ಐಎಸ್​​ಎಸ್​​ಎಫ್ ಚಾಂಪಿಯನ್ ಶಿಪ್​​ನಲ್ಲಿ ಭಾರತಕ್ಕೆ ಮತ್ತೆರಡು ಚಿನ್ನ

news18
Updated:September 7, 2018, 5:52 PM IST
ಐಎಸ್​​ಎಸ್​​ಎಫ್ ಚಾಂಪಿಯನ್ ಶಿಪ್​​ನಲ್ಲಿ ಭಾರತಕ್ಕೆ ಮತ್ತೆರಡು ಚಿನ್ನ
news18
Updated: September 7, 2018, 5:52 PM IST
ನ್ಯೂಸ್ 18 ಕನ್ನಡ

ದಕ್ಷಿಣ ಕೊರಿಯಾದ ಚಾಂಗ್​​ವೊನ್​​ನಲ್ಲಿ ನಡೆಯುತ್ತಿರುವ ಐಎಸ್​​​ಎಸ್​ಎಫ್​​ ವಿಶ್ವಚಾಂಪಿಯನ್​ ಶಿಪ್​​ನಲ್ಲಿ ಭಾರತ ಇಂದು 2 ಚಿನ್ನದ ಪದಕ ತನ್ನದಾಗಿಸಿಕೊಂಡಿದೆ. ಭಾರತೀಯ ಕಿರಿಯ ಶೂಟರ್​​ಗಳು ಹೊಸ ಹೊಸ ದಾಖಲೆಯೊಂದಿಗೆ ಪದಕಗಳ ಬೇಟೆ ಮುಂದುವರೆಸುತ್ತಿದ್ದಾರೆ.

ಪುರುಷರ ವಿಭಾಗದ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ 17 ವರ್ಷ ಪ್ರಾಯದ ಹೃದಯ್ ಹಝಾರಿಕಾ ಅವರು 250.1 ಪಾಯಿಂಟ್​ಗಳ ಸಾಧನೆಯೊಂದಿಗೆ ಚಿನ್ನಕ್ಕೆ ಕೊರಳೊಡ್ಡಿದ್ದಾರೆ. ಇವರು ಇರಾನ್​​ನ ಮಹಮದ್ ಅಮೀರ್ ಅವರೊಂದಿಗೆ ಸಮಬಲ ಸಾಧಿಸಿರು. ಆದರೆ ಶೂಟ್ ಆಫ್ ಅರ್ಹತೆ ಮೇರೆಗೆ ಹೃದಯ್ ಅವರು ಬಂಗಾರದ ಪದಕ ಗೆದ್ದಿದ್ದಾರೆ. ಇನ್ನು ಕಿರಿಯರ ತಂಡದ ಸ್ಪರ್ಧೆಯಲ್ಲಿ ಭಾರತದ ಮಹಿಳೆಯರು ಮತ್ತೊಂದು ಬಂಗಾರ ಗೆಲ್ಲುವ ಮೂಲಕ ದಾಖಲೆ ಬರೆದಿದ್ದಾರೆ.

ಮಹಿಳೆಯರ 10 ಮೀ. ಏರ್ ರೈಫಲ್​​ನಲ್ಲಿ ಭಾರತದ ಎಳಾವೆನಿಲ್ ವಲರಿಯನ್ 631 ಅಂಕ, ಶ್ರೇಯಾ ಅಗರ್ವಾಲ್ 628.5 ಹಾಗೂ ಮಾನಿನಿ ಕೌಶಿಕ್ 621.2 ಅಂಕದೊಂದಿಗೆ ಒಟ್ಟು 1880.7 ಸ್ಕೋರ್ ಮೂಲಕ ವಿಶ್ವದಾಖಲೆಯೊಂದಿಗೆ ಸ್ವರ್ಣ ಪದಕಕ್ಕೆ ಕೊರಳೊಡ್ಡಿದರು.
First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...