HOME » NEWS » Sports » KANE TANAKA AGED 118 YEARS THE WORLDS OLDEST LIVING PERSON WILL CARRY OLYMPIC FLAME STG SNVS

Kane Tanaka - ಕೇನ್ ಟನಾಕ, ಒಲಿಂಪಿಕ್ ಜ್ಯೋತಿ ಹಿಡಿಯಲಿರುವ 118 ವರ್ಷದ ಅಜ್ಜಿ

ಬಹುತೇಕ ಒಲಿಂಪಿಕ್ಸ್ ಇತಿಹಾಸದಷ್ಟೇ ವಯಸ್ಸಾಗಿರುವ ಜಪಾನೀ ಅಜ್ಜಿ ಕೇನ್ ಟನಾಕ ಅವರು ಮುಂಬರಲಿರುವ ಒಲಿಂಪಿಕ್ಸ್ನ ಕ್ರೀಡಾಜ್ಯೋತಿಯನ್ನು ಹೊತ್ತೊಯ್ಯಲಿದ್ದಾರೆ. 118 ವರ್ಷದ ಅವರು ಒಲಿಂಪಿಕ್ ಜ್ಯೋತಿ ಹಿಡಿಯಲಿರುವ ಅತ್ಯಂತ ಹಿರಿಯ ವ್ಯಕ್ತಿ ಎನಿಸಲಿದ್ದಾರೆ.

news18
Updated:March 6, 2021, 12:44 PM IST
Kane Tanaka - ಕೇನ್ ಟನಾಕ, ಒಲಿಂಪಿಕ್ ಜ್ಯೋತಿ ಹಿಡಿಯಲಿರುವ 118 ವರ್ಷದ ಅಜ್ಜಿ
ಕೇನ್ ಟನಾಕ
  • News18
  • Last Updated: March 6, 2021, 12:44 PM IST
  • Share this:
ಜಗತ್ತಿನ ಅತ್ಯುಚ್ಛ ಕ್ರೀಡಾಕೂಟವೆನಿಸಿದ ಒಲಿಂಪಿಕ್ಸ್​ನಲ್ಲಿ ಕೇವಲ ಪದಕಗಳನ್ನು ಬಾಚಿಕೊಳ್ಳುವುದು ಮಾತ್ರ ಸಾಧನೆಯಲ್ಲ, ಒಲಿಂಪಿಕ್ ಜ್ಯೋತಿಯನ್ನು ಬೆಳಗುವುದು, ಅದನ್ನು ಹಿಡಿದುಕೊಳ್ಳುವುದು ಸಹ ಗೌರವದ ಪ್ರತೀಕ. ಜಪಾನ್ನಲ್ಲಿ ಈ ವರ್ಷ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದ ಜ್ಯೋತಿಯನ್ನು ಹಿಡಿಯಲಿದ್ದಾರೆ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಕೇನ್ ಟನಾಕಾ. ಇವರಿಗೆ 118 ವರ್ಷವಾಗಿದ್ದು, ಮೊದಲನೆಯ ಮಹಾಯುದ್ಧ ಅಥವಾ ಸ್ಪ್ಯಾನಿಷ್ ಫ್ಲೂ ಸಾಂಕ್ರಾಮಿಕ ರೋಗದ ಸಮಯವನ್ನೂ ಕಂಡಿರುವ ಈ ಶತಾಯುಷಿ ಅಜ್ಜಿ ಮೇ ತಿಂಗಳಲ್ಲಿ ಒಲಿಂಪಿಕ್ ಟಾರ್ಚ್ ಅಥವಾ ಜ್ಯೋತಿಯನ್ನು ಸಾಗಿಸಲು ತಯಾರಿ ನಡೆಸಿದ್ದಾರೆ. ಒಲಿಂಪಿಕ್ಸ್ ಜ್ಯೋತಿ ಹಿಡಿಯಲು ಆ ವಯಸ್ಸಲ್ಲೂ ಉತ್ಸುಕರಾಗಿದ್ದಾರೆ.

ಕೇನ್ ಟನಾಕಾ ಅವರ ದೀರ್ಘಾಯುಷ್ಯ ಎಲ್ಲರನ್ನೂ ಆಕರ್ಷಿಸಿದೆ. ಅವರು ಎರಡು ಜಾಗತಿಕ ಸಾಂಕ್ರಾಮಿಕ ರೋಗಗಳ ಸಮಯದಲ್ಲಿ ಜೀವಿಸಿದ್ದಲ್ಲದೆ, ಎರಡು ಬಾರಿ ಕ್ಯಾನ್ಸರ್ ನಿಂದಲೂ ಬದುಕುಳಿದಿದ್ದಾರೆ. ಈಗಲೂ ಸಾಕಷ್ಟು ಫಿಟ್ ಆಗಿರುವ ಈ ಅಜ್ಜಿ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮ ಸಿಎನ್ಎನ್ ವರದಿ ಮಾಡಿದೆ.

ಕೇನ್ ಟನಾಕಾ ಜಪಾನ್​ನ ಫುಕುಓಕಾ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದು, ಅವರ ಮನೆ ಬಳಿಯಿಂದ ಹಾದುಹೋಗಲಿರುವ ಒಲಿಂಪಿಕ್ ಜ್ಯೋತಿಯನ್ನು ಹೊತ್ತೊಯ್ಯಲಿದ್ದಾರೆ. ಶತಾಯುಷಿ ಅಜ್ಜಿಯನ್ನು ಅವರ ಕುಟುಂಬವರು ಗಾಲಿ ಖುರ್ಚಿ ನೆರವಿನಿಂದ 100 ಮೀಟರ್ ದೂರ ಕರೆದೊಯ್ಯಲು ಪ್ಲ್ಯಾನ್ ಮಾಡಿದ್ದಾರೆ. ಇನ್ನು, ಈ ಜ್ಯೋತಿಯನ್ನು ಬೇರೆಯವರಿಗೆ ಹಸ್ತಾಂತರ ಮಾಡುವ ಮುನ್ನ ಕೆಲ ಹೆಜ್ಜೆಗಳನ್ನಾದರೂ ನಡೆಯಲು 118 ವರ್ಷದ ಅಜ್ಜಿ ನಿರ್ಧರಿಸಿದ್ದಾರೆ. ಅಲ್ಲದೆ, ಜನವರಿಯಲ್ಲಿ ಅವರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಿದ ಶೂ ಅನ್ನು ಈ ವೇಳೆ ಧರಿಸಲಿದ್ದಾರೆ ಎಂದೂ ತಿಳಿದುಬಂದಿದೆ.

ಇದನ್ನೂ ಓದಿ: Road Safety World Series 2021: ರೋಡ್ ಸೇಫ್ಟಿ ವರ್ಲ್ಡ್​ ಸಿರೀಸ್ ಟೂರ್ನಿ ಇಂದಿನಿಂದ ಆರಂಭ: ಇಂಡಿಯಾ ಲೆಜೆಂಡ್ಸ್ ತಂಡ ಹೀಗಿದೆ..!

ನರ್ಸಿಂಗ್ ಹೋಂನಲ್ಲಿ ವಾಸಿಸುವ ಕೇನ್, ಬೆಳಗ್ಗೆ 6 ಗಂಟೆಗೇ ಏಳುತ್ತಾರೆ. ಅಲ್ಲದೆ, ವಾಕರ್ ಸಹಾಯದಿಂದ ನಡೆಯುತ್ತಾರೆ. ಫಿಜ್ಜಿ ಕೋಲಾ ಕುಡಿಯಲು ಇಷ್ಟಪಡುವ ಇವರು, ಮೆದುಳನ್ನು ತೀಕ್ಷ್ಣವಾಗಿಡಲು ಬೋರ್ಡ್ ಆಟವನ್ನು ಆಡುತ್ತಾರೆ. ಗಣಿತದ ಸಮಸ್ಯೆ ಬಿಡುಸುವುದು ಮತ್ತು ಕುತೂಹಲಭರಿತ ಮನಸು ಅವರ ಆರೋಗ್ಯದ ಇನ್ನಷ್ಟು ಗುಟ್ಟು. ಜತೆಗೆ ಒಥೆಲ್ಲೋ ರೀಪ್ಲೇಗಳನ್ನು ಕೇಳಲು ಇಷ್ಟಪಡುತ್ತಾರೆ. ಕೋವಿಡ್ - 19 ನಿರ್ಬಂಧಗಳಿಂದಾಗಿ ಕಳೆದ ಒಂದೂವರೆ ವರ್ಷಗಳಿಂದ ಆಕೆಯನ್ನು ಕುಟುಂಬವು ವೈಯಕ್ತಿಕವಾಗಿ ಭೇಟಿಯಾಗದಿದ್ದರೂ, ವಿಡಿಯೋ ಕಾಲ್ ಮೂಲಕ ಸಂಪರ್ಕ ಸಾಧಿಸುತ್ತಿದ್ದಾರೆ. ಮೇನಲ್ಲಿ ನಡೆಯುವ ಟಾರ್ಚ್ ರಿಲೇಗೆ ಮೊದಲು ಭೇಟಿಯಾಗಲಿದ್ದಾರೆ.

1 ವರ್ಷ ಆಗಿದ್ದಾಗ ಮದುವೆಯಾಗಿದ್ದ ಕೇನ್ ಟನಾಕಾಗೆ ಐದು ಮೊಮ್ಮಕ್ಕಳು ಮತ್ತು ಎಂಟು ಜನ ಮರಿ ಮೊಮ್ಮಕ್ಕಳು ಇದ್ದಾರೆ. ಅವರ ನಾಲ್ಕು ಮಕ್ಕಳ ಕುಟುಂಬ ಮತ್ತು ಅವರ ಅಕ್ಕಿ-ಅಂಗಡಿ-ಮಾಲೀಕ ಪತಿ ಕೂಡ ಅವರು 103 ವರ್ಷದ ತನಕ ಅಂಗಡಿಯೊಂದನ್ನು ಹೊಂದಿದ್ದರು.

ಆಧುನಿಕ ಒಲಿಂಪಿಕ್ಸ್ 1896 ರಲ್ಲಿ ಗ್ರೀಸ್​ನ ಅಥೆನ್ಸ್​ನಲ್ಲಿ ಪ್ರಾರಂಭವಾಯಿತು. 7 ವರ್ಷಗಳ ಬಳಿಕ ಅಂದ್ರೆ 1903 ರಲ್ಲಿ ಟನಾಕಾ ಜನಿಸಿದ್ದರು. ಒಲಿಂಪಿಕ್ ಜ್ಯೋತಿಯನ್ನು ಹಿಡಿಯಲಿರುವ ಟನಾಕಾ ಭಾಗವಹಿಸುವಿಕೆಯನ್ನು ಜಪಾನಿನ ಜೀವ ವಿಮಾ ಕಂಪನಿಯೊಂದು ಪ್ರಾಯೋಜಿಸುತ್ತಿದೆ ಮತ್ತು ಇದು ಅವರ ಆರೋಗ್ಯ ಮತ್ತು ಹವಾಮಾನ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ.2020 ರಲ್ಲಿ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್ ಕೊರೊನಾ ಸಾಂಕ್ರಾಮಿಕದಿಂದ ಒಂದು ವರ್ಷ ಮುಂದೂಡಲ್ಪಟ್ಟಿತ್ತು. ಇನ್ನೊಂದೆಡೆ, ಜಪಾನ್​​ನ ಪ್ರತಿಯೊಂದು ಮೂಲೆಯಲ್ಲೂ ಪ್ರಯಾಣಿಸುವ ಮೊದಲು ಒಲಿಂಪಿಕ್ ಜ್ಯೋತಿ 2011 ತೋಹೋಕು ಭೂಕಂಪ ಮತ್ತು ಸುನಾಮಿಯ  ಪೀಡಿತ ಪ್ರದೇಶಗಳ ಮೂಲಕ ಹಾದು ಹೋಗುತ್ತದೆ ಎಂದೂ ಅಧಿಕಾರಿಗಳು ಹೇಳಿದ್ದಾರೆಂದು ಸಿಎನ್ಎನ್ ವರದಿ ಮಾಡಿದೆ.
Published by: Vijayasarthy SN
First published: March 6, 2021, 12:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories