• Home
 • »
 • News
 • »
 • sports
 • »
 • Kabaddi Players: ರೈಲಿಗಾಗಿ ಗಂಟೆಗಟ್ಟಲೆ ಕಾದ ಕಬಡ್ಡಿ ಆಟಗಾರರು, ಸೀಟು ಸಿಗದೆ ಪರದಾಡಿದ ಯುವಕರ ತಂಡ

Kabaddi Players: ರೈಲಿಗಾಗಿ ಗಂಟೆಗಟ್ಟಲೆ ಕಾದ ಕಬಡ್ಡಿ ಆಟಗಾರರು, ಸೀಟು ಸಿಗದೆ ಪರದಾಡಿದ ಯುವಕರ ತಂಡ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ರೈಲು ಹೊರಡುವ ನಿಲ್ದಾಣದ ಬದಲಾವಣೆಯಿಂದ ಕಬಡ್ಡಿ ಆಟಗಾರರಿಗೆ ಮತ್ತು ವ್ಯವಸ್ಥಾಪಕರು ರೈಲಿನಲ್ಲಿ ಸೀಟು ಸಿಗದೇ ಪ್ಯಾಸೇಜ್​ಗಳಲ್ಲಿ ಕುಳಿತುಕೊಳ್ಳುವ ಸಮಯ ಬಂತು. ಇದಲ್ಲದೆ ಅವರಿಗೆ ರೈಲಿನಲ್ಲಿ ಸರಿಯಾಗಿ ವ್ಯವಸ್ಥೆಗಳೂ ಕೂಡ ಸಿಗದಿರುವುದು ಬಹಳ ಬೇಸರವನ್ನುಂಟು ಮಾಡಿದೆ ಎಂದು ವ್ಯವಸ್ಥಾಪಕರು ಹೇಳಿದ್ದಾರೆ.

ಮುಂದೆ ಓದಿ ...
 • Share this:

  ಕಬಡ್ಡಿ (Kabaddi) ಪಂದ್ಯಕ್ಕೆ ತೆರಳಬೇಕಿದ್ದ ರಾಜ್ಯದ ಆಟಗಾರರು ರೈಲಿನ (Train) ಅವ್ಯವಸ್ಥೆಯಿಂದಾಗಿ ಯಶವಂತಪುರ ರೈಲು ನಿಲ್ದಾಣದಲ್ಲಿ (Yeshawanthapur Railway Station) ಪಡಿಪಾಟಲು ಪಡಬೇಕಾಯಿತು. ಭಾರತದಲ್ಲಿ ಕ್ರಿಕೆಟ್‌ (Cricket) ಹೊರತುಪಡಿಸಿ ಬೇರೆ ಕ್ರೀಡೆಗಳಿಗೆ ಅಷ್ಟೊಂದು ಮಾನ್ಯತೆ ಇಲ್ಲ ಎಂಬುದಕ್ಕೆ ಇಂತಹ ಘಟನೆಗಳು ಆಗಾಗ ಸಾಕ್ಷಿ ಎನ್ನುವಂತೆ ಬೆಳಕಿಗೆ ಬರುತ್ತಲೇ ಇರುತ್ತವೆ. ಕ್ರಿಕೆಟ್​ ಎಂಬುದು ಭಾರತದಲ್ಲಿ ಭಾರೀ ಮನ್ನಣೆ ಪಡೆದಂತಹ ಕ್ರೀಡೆಯಾಗಿದೆ. ಅದರೆ ಈ ಕ್ರೀಡೆಗೆ ಅಷ್ಟೇ ಗೌರವ ಕೂಡ ಇದೆ. ಆದರೆ ಇತ್ತೀಚೆಗೆ ರಾಜ್ಯದ ಕಬಡ್ಡಿ ಆಟಗಾರರಿಗೆ ರೈಲುಗಳಲ್ಲಿ ಸರಿಯಾಗಿ ವ್ಯವಸ್ಥೆ ಇಲ್ಲದ್ದರಿಂದ ಕಬಡ್ಡಿ ಆಟಗಾರರಿಗೆ ಗೌರವವೇ ಇಲ್ಲದಂತಾಗಿದೆ.ರೈಲು ಅವ್ಯವಸ್ಥೆ; ರೈಲಿನಲ್ಲಿ ಸೀಟು ಸಿಗದೇ ಕಬಡ್ಡಿ ಆಟಗಾರರ ಪರದಾಟ,


  ಆಟಗಾರರಿಗಿಲ್ಲ ಕನಿಷ್ಠ ಸೌಲಭ್ಯ


  ಅದೆಷ್ಟೋ ಪ್ರಕರಣಗಳಲ್ಲಿ ಆಟಗಾರರಿಗೆ ರೈಲಿನಲ್ಲಿ ಸೀಟು ಇಲ್ಲದಿರುವುದು, ಶೌಚಾಲಯದ ಪಕ್ಕ ಮಲಗಿರುವಂತಹ ದೃಶ್ಯಗಳ ಬಗ್ಗೆ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಇದನ್ನೇಲ್ಲಾ ನೋಡಿದ ಮೇಲೆ ದೇಶದ ಆಟಗಾರರಿಗೆ ಕನಿಷ್ಠ ಸೌಲಭ್ಯವೂ ಇಲ್ಲವೇ ಎಂಬ ಪ್ರಶ್ನೆ ಎದುರಾಗುತ್ತಿದೆ. ಇತ್ತೀಚಿನ ಒಂದು ಘಟನೆಯಲ್ಲೂ ಸಹ ವಿದ್ಯಾರ್ಥಿಗಳು ರೈಲಿನ ತಪ್ಪಾದ ನಿಯೋಜನೆಯಿಂದಾಗಿ ರೈಲು ತಪ್ಪಿಸಿಕೊಂಡು ಮತ್ತೊಂದು ರೈಲಿನಲ್ಲಿ ಸೀಟ್‌ ಇಲ್ಲದೇ ಹೋಗುವಂತಾಯಿತು.


  ಬೆಂಗಳೂರಿನ ಯಶವಂತಪುರ ನಿಲ್ದಾಣ ಮತ್ತು ಕೆಎಸ್‌ಆರ್ ನಿಲ್ದಾಣದಿಂದ ಈ ವರ್ಷ ಹಲವಾರು ರೈಲುಗಳನ್ನು ಸರ್ ಎಂವಿ ಟರ್ಮಿನಲ್‌ಗೆ ಸ್ಥಳಾಂತರಿಸಿರುವ ಕಾರಣ ಕಬ್ಬಡಿ ತಂಡದ ವ್ಯವಸ್ಥಾಪಕರಿಗೆ ಗೊಂದಲ ಉಂಟಾಗಿ ರೈಲು ತಪ್ಪಿಸಿಕೊಂಡು ಪಡಿಪಾಟಲು ಪಡುವಂತಾಯಿತು.


  ಇದನ್ನೂ ಓದಿ: ದಯವಿಟ್ಟು ನನ್ನ ಬ್ಯಾಗನ್ನು ಕಳುಹಿಸಿಕೊಡಿ! ಮೊಹಮ್ಮದ್ ಸಿರಾಜ್ ಮನವಿ


  ರೈಲು ಅವ್ಯವಸ್ಥೆ: ಗಂಟೆಗಟ್ಟಲೇ ಕಾದು ಕುಳಿತ ವಿದ್ಯಾರ್ಥಿಗಳು


  ಸಬ್‌ ಜೂನಿಯರ್‌ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ರಾಜ್ಯದ 16 ವರ್ಷದೊಳಗಿನ ಕಬಡ್ಡಿ ಆಟಗಾರರು ಜಮ್‌ಶೆಡ್‌ಪುರಕ್ಕೆ ತೆರಳುತ್ತಿದ್ದರು.


  ಆದರೆ ಮಕ್ಕಳು ಪ್ರಯಾಣಿಸಬೇಕಾದ ನಿಲ್ದಾಣದ ಗೊಂದಲದಿಂದ ಸರ್ ಎಂವಿ ಟರ್ಮಿನಲ್‌ನಲ್ಲಿ ಕಾಯಬೇಕಿದ್ದ ಮಕ್ಕಳು ಯಶವಂತಪುರ ರೈಲು ನಿಲ್ದಾಣದಲ್ಲಿ ಬಹಳ ಹೊತ್ತು ಕಾಯಬೇಕಾಯಿತು. ಆನಂತರ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಮತ್ತೊಂದು ರೈಲಿನಲ್ಲಿ ಪ್ರಯಾಣಿಸುವಂತಾಯಿತು.


  ಟಾಯ್ಲೆಟ್‌ ಪಕ್ಕದಲ್ಲಿ ಕುಳಿತ ಮಕ್ಕಳು


  ಸಿಕ್ಕ ರೈಲಿನಲ್ಲೂ ಸೀಟು ಸಿಗದೇ ಇದ್ದರಿಂದ 12 ಹುಡುಗರು ಮತ್ತು 12 ಹುಡುಗಿಯರ ತಂಡ ಪ್ಯಾಸೇಜ್‌ನಲ್ಲಿ ಮತ್ತು ಕೆಲವರು ಶೌಚಾಲಯದ ಬಳಿ ಕೆಲ ಹೊತ್ತು ನಿಲ್ಲಬೇಕಾಯಿತು.


  ವಾಸ್ತವವಾಗಿ ಆಟಗಾರರು ಅಂಗಾ ಎಕ್ಸ್‌ಪ್ರೆಸ್‌ ಮೂಲಕ ಜಮ್‌ಶೆಡ್‌ಪುರಕ್ಕೆ ತೆರಳಬೇಕಿತ್ತು. ಆದರೆ ಕರ್ನಾಟಕ ಕಬಡ್ಡಿ ಅಸೋಸಿಯೇಷನ್ ​​ಹಾಗೂ ತಂಡದ ವ್ಯವಸ್ಥಾಪಕರ ನಡುವಿನ ಮಾತುಕತೆ ಸಂಪರ್ಕದ ಕೊರತೆಯಿಂದಾಗಿ ಸರ್ ಎಂವಿ ಟರ್ಮಿನಲ್‌ಗೆ ಹೋಗುವ ಬದಲು ಯಶವಂತಪುರ ನಿಲ್ದಾಣಕ್ಕೆ ಕಳುಹಿಸಲಾಗಿತ್ತು.


  ಮಾಹಿತಿ ಕೊರತೆ


  ರೈಲು ಯಶವಂತಪುರ ನಿಲ್ದಾಣದಿಂದ ಹೊರಡಲಿದೆ ಎಂದು ತಂಡದ ವ್ಯವಸ್ಥಾಪಕ ಸಂಜೀವ್ ಮಸಾಲ್ಜಿ ಮತ್ತು ತರಬೇತುದಾರ ಆನಂದ್ ಬಸವರಾಜ್ ಊಹೆ ಮಾಡಿಕೊಂಡಿದ್ದರು.


  “ಬುಕಿಂಗ್ ಸಮಯದಲ್ಲಿ ಅಥವಾ ನಂತರ ರೈಲು ಸರ್ ಎಂವಿ ಟರ್ಮಿನಲ್‌ನಿಂದ ಹೊರಡುತ್ತದೆ ಎಂದು ನಮಗೆ ತಿಳಿದಿರಲಿಲ್ಲ. ಅನೇಕ ವರ್ಷಗಳಿಂದ ಅಂಗಾ ಎಕ್ಸ್ ಪ್ರೆಸ್ ಯಶವಂತಪುರದಿಂದ ನಿರ್ಗಮಿಸುತ್ತಿದೆ. ಅಸೋಸಿಯೇಷನ್ ಸರಿಯಾದ ಮಾಹಿತಿ ನೀಡಲಿಲ್ಲ" ಎಂದು ಮಸಾಲ್ಜಿ ಹೇಳಿದರು.


  “ನಂತರ, ನಾವು ಪ್ರಶಾಂತಿ ಎಕ್ಸ್‌ಪ್ರೆಸ್ ಅನ್ನು ಬುಕ್ ಮಾಡಿದ್ದೇವೆ. ಆದರೆ ಪ್ರಯಾಣಿಕರಿಂದ ರೈಲು ಕಿಕ್ಕಿರಿದ್ದರಿಂದ ನಮ್ಮ ಆಟಗಾರರಿಗೆ ಕುಳಿತುಕೊಳ್ಳಲು ಸಹ ಜಾಗವಿರಲಿಲ್ಲ.


  ತುಂಬಾ ಹೊತ್ತು ವಿದ್ಯಾರ್ಥಿಗಳು ಆಸನ ಸಿಗದೇ ಶೌಚಾಲಯದ ಬಳಿಯೇ ಕಾದು ನಿಲ್ಲಬೇಕಾಯಿತು. ಕೆಲವು ಪ್ರಯಾಣಿಕರು ಇಳಿದ ನಂತರವೇ ಸೀಟನ್ನು ಹೊಂದಾಣಿಕೆ ಮಾಡಿಕೊಂಡೆವು” ಎಂದು ಮಸಾಲ್ಜಿ ಹೇಳಿದರು.


  ಯಶವಂತಪುರ, ಕೆಎಸ್‌ಆರ್ ನಿಲ್ದಾಣದಿಂದ ಹಲವು ರೈಲುಗಳು ಸರ್ ಎಂವಿ ಟರ್ಮಿನಲ್‌ಗೆ ಶಿಫ್ಟ್


  ಈ ಘಟನೆ ಚಾಂಪಿಯನ್‌ಶಿಪ್‌ನಲ್ಲಿ ಅವರ ಆಟದ ಪ್ರದರ್ಶನಕ್ಕೆ ಅಡ್ಡಿಯಾಗಬಹುದು ಎಂದು ವ್ಯವಸ್ಥಾಪಕರು ಹೇಳಿದರು.


  ಈ ಮಧ್ಯೆ, ಯಶವಂತಪುರ ಹಾಗೂ ಕೆ‍ಎಸ್‍ಆರ್ ನಿಲ್ದಾಣಗಳಲ್ಲಿ ಉಂಟಾಗುತ್ತಿದ್ದ ಜನದಟ್ಟನೆಯ ಭಾರವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ವರ್ಷ ಹಲವಾರು ರೈಲುಗಳನ್ನು ಸರ್ ಎಂವಿ ಟರ್ಮಿನಲ್‌ಗೆ ಸ್ಥಳಾಂತರಿಸಲಾಗಿದೆ ಎಂದು ನೈರುತ್ಯ ರೈಲ್ವೆಪಿಆರ್‌ಒ ಸಿ ನರೇಂದ್ರ ಹೇಳಿದ್ದಾರಲ್ಲದೆ ಈ ಕುರಿತು ಬದಲಾವಣೆಗಳ ಹಲವಾರು ಪ್ರಕಟಣೆಗಳನ್ನು ಮಾಡಲಾಗಿದೆ ಎಂದು ಅವರು ತಿಳಿಸಿದರು.

  Published by:Prajwal B
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು