• Home
  • »
  • News
  • »
  • sports
  • »
  • Suryakumar Yadav: ಇಂತಹ ಅದ್ಭುತ ಆಟಗಾರನನ್ನು ಇದುವರೆಗೆ ನೋಡಿಲ್ಲ, ಟೀಂ ಇಂಡಿಯಾ ಆಟಗರಾರನನ್ನು ಮೆಚ್ಚಿದ ಕಿವೀಸ್​ ನಾಯಕ

Suryakumar Yadav: ಇಂತಹ ಅದ್ಭುತ ಆಟಗಾರನನ್ನು ಇದುವರೆಗೆ ನೋಡಿಲ್ಲ, ಟೀಂ ಇಂಡಿಯಾ ಆಟಗರಾರನನ್ನು ಮೆಚ್ಚಿದ ಕಿವೀಸ್​ ನಾಯಕ

ಸೂರ್ಯಕುಮಾರ್ ಯಾದವ್

ಸೂರ್ಯಕುಮಾರ್ ಯಾದವ್

Suryakumar Yadav: ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸ್ ಕೂಡ ಸೂರ್ಯಕುಮಾರ್ ಆಟದ ವೈಖರಿಯನ್ನು ನೋಡಿ ಮೂಗಿನ ಮೇಲೆ ಬೆರಳಿಟ್ಟಿದ್ದು ಇಂತಹ ಅದ್ಭುತ ಆಟಗಾರನನ್ನು ಇದುವರೆಗೆ ತಾನು ನೋಡಿಲ್ಲ ಎಂದು ಕೊಂಡಾಡಿದ್ದಾರೆ.

  • Share this:

ಭಾರತ ಮತ್ತು ನ್ಯೂಜಿಲ್ಯಾಂಡ್ (IND vsNZ)​ ನಡುವಿನ ಏಕದಿನ ಸರಣಿಯು ಈಗಾಗಲೇ ಆರಂಭವಾಗಿದ್ದು, ಟಿ20 ಸರಣಿಯನ್ನು ಟೀಂ ಇಂಡಿಯಾ (Team India) ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭರ್ಜರಿ ಜಯ ದಾಖಲಿಸಿತು. ಆದರೆ ಮೊದಲ ಏಕದಿನ ಪಂದ್ಯದಲ್ಲಿಯೇ ಭಾರತ ತಂಡ ಸೋಲನ್ನು ಅನುಭವಿಸಿತು. ಮೂಲಕ ಕಿವೀಸ್​ ತಂಡವು 3 ಪಂದ್ಯಗಳ ಏಕದಿನ ಸರಣಿಯನ್ನು 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಆದರೆ ಈ ಪಂದ್ಯದಲ್ಲಿ ಟಿ20 ಹೀರೋ ಸೂರ್ಯಕುಮಾರ್ ಯಾದವ್ (Suryakumar Yadav) ಅಷ್ಟಾಗಿ ಮಿಂಚಲಿಲ್ಲ. ಆದರೆ ಸೂರ್ಯ ಕಳೆದ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು.


ಯಾರ್ಕರ್​ ಬೌಲಿಂಗ್​ಗೆ ಉತ್ತಮವಾಗಿ ಆಡುವ ಸೂರ್ಯ:


ಯಾರ್ಕರ್ ಮೂಲಭೂತವಾಗಿ T20 ಕ್ರಿಕೆಟ್‌ನಲ್ಲಿ ಬೌಲರ್‌ಗೆ ಟ್ರಂಪ್ ಕಾರ್ಡ್ ಆಗಿದೆ. ಯಾರ್ಕರ್ ಎಂಬುದು ಬ್ಯಾಟ್ಸ್‌ಮನ್‌ನ ಪಾದಗಳ ಸುತ್ತ ಇರುವ ಕ್ರಿಕೆಟ್ ಪಿಚ್‌ಗೆ ಹಾಕುವ ಚೆಂಡು (ಒಂದು ಎಸೆತ). ಯಾರ್ಕರ್‌ನ ಸದ್ಭಳಕೆ ಮಾಡಿಕೊಂಡ ಸೂರ್ಯಕುಮಾರ್ 150 ಕಿ.ಮೀ ವೇಗದ ಚೆಂಡಿನಿಂದ ಉತ್ತಮ ರನ್ ಗಳಿಸುವ ಉಪಾಯವನ್ನು ಅದಾಗಲೇ ನಡೆಸಿದ್ದರು. ಸೂರ್ಯಕುಮಾರ್ 51 ಎಸೆತಗಳಲ್ಲಿ 111 ರನ್ ಗಳಿಸಿದರು. ಬೇರೆ ಬ್ಯಾಟ್ಸ್‌ಮನ್‌ಗಳು ಇದೇ ಪಿಚ್‌ನಲ್ಲಿ 38 ಎಸೆತಗಳಲ್ಲಿ 44 ರನ್ ಗಳಿಸಲು ಮಾತ್ರವೇ ಸಾಧ್ಯವಾಗಿತ್ತು. ಸೂರ್ಯಕುಮಾರ್ ಭರ್ಜರಿಯಾಗಿಯೇ ಬ್ಯಾಟಿಂಗ್ ಮಾಡಿದ್ದು 11 ಬೌಂಡರಿ ಹಾಗೂ 7 ಸಿಕ್ಸರ್‌ಗಳನ್ನು ಹೊಡೆದರು.


ಸೂರ್ಯಕುಮಾರ್ ಸ್ಟ್ರೋಕ್‌ಪ್ಲೇ ಎಲ್ಲರಿಗೂ ಒಪ್ಪುವಂತಹ ವಿಷಯವಲ್ಲ. ಇಂತಹ ಆಟವನ್ನು ಆಡುವವರು ಅಷ್ಟೇ ನಿಸ್ಸೀಮರು ಹಾಗೂ ಪರಿಣಿತರು ಆಗಿರಬೇಕು ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯವಾಗಿದೆ. ವೈಡ್ ಯಾರ್ಕರ್‌ನ ಸಮಯದಲ್ಲಿ ಸೂರ್ಯಕುಮಾರ್ ಪೂರ್ವಭಾವಿಯಾಗಿ ಯೋಜಿಸಿದ್ದರು ಏಕೆಂದರೆ ಯಾವ ರೀತಿಯ ಬ್ಯಾಟಿಂಗ್ ಮಾಡಿದರೆ ಈ ಬಾಲ್‌ನಿಂದ ರನ್ ಪಡೆಯಬಹುದು ಎಂಬುದು ಅವರಿಗೆ ಚೆನ್ನಾಗಿ ಅರಿವಿತ್ತು ಎಂದು ಹೇಳಲಾಗುತ್ತದೆ.


ಇದನ್ನೂ ಓದಿ: IND vs NZ 1st ODI: ಭಾರತದ ಸೋಲಿಗೆ ಕಾರಣವಾದ 40ನೇ ಓವರ್! ಅಷ್ಟಕ್ಕೂ ಆ ಕ್ಷಣದಲ್ಲಿ ಆಗಿದ್ದೇನು?


ಪವರ್ ಹಿಟ್ಟರ್ ಆದ ಸೂರ್ಯಕುಮಾರ್ ಯಾದವ್:


ನ್ಯೂಜಿಲ್ಯಾಂಡ್‌ನ ಬೌಲರ್‌ಗಳ ನಿಧಾನಗತಿಯ ಎಸೆತಗಳನ್ನು ಚೆನ್ನಾಗಿಯೇ ಬಳಸಿಕೊಂಡ ಸೂರ್ಯಕುಮಾರ್‌ಗೆ ಪಿಚ್‌ನಲ್ಲಿ ಬಿದ್ದ ಮಳೆ ಕೂಡ ನೆರವನ್ನು ನೀಡಿತು ಎಂದೇ ಹೇಳಬಹುದು. ತೇವಗೊಂಡ ಪಿಚ್ ಕೊಂಚ ಸವಾಲನ್ನು ನೀಡುವುದು ಬೌಲರ್‌ಗಳಿಗೆ, ಹಾಗಾಗಿ ಸೂರ್ಯಕುಮಾರ್ ಈ ಅವಕಾಶವನ್ನು ಬಳಸಿಕೊಂಡರು. ಒಬ್ಬ ಪವರ್ ಹಿಟ್ಟರ್‌ನ ಅತಿದೊಡ್ಡ ಆಸ್ತಿ ಎಂದರೆ ಆತನ ನಿಯಂತ್ರಣವಾಗಿದೆ ಎಂಬುದನ್ನು ಸೂರ್ಯಕುಮಾರ್ ತೋರಿಸಿಕೊಟ್ಟಿದ್ದಾರೆ. ಈ ನಿಯಂತ್ರಣವನ್ನು ತಪ್ಪಿಸುವುದು ಬೌಲರ್‌ನ ಕೈಚಳಕವಾಗಿರುತ್ತದೆ.


ನ್ಯೂಜಿಲ್ಯಾಂಡ್ ಕೇನ್ ವಿಲಿಯಮ್ಸ್ ಹೊಗಳಿಕೆ:


ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸ್ ಕೂಡ ಸೂರ್ಯಕುಮಾರ್ ಆಟದ ವೈಖರಿಯನ್ನು ನೋಡಿ ಮೂಗಿನ ಮೇಲೆ ಬೆರಳಿಟ್ಟಿದ್ದು ಇಂತಹ ಅದ್ಭುತ ಆಟಗಾರನನ್ನು ಇದುವರೆಗೆ ತಾನು ನೋಡಿಲ್ಲ ಎಂದು ಕೊಂಡಾಡಿದ್ದಾರೆ. ಸೂರ್ಯಕುಮಾರ್‌ರಂತಹ ಇನ್ನಷ್ಟು ಆಟಗಾರರು ಟೀಮ್ ಇಂಡಿಯಾಗೆ ಅಗತ್ಯವಿದೆ. 10 ವರ್ಷಗಳ ಪ್ರಯತ್ನದ ಫಲವಾಗಿ ಸೂರ್ಯ ಇಂದು ಟೀಮ್ ಇಂಡಿಯಾದಲ್ಲಿ ಆಡುತ್ತಿದ್ದಾರೆ. ಈ ಹತ್ತು ವರ್ಷಗಳಲ್ಲಿ ಸೂರ್ಯಕುಮಾರ್ ಕ್ರಿಕೆಟ್‌ನ ಒಳಹೊರಗನ್ನು ಚೆನ್ನಾಗಿ ಅರಿತುಕೊಳ್ಳಲು ಸಮಯವನ್ನು ಬಳಸಿಕೊಂಡರು ಎಂದೇ ಹೇಳಬಹುದು. ತಮ್ಮನ್ನು ತಾವು ಮೌಲ್ಯಮಾಪನ ಮಾಡಿಕೊಳ್ಳುತ್ತಿದ್ದರು ಎಂದು ತಿಳಿಸಿರುವ ಸೂರ್ಯಕುಮಾರ್, ಆಟವನ್ನು ಆಡುವ ರೀತಿ ಹಾಗೂ ಅದನ್ನು ವಶಪಡಿಸಿಕೊಳ್ಳಲು ಬಹಳಷ್ಟು ಕಷ್ಟಪಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.


ಭಾರತ ತಂಡಕ್ಕೆ ಬೇಕು ಇನ್ನೊಬ್ಬ ಸೂರ್ಯಕುಮಾರ್:


ಭಾರತವು ವಿಶೇಷವಾಗಿ ಆಯ್ಕೆದಾರರು ಹಾಗೂ ತರಬೇತುದಾರರು ಇನ್ನೊಬ್ಬ ಸೂರ್ಯಕುಮಾರ್‌ನನ್ನು ತಂಡಕ್ಕೆ ತರುವ ಪ್ರಯತ್ನದಲ್ಲಿ ಕಾರ್ಯೋನ್ಮುಖರಾಗಲೇಬೇಕು. ಇನ್ನೊಂದು ಸೂರ್ಯಕುಮಾರ್ ಯಾದವ್ ಅವರಂತೆ ತಂಡದ ಇನ್ನೊಬ್ಬ ಆಟಗಾರ ಹೊರಹೊಮ್ಮಬೇಕು ಎಂದಾದರೆ ಅದು ಅಷ್ಟೊಂದು ಸುಲಭದ ವಿಷಯವೂ ಅಲ್ಲ. ಅವರಂತೆ ತರಬೇತಿ ನೀಡಲು ಅಷ್ಟೇ ಸಮಯ ಹಾಗೂ ಸಾಮರ್ಥ್ಯ ಎರಡೂ ಬೇಕಾಗುತ್ತದೆ.

Published by:shrikrishna bhat
First published: