JIO TV | ಭಾರತದಲ್ಲಿ ಎನ್​ಬಿಎ ಗೇಮ್ಸ್ ಹೊಸ ಇತಿಹಾಸ; ಜಿಯೋ ಟಿವಿಯಲ್ಲಿ ಲೈವ್ ವೀಕ್ಷಿಸಿ

ಜಿಯೋ ಟಿವಿ ಆ್ಯಪ್​ನಲ್ಲಿ ಎನ್​ಬಿ ಗೇಮ್​ವೊಂದೇ ಅಲ್ಲ, ಹಲವು ಮಹತ್ವದ ಕ್ರೀಡೆಗಳ ಪಂದ್ಯಗಳು ಪ್ರಸಾರವಾಗುತ್ತವೆ. ಪ್ರಮುಖ ಕ್ರಿಕೆಟ್ ಟೂರ್ನಿಗಳು, ವಿಂಟರ್ ಒಲಿಂಪಿಕ್ಸ್, ಕರಬಾವೋ ಕಪ್ ಇತ್ಯಾದಿಯ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಸೌಲಭ್ಯವನ್ನು ಜಿಯೋ ಆ್ಯಪ್ ಒದಗಿಸಿದೆ.

news18-kannada
Updated:October 5, 2019, 2:15 PM IST
JIO TV | ಭಾರತದಲ್ಲಿ ಎನ್​ಬಿಎ ಗೇಮ್ಸ್ ಹೊಸ ಇತಿಹಾಸ; ಜಿಯೋ ಟಿವಿಯಲ್ಲಿ ಲೈವ್ ವೀಕ್ಷಿಸಿ
ಬ್ಯಾಸ್ಕೆಟ್​ಬಾಲ್
  • Share this:
ಬೆಂಗಳೂರು(ಅ. 05): ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಬ್ಯಾಸ್ಕೆಟ್ ಬಾಲ್ ಕೂಡ ಒಂದು. ಅಮೆರಿಕದ ಎನ್​ಬಿಎ ಬ್ಯಾಸ್ಕೆಟ್ ಬಾಲ್ ಟೂರ್ನಿ ವಿಶ್ವದ ಅತ್ಯಂತ ಪ್ರತಿಷ್ಠೆಯ ಹಾಗೂ ಪೈಪೋಟಿಯ ಟೂರ್ನಿಗಳಲ್ಲೊಂದೆನಿಸಿದೆ. ರಿಲಾಯನ್ಸ್ ಫೌಂಡೇಶನ್ ಸಂಸ್ಥೆಯು ಭಾರತದಲ್ಲಿ ಎನ್​ಬಿಎ ಪಂದ್ಯಗಳನ್ನ ಆಯೋಜಿಸುವಲ್ಲಿ ಯಶಸ್ವಿಯಾಗಿದೆ. ನಿನ್ನೆ ಮುಂಬೈನಲ್ಲಿ ಇಂಡಿಯಾನಾ ಪೇಸರ್ಸ್ ಮತ್ತು ಸ್ಯಾಕ್ರಮೆಂಟೋ ಕಿಂಗ್ಸ್ ನಡುವಿನ ಪಂದ್ಯ ಸಂಜೆ 7ರಿಂದ ನಡೆದಿತ್ತು. ಇದು ಭಾರತದಲ್ಲಿ ನಡೆದ ಚೊಚ್ಚಲ ಎನ್​ಬಿಎ ಪಂದ್ಯವಾಗಿದೆ.

ಇವತ್ತು ಎರಡನೇ ಪಂದ್ಯ ನಡೆಯುತ್ತಿದೆ. ವಿಶೇಷವೆಂದರೆ ಈ ಎನ್​ಬಿಎ ಪಂದ್ಯಗಳನ್ನು ಮೊಬೈಲ್​ನಲ್ಲಿ ವೀಕ್ಷಿಸುವ ಅವಕಾಶವಿದೆ. ಜಿಯೋ ಟಿವಿ ಆ್ಯಪ್​ನಲ್ಲಿ ಎನ್​ಬಿಎ ಪಂದ್ಯದ ನೇರ ವೀಕ್ಷಣೆ ಮಾಡಬಹುದಾಗಿದೆ. ಅ. 5ರಂದು ಸಂಜೆ 7 ಗಂಟೆಗೆ ಭಾರತದಲ್ಲಿ ಎರಡನೇ ಎನ್​ಬಿಎ ಬ್ಯಾಸ್ಕೆಟ್​ಬಾಲ್ ಪಂದ್ಯ ಪ್ರಾರಂಭವಾಗುತ್ತದೆ.

ಇದನ್ನೂ ಓದಿ: ಲಂಡನ್​ನಿಂದ ಅಭಿಮಾನಿಗಳಿಗೆ ಗುಡ್​ನ್ಯೂಸ್ ನೀಡಿದ ಹಾರ್ದಿಕ್ ಪಾಂಡ್ಯ

ಜಿಯೋ ಟಿವಿ ಆ್ಯಪ್​ನಲ್ಲಿ ಎನ್​ಬಿಎ ಗೇಮ್ಸ್​ವೊಂದೇ ಅಲ್ಲ, ಹಲವು ಮಹತ್ವದ ಕ್ರೀಡೆಗಳ ಪಂದ್ಯಗಳು ಪ್ರಸಾರವಾಗುತ್ತವೆ. ಪ್ರಮುಖ ಕ್ರಿಕೆಟ್ ಟೂರ್ನಿಗಳು, ವಿಂಟರ್ ಒಲಿಂಪಿಕ್ಸ್, ಕರಬಾವೋ ಕಪ್ ಇತ್ಯಾದಿಯ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಸೌಲಭ್ಯವನ್ನು ಜಿಯೋ ಆ್ಯಪ್ ಒದಗಿಸಿದೆ.

ಇನ್ನು, ರಿಲಾಯನ್ಸ್ ಸಂಸ್ಥೆಯು ಭಾರತದಲ್ಲಿ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಹಲವು ಯೋಜನೆಗಳನ್ನ ಹಮ್ಮಿಕೊಂಡಿದೆ. ಫುಟ್ಬಾಲ್ ಕ್ರೀಡೆಯ ವಾಣಿಜ್ಯಾತ್ಮಕ ಬೆಳವಣಿಗೆಯ ಜವಾಬ್ದಾರಿ ಹೊತ್ತಿರುವ ರಿಲಾಯನ್ಸ್ ಸಂಸ್ಥೆ ಬ್ಯಾಸ್ಕೆಟ್​ಬಾಲ್ ಕ್ರೀಡೆಯಲ್ಲೂ ತನ್ನ ಛಾಪು ಮೂಡಿಸಿದೆ. ಎನ್​ಬಿಎ ಜೊತೆ ಜಂಟಿಯಾಗಿ ಕೆಲಸ ಮಾಡುತ್ತಿರುವ ರಿಲಾಯನ್ಸ್ ಫೌಂಡೇಶನ್ ಭಾರತದಲ್ಲಿ ತಳಮಟ್ಟದಲ್ಲಿ ಜೂನಿಯರ್ ಎನ್​ಬಿಎ ಯೋಜನೆ ಹಮ್ಮಿಕೊಂಡಿದೆ. ರಿಲಾಯನ್ಸ್​ನ ಈ ಜೂನಿಯರ್ ಎನ್​ಬಿಎ ಪ್ರೋಗ್ರಾಮ್ ವಿಶ್ವದ ಅತ್ಯಂತ ಬೃಹತ್ ಜೂನಿಯರ್ ಎನ್​ಬಿಎ ಯೋಜನೆಯಾಗಿದೆ. 20 ರಾಜ್ಯಗಳ 34 ನಗರಗಳಲ್ಲಿ ನಡೆಯುವ ಜೂನಿಯರ್ ಎನ್​ಬಿಎ ಪ್ರೋಗ್ರಾಮ್​ನಲ್ಲಿ 1 ಕೋಟಿಗೂ ಅಧಿಕ ಮಕ್ಕಳು ತರಬೇತಿ ಪಡೆಯುತ್ತಿರುವ ಅಂದಾಜಿದೆ.

(ಮಾಹಿತಿ: ಜಿಯೋ ಪತ್ರಿಕಾ ಪ್ರಕಟಣೆ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: October 5, 2019, 2:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading