59ರ ವಯಸ್ಸಿನಲ್ಲೂ ಭಾರತವನ್ನು ಮತ್ತೊಮ್ಮೆ ಪ್ರತಿನಿಧಿಸಲಿದ್ದಾರೆ ಕಪಿಲ್ ದೇವ್

news18
Updated:July 30, 2018, 2:05 PM IST
59ರ ವಯಸ್ಸಿನಲ್ಲೂ ಭಾರತವನ್ನು ಮತ್ತೊಮ್ಮೆ ಪ್ರತಿನಿಧಿಸಲಿದ್ದಾರೆ ಕಪಿಲ್ ದೇವ್
news18
Updated: July 30, 2018, 2:05 PM IST
ನ್ಯೂಸ್ 18 ಕನ್ನಡ

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅವರು ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಮೊದಲ ನಾಯಕ. ಸದ್ಯ ಕ್ರಿಕೆಟ್‌ಗೆ ವಿದಾಯ ಹೇಳಿ 24 ವರ್ಷಗಳೇ ಉರುಳಿವೆ. 59 ವರ್ಷದ ಕಪಿಲ್ ದೇವ್ ಮತ್ತೆ ಭಾರತ ತಂಡದ ಜರ್ಸಿ ತೊಡಲು ರೆಡಿಯಾಗಿದ್ದಾರೆ. ಆದರೆ ಈ ಬಾರಿ ಕಪಿಲ್ ಅವರು ಪ್ರತಿನಿಧಿಸುತ್ತಿರುವುದು ಕ್ರಿಕೆಟ್ ತಂಡದಲ್ಲಲ್ಲ, ಬದಲಾಗಿ ಭಾರತ ಗಾಲ್ಫ್ ತಂಡದಲ್ಲಿ.

ಭಾರತದ ಹಿರಿಯ ಗಾಲ್ಫ್ ತಂಡಕ್ಕೆ ಕಪಿಲ್ ದೇವ್ ಅವರು ಆಯ್ಕಯಾಗಿದ್ದಾರೆ. 2018ರ ಏಷ್ಯಾ ಪೆಸಿಫಿಕ್ ಸೀನಿಯರ್ಸ್ ಗಾಲ್ಫ್ ಟೂರ್ನಿಯಲ್ಲಿ ಕಪಿಲ್ ದೇವ್ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಅಕ್ಟೋಬರ್​​ 17 ರಿಂದ 19ರ ತನಕ ಈ ಟೂರ್ನಿ ನಡೆಯಲಿದ್ದು, 55 ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಿನ ಪುರುಷ ಗಾಲ್ಫ್ ಆಟಗಾರರು ಈ ಟೂರ್ನಿಯಲ್ಲಿ ಸ್ಪರ್ಧಿಸಲಿದ್ದಾರೆ.

 


Loading...ಕಪಿಲ್ ದೇವ್ ಒಟ್ಟು 225 ಏಕದಿನ ಪಂದ್ಯವನ್ನಾಡಿದ್ದು, 253 ವಿಕೆಟ್ ಕಬಳಿಸಿದ್ದಾರೆ. ಅಂತೆಯೆ 131 ಟೆಸ್ಟ್​ ಪಂದ್ಯದಲ್ಲಿ 434 ವಿಕೆಟ್ ಕಿತ್ತಿದ್ದಾರೆ.
First published:July 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...