ಆಟಕ್ಕಿಂತ ಬ್ಯಾಟ್​ನಿಂದಲೇ ಸುದ್ದಿಯಾದ ಜೋಸ್ ಬಟ್ಲರ್

  • Share this:

    -ನ್ಯೂಸ್ 18

    ಲಂಡನ್(ಜೂ.04): ಐಪಿಎಲ್​ನಲ್ಲಿ ಅಬ್ಬರಿಸಿದ್ದ ಜೋಸ್ ಬಟ್ಲರ್ ಟೆಸ್ಟ್​ನಲ್ಲೂ ತಮ್ಮ ಅದ್ಬುತ ಫಾರ್ಮ್ ಮುಂದುವರೆಸಿದ್ದಾರೆ. ಪಾಕಿಸ್ತಾನ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಜೋಶ್ ಬಟ್ಲರ್  ಅಜೇಯ 80 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವ ಜೊತೆಗೆ ಪಂದ್ಯ ಶ್ರೇಷ್ಠ ಗೌರವಕ್ಕೂ ಪಾತ್ರರಾದರು.

    ಆದರೆ, ಇದೀಗ ಅವರ ಪ್ರದರ್ಶನಕ್ಕಿಂತ ಹೆಚ್ಚು ಸುದ್ದಿಯಲ್ಲಿರುವುದು ಅವರು ಬಳಸಿದ್ದ ಬ್ಯಾಟ್. ಬಟ್ಲರ್ ಬ್ಯಾಟ್​ನ ಹ್ಯಾಂಡಲ್ ಮೇಲೆ F ಅಕ್ಷರದಿಂದ ಆರಂಭವಾಗುವ ಪದವನ್ನ ಬರೆದಿರುವುದು ಟ್ವಿಟರಾತಿಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೌದು, ಕ್ರೀಡಾಂಗಣದ ಕ್ಯಾಮೆರಾ ಕಣ್ಣಲ್ಲಿ ಈ ಪದ ಬೆಳಕಿಗೆ ಬಂದಿದ್ದು, ಟ್ವಿಟ್ಟರ್​ನಲ್ಲಿ ಟ್ರೋಲ್ ಆಗುತ್ತಿದೆ.





    ಕಳೆದ ಸೆಪ್ಟೆಂಬರ್​ನಿಂದೀಚೆಗೆ ಸೋಲಿನ ಸುಳಿಯಲ್ಲಿ ಸಿಲುಕಿದ್ದ ಇಂಗ್ಲೆಂಡ್ ತಂಡ ಕೊನೆಗೂ ಪಾಕಿಸ್ತಾನವನ್ನ ಮಣಿಸುವ ಮೂಲಕ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸಮಬಲ ಸಾಧಿಸಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಸರಣಿ ಸೋತಿದ್ದ ಇಂಗ್ಲೆಂಡ್ ಈ ಮೂಲಕ ಮೂರನೇ ಬಾರಿಗೆ ಸರಣಿ ಸೋಲಿನಿಂದ ತಪ್ಪಿಸಿಕೊಂಡಿದೆ.


    ಜೋಸ್ ಬಟ್ಲರ್ ಅವರ ಅಜೇಯ 80 ರನ್ ನೆರವಿನಿಂದ 363 ರನ್ ದಾಖಲಿಸಿದ್ದ ಇಂಗ್ಲೆಂಡ್ 189 ರನ್​ಗಳ ಮುನ್ನಡೆ ಸಾಧಿಸಿತ್ತು. ದ್ವಿತೀಯ ಇನ್ನಿಂಗ್ಸ್​ನಲ್ಲೂ ಪಾಕಿಸ್ತಾನವನ್ನ 134 ರನ್​ಗಳಿಗೆ ಆಲೌಟ್ ಮಾಡುವ ಮೂಲಕ 50 ರನ್​ಗಳ ಜಯ ದಾಖಲಿಸಿತು.  ಸ್ಟುವರ್ಟ್ ಬ್ರಾಡ್ 28/3, ಆಫ್ ಸ್ಪಿನ್ನರ್ ಡೊಮಿನಕ್ ಬೆಸ್ 33ಕ್ಕೆ 3 ವಿಕೆಟ್ ಉರುಳಿಸುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

     

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು