2019ರ ವಿಶ್ವಕಪ್​ನಲ್ಲಿ ಕರ್ನಾಟಕದ ಈ ಆಟಗಾರನಿಗೆ ಅವಕಾಶ ನೀಡಲೇಬೇಕೆಂದ ಕಪಿಲ್ ದೇವ್

news18
Updated:October 3, 2018, 2:06 PM IST
2019ರ ವಿಶ್ವಕಪ್​ನಲ್ಲಿ ಕರ್ನಾಟಕದ ಈ ಆಟಗಾರನಿಗೆ ಅವಕಾಶ ನೀಡಲೇಬೇಕೆಂದ ಕಪಿಲ್ ದೇವ್
  • Advertorial
  • Last Updated: October 3, 2018, 2:06 PM IST
  • Share this:
ನ್ಯೂಸ್ 18 ಕನ್ನಡ

ವಿಶ್ವಕಪ್ ಶುರುವಾಗಲು ಇನ್ನೇನು ಕೇವಲ 7 ತಿಂಗಳುಗಳು ಬಾಕಿ ಉಳಿದಿದ್ದು, ಈ ಮಧ್ಯೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ವಿಶ್ವಕಪ್​​ನಲ್ಲಿ ಕನ್ನಡಿಗ ಕೆಎಲ್ ರಾಹುಲ್​​ಗೆ ಆಡುವ 11ರ ಬಳಗದಲ್ಲಿ ಸ್ಥಾನ ನೀಡಬೇಕು ಎಂದು ಹೇಳಿದ್ದಾರೆ.

ಟಿ-20 ಹಾಗೂ ಟೆಸ್ಟ್​ ಕ್ರಿಕೆಟ್​ನಲ್ಲಿ ರಾಹುಲ್ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಈಗಾಗಲೇ ಸಾಬೀತು ಪಡಿಸಿದ್ದಾರೆ. ಆದರೆ ಏಕದಿನ ಕ್ರಿಕೆಟ್​​ನಲ್ಲಿ ಅವರಿಗೆ ಸಾಕಷ್ಟು ಅವಕಾಶ ಸಿಗುತ್ತಿಲ್ಲ. 2019ರ ವಿಶ್ವಕಪ್​​ಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವುದರಿಂದ ತಂಡದ ಮ್ಯಾನೇಜ್​ಮೆಂಟ್ ರಾಹುಲ್​ಗೆ ಅವಕಾಶ ನೀಡುವುದರ ಬಗ್ಗೆ ಚರ್ಚಿಸಬೇಕಾಗಿದೆ ಎಂದಿದ್ದಾರೆ. ಇನ್ನು ರಾಹುಲ್ ಕೇವಲ ಆರಂಭಿಕ ಆಟಗಾರನಲ್ಲದೆ ಮಧ್ಯಮ ಕ್ರಮಾಂಕದಲ್ಲೂ ಬ್ಯಾಟ್ ಬೀಸುವ ಸಾಮರ್ಥ್ಯ ಹೊಂದಿದ್ದಾರೆ, ಹೀಗಾಗಿ ಮಧ್ಯಮ ಕ್ರಮಾಂಕದ ಯಾವುದಾದರು ಒಂದು ಸ್ಥಾನದಲ್ಲಿ ರಾಹುಲ್​ಗೆ ಅವಕಾಶ ನೀಡಿದರೆ ಭಾರತ ತಂಡ ನಿಜಕ್ಕೂ ಬಲಿಷ್ಠ ತಂಡವಾಗಲಿದೆ ಎಂದಿದ್ದಾರೆ.

ಮೊನ್ನೆಯಷ್ಟೇ ಮುಕ್ತಾಯಗೊಂಡ ಏಷ್ಯಾ ಕಪ್​​ಗೆ ರಾಹುಲ್ ಆಯ್ಕೆಯಾಗಿದ್ದರಾದರು ಅವರಿಗೆ ಆಡಲು ಅವಕಾಶ ಸಿಕ್ಕಿದ್ದು ಮಾತ್ರ ಕೇವಲ ಒಂದು ಪಂದ್ಯದಲ್ಲಿ. ಅಫ್ಘಾನಿಸ್ತಾನ ವಿರುದ್ಧ ಆಡಿದ ಒಂದು ಪಂದ್ಯದಲ್ಲಿ ರಾಹುಲ್ 66 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸ್​ನೊಂದಿಗೆ 60 ರನ್ ಬಾರಿಸಿದ್ದರು. ಇನ್ನು ಒಟ್ಟು 29 ಟೆಸ್ಟ್​ ಪಂದ್ಯವನ್ನು ಆಡಿರುವ ರಾಹುಲ್ 1811 ರನ್ ಕಲೆಹಾಕಿದ್ದಾರೆ. 199 ರನ್ ಬಾರಿಸಿರುವುದು ಇವರ ಶ್ರೇಷ್ಠ ಸ್ಥಾಧನೆಯಾಗಿದೆ. ಆದರೆ ಏಕದಿನ ಕ್ರಿಕೆಟ್​ನಲ್ಲಿ ಇವರು ಆಡಿದ್ದು ಕೇವಲ 13 ಪಂದ್ಯಗಳನ್ನು ಅಷ್ಟೆ. ಇದರಲ್ಲಿ 317 ರನ್ ಗಳಿಸಿದ್ದು, ಅಜೇಯ 100 ಇವರ ಗರಿಷ್ಠ ಸ್ಕೋರ್ ಆಗಿದೆ. ಹೀಗಾಗಿ ಏಕದಿನ ಕ್ರಿಕೆಟ್​​ನಲ್ಲಿ ರಾಹುಲ್​​ಗೆ ಇನ್ನಷ್ಟು ಅವಕಾಶ ನೀಡಿ, 2019 ವಿಶ್ವಕಪ್​​​ ವೇಳೆಗೆ ಒಬ್ಬ ಅತ್ಯುತ್ತಮ ಬ್ಯಾಟ್ಸ್​ಮನ್​​ ಆಗಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.
First published:October 2, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ