ಜಾಂಟಿ ರೋಡ್ಸ್- ಟಾಪ್ 5 ಫೀಲ್ಡರ್ಸ್​: ಟೀಂ ಇಂಡಿಯಾ ಆಟಗಾರ ವಿಶ್ವ ಕ್ರಿಕೆಟ್​ನ ಅತ್ಯುತ್ತಮ ಕ್ಷೇತ್ರರಕ್ಷಕ!

ಸಿಲ್ಲಿ ಪಾಯಿಂಟ್​ ಹಾಗೂ ಸ್ಕೈರ್​ನಲ್ಲಿ ಚೆಂಡನ್ನು ದಾಟದಂತೆ ನೋಡುತ್ತಿದ್ದ ಕಾಲಿಂಗ್​ವುಡ್​ ಅವರ ಟೈಮಿಂಗ್​ ಅನ್ನು ರೋಡ್ಸ್​ ಮೆಚ್ಚಿಕೊಂಡಿದ್ದಾರೆ.

zahir | news18
Updated:February 15, 2019, 9:43 AM IST
ಜಾಂಟಿ ರೋಡ್ಸ್- ಟಾಪ್ 5 ಫೀಲ್ಡರ್ಸ್​: ಟೀಂ ಇಂಡಿಯಾ ಆಟಗಾರ ವಿಶ್ವ ಕ್ರಿಕೆಟ್​ನ ಅತ್ಯುತ್ತಮ ಕ್ಷೇತ್ರರಕ್ಷಕ!
@Rediffmail
  • News18
  • Last Updated: February 15, 2019, 9:43 AM IST
  • Share this:
ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೇಷ್ಠ ಫೀಲ್ಡರ್​ ಎಂದು ಖ್ಯಾತಿ ಪಡೆದಿರುವ ದಕ್ಷಿಣ ಆಫ್ರಿಕಾ ಜಾಂಟಿ ರೋಡ್ಸ್ ತಾನು ಕಂಡಂತಹ ವಿಶ್ವದ ಅತ್ಯುತ್ತಮ ಕ್ಷೇತ್ರ ರಕ್ಷಕರನ್ನು ಹೆಸರಿಸಿದ್ದಾರೆ. ಅತಿರಥ ಮಹಾರಥ ಫೀಲ್ಡರ್​​ಗಳನ್ನು ಒಳಗೊಂಡಿರುವ ಈ ಪಟ್ಟಿಯಲ್ಲಿ ಭಾರತದ ಆಟಗಾರನಿಗೆ ಜಾಂಟಿ ಮೊದಲ ಸ್ಥಾನ ನೀಡಿರುವುದು ವಿಶೇಷ.

30 ಯಾರ್ಡ್ ಸರ್ಕಲ್​ ಒಳಗೆ ಅತ್ಯುತ್ತಮವಾಗಿ ಕ್ಷೇತ್ರರಕ್ಷಣೆ ಮಾಡುವ 5 ಆಟಗಾರರನ್ನು ಜಾಂಟಿ ಗುರುತಿಸಿದ್ದು, ಇದರಲ್ಲಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಸೈಮಂಡ್ಸ್​ ಐದನೇ ಸ್ಥಾನ ಪಡೆದರೆ, ನಾಲ್ಕನೆಯವರಾಗಿ ದಕ್ಷಿಣ ಆಫ್ರಿಕಾ ಹರ್ಷಲ್ ಗಿಬ್ಸ್​ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಅತ್ಯುತ್ತಮ ರನೌಟ್ ಹಾಗೂ ಡೈವಿಂಗ್ ಫೀಲ್ಡಿಂಗ್ ಮೂಲಕ ಸೈಮಂಡ್ಸ್ ಹಾಗೂ ಗಿಬ್ಸ್​ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ರೋಡ್ಸ್​ ಅಭಿಪ್ರಾಯ ಪಟ್ಟಿದ್ದಾರೆ.


ಇನ್ನು ಇಂಗ್ಲೆಂಡ್​ ಮಾಜಿ ನಾಯಕ ಪೌಲ್ ಕಾಲಿಂಗ್​ವುಡ್​ ಈ ಪಟ್ಟಿಯಲ್ಲಿ 3ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸಿಲ್ಲಿ ಪಾಯಿಂಟ್​ ಹಾಗೂ ಸ್ಕೈರ್​ನಲ್ಲಿ ಚೆಂಡನ್ನು ದಾಟದಂತೆ ನೋಡುತ್ತಿದ್ದ ಕಾಲಿಂಗ್​ವುಡ್​ ಅವರ ಟೈಮಿಂಗ್​ ಅನ್ನು ರೋಡ್ಸ್​ ಮೆಚ್ಚಿಕೊಂಡಿದ್ದಾರೆ. ಹಾಗೆಯೇ ಮಿಸ್ಟರ್ 360 ಖ್ಯಾತಿ ಎ.ಬಿ.ಡಿವಿಲಿಯರ್ಸ್​ ಅಧ್ಬುತ ಕ್ಷೇತ್ರ ರಕ್ಷಣೆಯ ಮೂಲಕ ಅನೇಕ ಬಾರಿ ಕ್ರಿಕೆಟ್​ ಪ್ರೇಮಿಗಳನ್ನು ದಂಗಾಗಿಸಿದ್ದಾರೆ. ರೋಡ್ಸ್ ಎಬಿಡಿಯನ್ನು ವಿಶ್ವದ 2ನೇ ಅತ್ಯುತ್ತಮ ಫೀಲ್ಡರ್​ ಎಂದು ಕರೆದಿದ್ದಾರೆ.

ಭಾರತದಂತಹ ಒರಟು ಮೈದಾನದಲ್ಲಿ ಮಿಂಚಿನಂತೆ ಎಗರುವ ಸುರೇಶ್ ರೈನಾ ನಾನು ನೋಡಿದ ವಿಶ್ವದ ಅತ್ಯುತ್ತಮ ಫೀಲ್ಡರ್ ಎಂದಿರುವ ರೋಡ್ಸ್, ಈ ಆಟಗಾರರನ್ನು ಮೊದಲಿನಿಂದಲೂ ಗಮನಿಸುತ್ತಾ ಬಂದಿದ್ದೇನೆ. ತಂಡಕ್ಕಾಗಿ ಯಾವುದೇ ಕ್ಷಣದಲ್ಲೂ ಡೈವಿಂಗ್ ಮಾಡಲು ಹಿಂಜರಿಯದ ಆಟಗಾರ. ಯಾರೂ ಊಹಿಸದ ರೀತಿಯಲ್ಲಿ ಕ್ಷೇತ್ರರಕ್ಷಣೆ ಮಾಡುವುದೇ ಸುರೇಶ್ ರೈನಾ ಸ್ಪೆಷಾಲಿಟಿ. ಒಂದು ಪಂದ್ಯದ ದಿಕ್ಕನ್ನೇ ತಮ್ಮ ಕೈಚಳಕದಿಂದ ಬದಲಿಸಿದ್ದಾರೆ. ಇವರೇ ನಾ ನೋಡಿದ ವಿಶ್ವದ ನಂಬರ್ 1 ಫೀಲ್ಡರ್​ ಎಂದು ಸುರೇಶ್ ರೈನಾ ಅವರನ್ನು ಜಾಂಟಿ ರೋಡ್ಸ್ ಹಾಡಿ ಹೊಗಳಿದ್ದಾರೆ.


ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್​ 2019: ವೇಳಾಪಟ್ಟಿ ಪ್ರಕಟ: ಭಾರತ-ಪಾಕ್ ನಡುವೆ ನಡೆಯಲಿದೆ ಸೆಣಸಾಟ
First published: February 14, 2019, 10:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading