ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕೇನ್ ವಿಲಿಯಮ್ಸನ್ (Kane Williamson) ಅವರು ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ (NZC) ಗುರುವಾರ ತಿಳಿಸಿದೆ, ಅವರ ಬದಲಿಗೆ ಅನುಭವಿ ವೇಗದ ಬೌಲರ್ ಟಿಮ್ ಸೌಥಿ (Tim Southee) ಅವರನ್ನು ಕ್ರಿಕೆಟ್ನ ಸುದೀರ್ಘ ಸ್ವರೂಪದಲ್ಲಿ ತಂಡವನ್ನು ಮುನ್ನಡೆಸಲು ನೇಮಿಸಲಾಗಿದೆ. ಟಾಮ್ ಲ್ಯಾಥಮ್ ಅವರನ್ನು ಉಪನಾಯಕರನ್ನಾಗಿ ಮಾಡಲಾಗಿದೆ. ಆದರೆ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಕೇನ್ ವಿಲಿಯಮ್ಸನ್ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ.
ಸೌಥಿ ಮುಂದಿನ ನಾಯಕ:
32 ವರ್ಷದ ಕೇನ್ ವಿಲಿಯಮ್ಸನ್ ಅವರು ಕೆಲಸದ ಹೊರೆಯನ್ನು ನಿರ್ವಹಿಸಲು ಮ್ಯಾನೇಜ್ಮೆಂಟ್ನೊಂದಿಗೆ ಮಾತನಾಡಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಟಿಮ್ ಸೌಥಿ ನ್ಯೂಜಿಲೆಂಡ್ನ 31ನೇ ಟೆಸ್ಟ್ ನಾಯಕರಾಗಲಿದ್ದಾರೆ. ಸೌಥಿ ನಾಯಕತ್ವದಲ್ಲಿ, ಕಿವೀಸ್ ತಂಡವು ಈ ತಿಂಗಳ ಅಂತ್ಯದಲ್ಲಿ ಪಾಕಿಸ್ತಾನಕ್ಕೆ ಪ್ರವಾಸ ಮಾಡಲಿದ್ದು, ನ್ಯೂಜಿಲೆಂಡ್ ತಂಡವು ಆತಿಥೇಯ ತಂಡದೊಂದಿಗೆ 2 ಟೆಸ್ಟ್ ಮತ್ತು 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈ ಸರಣಿಯು ಡಿಸೆಂಬರ್ 26 ರಿಂದ ಜನವರಿ 13, 2023ರ ವರೆಗೆ ನಡೆಯಲಿದೆ. ಬಳಿಕ ನ್ಯೂಜಿಲ್ಯಾಂಡ್ ತಂಡವು ಭಾರತ ಪ್ರವಾಸವನ್ನೂ ಕೈಗೊಳ್ಳಲಿದೆ.
Kane Williamson will step down as captain of the BLACKCAPS Test side, with Tim Southee to take up the leadership mantle. Tom Latham has been confirmed as Test vice-captain, after previously leading the side in Williamson’s absence. #CricketNation https://t.co/D9rPWUl05d
— BLACKCAPS (@BLACKCAPS) December 14, 2022
ಕೇನ್ ವಿಲಿಯಮ್ಸನ್ ನಾಯಕತ್ವದಲ್ಲಿ ಕಿವೀಸ್ ತಂಡ 22 ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಂಡಿದೆ. ಕೇನ್ ವಿಲಿಯಮ್ಸನ್ ಟೆಸ್ಟ್ ನಾಯಕತ್ವವನ್ನು ವಹಿಸಿಕೊಂಡು 6 ವರ್ಷಗಳ ನಂತರ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 2016ರಲ್ಲಿ ಬ್ರೆಂಡನ್ ಮೆಕಲಮ್ ನಂತರ ಟೆಸ್ಟ್ ತಂಡದ ನಾಯಕತ್ವವನ್ನು ಹಸ್ತಾಂತರಿಸಲಾಯಿತು. ವಿಲಿಯಮ್ಸನ್ 38 ಟೆಸ್ಟ್ ಪಂದ್ಯಗಳಲ್ಲಿ ಕಿವೀಸ್ ತಂಡವನ್ನು ಮುನ್ನಡೆಸಿದ್ದರು. ಈ ಅವಧಿಯಲ್ಲಿ ನ್ಯೂಜಿಲೆಂಡ್ 22 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ವಿಲಿಯಮ್ಸನ್ ನಾಯಕತ್ವದಲ್ಲಿ, ನ್ಯೂಜಿಲೆಂಡ್ ತಂಡವು ಕಳೆದ ವರ್ಷ ಫೈನಲ್ನಲ್ಲಿ ಭಾರತವನ್ನು ಸೋಲಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2021 ಅನ್ನು ಗೆದ್ದುಕೊಂಡಿತ್ತು.
ಕೇನ್ ನಮ್ಮ ಶ್ರೇಷ್ಠ ನಾಯಕ:
ಕೇನ್ ನಮ್ಮ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರು ಮತ್ತು ಅವರು ತಮ್ಮ ಕ್ರಿಕೆಟ್ ಅನ್ನು ಆನಂದಿಸುತ್ತಾರೆ ಮತ್ತು ನ್ಯೂಜಿಲೆಂಡ್ಗಾಗಿ ಸಾಧ್ಯವಾದಷ್ಟು ಕಾಲ ಆಡುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ. ಅವರು ಅದ್ಭುತ ನಾಯಕರಾಗಿದ್ದಾರೆ ಮತ್ತು ಅವರ ಸಮಯದಲ್ಲಿ ತಂಡವು ಸುದೀರ್ಘ ಯಶಸ್ಸು ಆಟದ ಕಠಿಣ ಸ್ವರೂಪವು ಗಮನಾರ್ಹವಾಗಿದೆ ಎಂದು ಕಿವೀಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ಇದನ್ನೂ ಓದಿ: Team India: ಆಸೀಸ್, ಕಿವೀಸ್ & ಶ್ರೀಲಂಕಾ ವಿರುದ್ಧದ ಟೀಂ ಇಂಡಿಯಾ ವೇಳಾಪಟ್ಟಿ ಪ್ರಕಟ
ಭಾರತ- ನ್ಯೂಜಿಲೆಂಡ್ ಪ್ರವಾಸ, 2022-23:
ಮೊದಲ ಏಕದಿನ: ಜನವರಿ 18 - ಹೈದರಾಬಾದ್
ಎರಡನೇ ಏಕದಿನ: ಜನವರಿ 21 - ರಾಯಪುರ
ಮೂರನೇ ಏಕದಿನ: ಜನವರಿ 24 - ಇಂದೋರ್
1ನೇ ಟಿ20: ಜನವರಿ 27 - ರಾಂಚಿ
2ನೇ ಟಿ20: ಜನವರಿ 29 - ಲಕ್ನೋ
3ನೇ ಟಿ20: ಫೆಬ್ರವರಿ 1 - ಅಹಮದಾಬಾದ್
ಅದರಂತೆ ಟೀಂ ಇಂಡಿಯಾ ಮತ್ತು ನ್ಯೂಜಿಲ್ಯಾಂಡ್ ನಡುವಿನ ಸರಣಿಯು ಈ ಬಾರಿ ಭಾರತದಲ್ಲಿಯೇ ನಡೆಯಲಿದೆ. ಈ ವೇಳೆ ಉಭಯ ತಂಡಗಳು 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿ ಆಡಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ