೀರ್ ನೃತ್ಯ:


ಸಮಾರೋಪ ಸಮಾರಂಭದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಬಿಸಿಸಿಐ ಗೌರವ ಕಾರ್ಯದರ್ಶಿ ಜಯ್ ಶಾ ಮತ್ತು ಭಾರತದ ಮಾಜಿ ನಾಯಕರು ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ನೃತ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಸಂಗೀತ ಮಾಂತ್ರಿಕ, ಆಸ್ಕರ್ ವಿಜೇತ ಎಆರ್ ರೆಹಮಾನ್ ಸಂಗೀತ ಸಂಜೆ ಸಹ ಇರಲಿದೆ. ಅದಲ್ಲದೇ ಸಮಾರೋಪ ಸಮಾರಂಭದಲ್ಲಿ ಜಾರ್ಖಂಡ್‌ನ ಪ್ರಸಿದ್ಧ ಚೌ ನೃತ್ಯವೂ ವಿಶೇಷ ಆಕರ್ಷಣೆಯಾಗಿ ಪ್ರದರ್ಶನಗೊಳ್ಳಲಿದೆ.


ಐಪಿಎಲ್ 2022 ಸಮಾರೋಪ ಸಮಾರಂಭ:


ಸಮಾರಂಭವು ಸಂಜೆ 6.15ಕ್ಕೆ ಪ್ರಾರಂಭವಾಗುತ್ತದೆ ಮತ್ತು 40 ನಿಮಿಷಗಳವರೆಗೆ ಇರುತ್ತದೆ. ಸಂಜೆ 7 ಗಂಟೆಗೆ ಸಮಾರೋಪ ಸಮಾರಂಭ ಮುಕ್ತಾಯವಾಗುತ್ತದೆ. ನಂತರ 7.30ಕ್ಕೆ ಉಭಯ ತಂಡಗಳ ನಾಯಕರು ಟಾಸ್‌ಗಾಗಿ ಮೈದಾನಕ್ಕೆ ಬರುತ್ತಾರೆ. ಪಂದ್ಯ ರಾತ್ರಿ 8 ಗಂಟೆಗೆ ಪ್ರಾರಂಭವಾಗುತ್ತದೆ. ಸಮಾರೋಪ ಸಮಾರಂಭವು ವಿಶೇಷವಾಗಿ ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಗುರುತಿಸುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದಲ್ಲದೇ 75 ವರ್ಷಗಳಲ್ಲಿ ಭಾರತದಲ್ಲಿ ಕ್ರಿಕೆಟ್ ಹೇಗೆ ಆಳ್ವಿಕೆ ನಡೆಸಿದೆ ಎಂಬುದನ್ನು ತೋರಿಸಲು ಬೃಹತ್ ಪರದೆಯ ಮೇಲೆ ಪ್ರಸ್ತುತಿಯನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಗುತ್ತದೆ.


ಇದನ್ನೂ ಓದಿ: IPL 2022 Final GT vs RR: ಗುಜರಾತ್ ತಂಡಕ್ಕೆ ರಾಜಸ್ಥಾನ್ ಸವಾಲ್, ಯಾರಾಗಲಿದ್ದಾರೆ ಐಪಿಎಲ್ ಚಾಂಪಿಯನ್?


GT vs RR ಸಂಭಾವ್ಯ ತಂಡ:


ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ (WK), ಶುಭಮನ್ ಗಿಲ್, ಮ್ಯಾಥ್ಯೂ ವೇಡ್, ಹಾರ್ದಿಕ್ ಪಾಂಡ್ಯ (C), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಯಶ್ ದಯಾಲ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ.


ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (c & wk), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಓಬೇದ್ ಮೆಕಾಯ್, ಯುಜ್ವೇಂದ್ರ ಚಹಾಲ್.

top videos
    First published: