ವಿಜಯ್ ಹಜಾರೆ ಟ್ರೋಫಿ: ಫೈನಲ್​ಗೆ ಕರ್ನಾಟಕ ಮತ್ತು ತಮಿಳುನಾಡು

ಅಕ್ಟೋಬರ್ 25ರಂದು ವಿಜಯ್ ಹಜಾರೆ ಟ್ರೋಫಿಗಾಗಿ ಅಂತಿಮ ಘಟ್ಟದಲ್ಲಿ ಕರ್ನಾಟಕ ಮತ್ತು ತಮಿಳುನಾಡು ತಂಡಗಳು ಮುಖಾಮುಖಿಯಾಗಲಿವೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಈ ಪಂದ್ಯದಲ್ಲಿ ಕರ್ನಾಟಕವೇ ಫೇವರಿಟ್ ಎನಿಸಿದೆ.

Vijayasarthy SN | news18-kannada
Updated:October 23, 2019, 5:03 PM IST
ವಿಜಯ್ ಹಜಾರೆ ಟ್ರೋಫಿ: ಫೈನಲ್​ಗೆ ಕರ್ನಾಟಕ ಮತ್ತು ತಮಿಳುನಾಡು
ಕ್ರಿಕೆಟ್ ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು(ಅ. 23): ಕರ್ನಾಟಕ ಮತ್ತು ತಮಿಳುನಾಡು ಕ್ರಿಕೆಟ್ ತಂಡಗಳು ಈ ವರ್ಷದ ವಿಜಯ್ ಹಜಾರೆ ಟ್ರೋಫಿ ಫೈನಲ್ ತಲುಪಿವೆ. ಇಂದು ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಕರ್ನಾಟಕ ತಂಡ ಛತ್ತೀಸ್​ಗಡವನ್ನು 9 ವಿಕೆಟ್​ಗಳಿಂದ ಸುಲಭವಾಗಿ ಮಣಿಸಿತು. ಮತ್ತೊಂದು ಸಮಿಫೈನಲ್​ನಲ್ಲಿ ಗುಜರಾತ್ ವಿರುದ್ಧ ತಮಿಳುನಾಡು 5 ವಿಕೆಟ್​​ಗಳಿಂದ ಸೋಲಿಸಿತು.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮೊದಲ ಸೆಮಿಫೈನಲ್​ನಲ್ಲಿ ಕರ್ನಾಟಕ ಕ್ರಿಕೆಟ್ ತಂಡದ ಬೌಲಿಂಗ್ ಮತ್ತು ಬ್ಯಾಟಿಂಗ್ ಅಬ್ಬರಕ್ಕೆ ಛತ್ತೀಸ್​ಗಡ ತಂಡ ಧೂಳೀಪಟವಾಯಿತು. ವಿ. ಕೌಶಿಕ್ ಅವರ ಮಾರಕ ಬೌಲಿಂಗ್​ಗೆ ಸಿಕ್ಕು ಛತ್ತೀಸ್​ಗಡ ಐವತ್ತನೇ ಓವರ್​ನಲ್ಲಿ 223 ರನ್​ಗೆ ಆಲೌಟ್ ಆಯಿತು. ಪ್ರಬಲ ಬ್ಯಾಟಿಂಗ್ ಪಡೆ ಹೊಂದಿರುವ ಕರ್ನಾಟಕ ತಂಡ ಕೇವಲ 40 ಓವರ್​​ನಲ್ಲಿ ಗುರಿ ಮುಟ್ಟಿ ಫೈನಲ್ ತಲುಪಿತು.

ಇದನ್ನೂ ಓದಿ: ಬಿಸಿಸಿಐನಲ್ಲಿ ದಾದಾಗಿರಿ ಆರಂಭ; 39ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸೌರವ್ ಗಂಗೂಲಿ

ದೇವದತ್ ಪಡಿಕ್ಕಲ್, ಕೆಎಲ್ ರಾಹುಲ್ ಮತ್ತು ಮಯಂಕ್ ಅಗರ್ವಾಲ್ ಅವರು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಎದುರಾಳಿ ಬೌಲರ್​ಗೆ ಒಂದಿಷ್ಟೂ ಅವಕಾಶ ಕೊಡಲಿಲ್ಲ. ಇಡೀ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಪಡಿಕ್ಕಲ್ ಕೇವಲ 8 ರನ್ನಿಂದ ಶತಕ ವಂಚಿತರಾದರು. ರಾಹುಲ್ ಅಜೇಯ 88 ಮತ್ತು ಮಯಂಕ್ ಅಗರ್ವಾಲ್ ಅಜೇಯ 47 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಇದಕ್ಕೂ ಮುಂಚೆ, ಮೊದಲು ಬ್ಯಾಟ್ ಮಾಡಿದ ಛತ್ತೀಸ್​​ಗಡ ತಂಡ 35 ರನ್ನಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಮನ್​ದೀಪ್ ಖರೆ ಒಬ್ಬರೇ ತಕ್ಕಮಟ್ಟಿಗೆ ಕರ್ನಾಟಕ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದು. ಕರ್ನಾಟಕದ ಮಧ್ಯಮ ವೇಗಿ ವಿ. ಕೌಶಿಕ್ 4 ವಿಕೆಟ್ ಪಡೆದು ಗಮನ ಸೆಳೆದರು. ಮತ್ತೊಬ್ಬ ವೇಗಿ ಅಭಿಮನ್ಯು ಮಿಥುನ್, ಸ್ಪಿನ್ನರ್​ಗಳಾದ ಕೆ. ಗೌತಮ್ ಮತ್ತು ಪ್ರವೀಣ್ ದುಬೆ ಅವರು ತಲಾ ಎರಡೆರಡು ವಿಕೆಟ್ ಪಡೆದರು.

ಇದನ್ನೂ ಓದಿ: ಇಂಟರ್​ನೆಟ್​ನಲ್ಲಿ ಧೋನಿ ಅಂತ ಸರ್ಚ್​ ಮಾಡುವ ಮುನ್ನ ಯೋಚಿಸಿ; ಇಲ್ಲಿದೆ ಆಘಾತಕಾರಿ ಸುದ್ದಿ!

ಗುಜರಾತ್ ವಿರುದ್ಧ ತಮಿಳುನಾಡಿಗೆ ಗೆಲುವು:ಇದೇ ವೇಳೆ, ಯಲಹಂಕದ ಜಸ್ಟ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮತ್ತೊಂದು ಸೆಮಿಫೈನಲ್​ನಲ್ಲಿ ಗುಜರಾತ್ ವಿರುದ್ಧ ತಮಿಳುನಾಡು ಜಯಭೇರಿ ಭಾರಿಸಿತು. ಮಳೆಯಿಂದಾಗಿ 40 ಓವರ್​ಗೆ ಮೊಟಕುಗೊಂಡ ಈ ಪಂದ್ಯದಲ್ಲಿ ಗುಜರಾತ್ 177 ರನ್ ಗಳಿಸಿತು. ಗೆಲ್ಲಲು 178 ರನ್ ಗುರಿ ಪಡೆದ ತಮಿಳುನಾಡು 6 ಎಸೆತ ಬಾಕಿ ಇರುವಂತೆ 5 ವಿಕೆಟ್​ಗಳಿಂದ ಗೆಲುವಿನ ದಡ ಮುಟ್ಟಿತು. ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಲು ಯತ್ನಿಸುತ್ತಿರುವ ವಿಕೆಟ್​ಕೀಪರ್ ಬ್ಯಾಟ್ಸ್​ಮನ್ ದಿನೇಶ್ ಕಾರ್ತಿಕ್ 47 ರನ್ ಗಳಿಸಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ವಾಷಿಂಗ್ಟನ್ ಸುಂದರ್ ಮತ್ತು ಶಾರುಕ್ ಖಾನ್(ಅಜೇಯ 56 ರನ್) ಇಬ್ಬರೂ 6ನೇ ವಿಕೆಟ್​ಗೆ 85 ರನ್​ಗಳ ಮುರಿಯದ ಜೊತೆಯಾಟದಲ್ಲಿ ಭಾಗಿಯಾದರು.

ಅಕ್ಟೋಬರ್ 25ರಂದು ವಿಜಯ್ ಹಜಾರೆ ಟ್ರೋಫಿಗಾಗಿ ಅಂತಿಮ ಹಣಾಹಣಿ ನಡೆಯಲಿದೆ. ದಕ್ಷಿಣ ಭಾರತದ ಪ್ರಬಲ ತಂಡಗಳೆನಿಸಿದ ಕರ್ನಾಟಕ ಮತ್ತು ತಮಿಳುನಾಡು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಇಡೀ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಕರ್ನಾಟಕ ತಂಡವೇ ಫೈನಲ್​ನಲ್ಲೂ ಗೆಲ್ಲುವ ನೆಚ್ಚಿನ ಟೀಮ್ ಎನಿಸಿದೆ.

ಇದನ್ನೂ ಓದಿ: ಪ್ರತಿಭಟನೆ ಹಿನ್ನಲೆ; ಬಾಂಗ್ಲಾದೇಶ ಬದಲು ಟೀಂ ಇಂಡಿಯಾ ಪ್ರವಾಸ ಕೈಗೊಳ್ಳಲಿದೆ ಈ ತಂಡ?

ಕರ್ನಾಟಕ-ಛತ್ತೀಸ್​ಗಡ ಸಮಿಫೈನಲ್ ಪಂದ್ಯದ ಸ್ಕೋರು ವಿವರ:

ಛತ್ತೀಸ್​ಗಡ 49.4 ಓವರ್ 223/10
(ಅಮನ್​ದೀಪ್ ಖರೆ 78, ಸುಮಿತ್ ರೂಯ್ಕರ್ 40, ಅಜಯ್ ಮಂಡಲ್ 26, ಹರಪ್ರೀತ್ ಸಿಂಗ್ 25 ರನ್ – ವಿ. ಕೌಶಿಕ್ 46/4, ಕೆ. ಗೌತಮ್ 30/2, ಪ್ರವೀಣ್ ದುಬೇ 43/2, ಅಭಿಮನ್ಯು ಮಿಥುನ್ 44/2)

ಕರ್ನಾಟಕ 40 ಓವರ್ 229/1
(ದೇವದತ್ ಪಡಿಕ್ಕಲ್ 92, ಕೆಎಲ್ ರಾಹುಲ್ ಅಜೇಯ 88, ಮಯಂಕ್ ಅಗರ್ವಾಲ್ ಅಜೇಯ 47 ರನ್)
First published: October 23, 2019, 5:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading