ನವದೆಹಲಿ(ಜ.04): ಪಂಜಾಬ್ನ ಮೊಗಾದ ಕಬಡ್ಡಿ ತರಬೇತುದಾರನನ್ನು ಫಿಲಿಪೈನ್ಸ್ ರಾಜಧಾನಿ ಮನಿಲಾದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮನಿಲಾದಲ್ಲಿ 43 ವರ್ಷದ ಗುರುಪ್ರೀತ್ ಸಿಂಗ್ ಗಿಂಡ್ರು ಅವರನ್ನು ಗುಂಡಿಕ್ಕಿ ಕೊಂದ ಸುದ್ದಿ ಅವರ ಕುಟುಂಬಕ್ಕೆ ತಲುಪಿದ ನಂತರ ಮೊಗಾ ಜಿಲ್ಲೆಯ ನಿಹಾಲ್ ಸಿಂಗ್ ವಾಲಾ ಉಪವಿಭಾಗದ ಪಖರ್ವಾಡ್ ಗ್ರಾಮದಲ್ಲಿ ಮಂಗಳವಾರ ಶೋಕದ ವಾತಾವರಣ ನಿರ್ಮಾಣವಾಗಿದೆ. ಇಂಡಿಯನ್ ಎಕ್ಸ್ಪ್ರೆಸ್ನ ಸುದ್ದಿ ಪ್ರಕಾರ, ಗುರುಪ್ರೀತ್ ಸಿಂಗ್ ನಾಲ್ಕು ವರ್ಷಗಳ ಹಿಂದೆ ಜೀವನೋಪಾಯಕ್ಕಾಗಿ ಫಿಲಿಪ್ಪೀನ್ಸ್ಗೆ ಹೋಗಿದ್ದರು. ವ್ಯಾಪಾರವಲ್ಲದೆ ಮನಿಲಾದಲ್ಲಿ ಯುವಕರಿಗೆ ಕಬಡ್ಡಿ ತರಬೇತಿಯನ್ನೂ ನೀಡುತ್ತಿದ್ದರು. ಮಂಗಳವಾರ ಕೆಲಸ ಮುಗಿಸಿ ಮನೆಗೆ ಬಂದಾಗ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಅವರ ಪಾರ್ಥಿವ ಶರೀರವನ್ನು ಅಂತಿಮ ಸಂಸ್ಕಾರಕ್ಕಾಗಿ ಮನೆಗೆ ತರಬೇಕೆಂದು ಸಂಬಂಧಿಕರು ಮತ್ತು ಗ್ರಾಮಸ್ಥರು ಒತ್ತಾಯಿಸಿದರು. ಮನೆಗೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳು ಗುರುಪ್ರೀತ್ ಅವರ ತಲೆಗೆ ಗುಂಡು ಹಾರಿಸಿದ್ದಾರೆ. ಗುರ್ಪ್ರೀತ್ ಕೆಲ ವರ್ಷಗಳ ಹಿಂದೆ ಕೆನಡಾಕ್ಕೆ ತೆರಳಿದ್ದು, ಅವರ ಪತ್ನಿ ಮತ್ತು ಮಗ ಫಿಲಿಪೈನ್ಸ್ನಲ್ಲಿ ನೆಲೆಸಿದ್ದರು. ಕೆಲ ವರ್ಷಗಳ ಹಿಂದೆ ಅವರೂ ಫಿಲಿಪೈನ್ಸ್ಗೆ ಸ್ಥಳಾಂತರಗೊಂಡರು. ಅವರ ಪೋಷಕರು ಮತ್ತು ಸಹೋದರರು ಮೊಗ ಗ್ರಾಮದ ಮನೆಗೆ ಮರಳಿದ್ದಾರೆ.
ಇದನ್ನೂ ಓದಿ: Naresh-Pavitra Lokesh: ಪವಿತ್ರಾ ಲೋಕೇಶ್-ನರೇಶ್ ಲಿಪ್ ಕಿಸ್! ಮದುವೆ ಡೇಟ್ ಫಿಕ್ಸ್
ಇಲ್ಲಿಯವರೆಗೆ ದಾಳಿಕೋರರು ಯಾರು ಎಂಬುವುದು ಪತ್ತೆಯಾಗಿಲ್ಲ. ಅಲ್ಲದೇ ಕಬಡ್ಡಿ ಕೋಚ್ ಗುರುಪ್ರೀತ್ನನ್ನು ಗುಂಡಿಕ್ಕಿ ಕೊಂದಿದ್ದೇಕೆ ಎಂಬ ಕಾರಣವೂ ಬಹಿರಂಗಗೊಂಡಿಲ್ಲ. ಸದ್ಯ ಗ್ರಾಮಸ್ಥರ ಬೇಡಿಕೆಗೆ ಸರಕಾರದಿಂದ ಯಾವುದೇ ಹೇಳಿಕೆ ಬಂದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ