• Home
  • »
  • News
  • »
  • sports
  • »
  • FIFA World Cup 2022: ಫುಟ್ಬಾಲ್‌ ಹಬ್ಬದಲ್ಲಿ ದಾಖಲೆ ಬರೆದ ಜಿಯೋ ಸಿನಿಮಾ! ವೀಕ್ಷಕರ ಸಂಖ್ಯೆ 100 ಮಿಲಿಯನ್ ಮೀರುವ ನಿರೀಕ್ಷೆ!

FIFA World Cup 2022: ಫುಟ್ಬಾಲ್‌ ಹಬ್ಬದಲ್ಲಿ ದಾಖಲೆ ಬರೆದ ಜಿಯೋ ಸಿನಿಮಾ! ವೀಕ್ಷಕರ ಸಂಖ್ಯೆ 100 ಮಿಲಿಯನ್ ಮೀರುವ ನಿರೀಕ್ಷೆ!

ಜಿಯೋ ಸಿನಿಮಾ

ಜಿಯೋ ಸಿನಿಮಾ

ಫಿಫಾ ವರ್ಡ್‌ ಕಪ್ ಅಂದರೆ ವಿಶ್ವದಾದ್ಯಂತ ಅಭಿಮಾನಿಗಳು ಇರುತ್ತಾರೆ. ಆದರೆ ಭಾರತೀಯರಿಗೆ ಕಿಕ್ರೆಟ್‌ನಷ್ಟು ಫುಬ್ಟಾಲ್ ಕ್ರೀಡೆ ಕಿಕ್ ಕೊಡುವುದಿಲ್ಲ. ಆದರೆ ಈ ಬಾರಿಯ ಕತಾರ್‌ ಫುಟ್ಬಾಲ್ ವಿಶ್ವಕಪ್ ಎಲ್ಲಾ ಸಂಪ್ರದಾಯಗಳನ್ನು ಮುರಿದಿದೆ. ಲೈವ್ ಸ್ಟ್ರೀಮ್ ಮಾಡಿದ್ದ ಜಿಯೋ ಸಿನಿಮಾ ಹೊಸ ದಾಖಲೆ ಬರೆದಿದೆ!

ಮುಂದೆ ಓದಿ ...
  • Share this:

ಕತಾರ್​ನಲ್ಲಿ(Qatar) ನಡೆಯುತ್ತಿರುವ ಫಿಫಾ ವಿಶ್ವಕಪ್​​ಗೆ (FIFA World Cup 2022) ಕೆಲವೇ ಗಂಟೆಗಳಲ್ಲಿ ಅಧಿಕೃತವಾಗಿ ತೆರೆಬೀಳಲಿದೆ. ನವೆಂಬರ್​​ 20 ರಿಂದ ಆರಂಭವಾಗಿದ್ದ ಫುಟ್ಬಾಲ್ ಹಬ್ಬ, ಕಳೆದ ನಾಲ್ಕು ವಾರಗಳಿಂದ ಫುಟ್​​​ಬಾಲ್ ಪ್ರೇಮಿಗಳಿಗೆ (Football Lovers) ಹಬ್ಬದೂಟವನ್ನು ಉಣಬಡಿಸಿತ್ತು. ಇನ್ನು ಈ ಬಾರಿ ಫಿಫಾ ವಿಶ್ವಕಪ್​ ಅನ್ನು ಜಿಯೋ ಸಿನೆಮಾ ಉಚಿತವಾಗಿ ಲೈವ್​ ಸ್ಟ್ರೀಮಿಂಗ್ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದೆ. ದೇಶದಲ್ಲೇ ಗೂಗಲ್ ಪ್ಲೇ ಸ್ಟೋರ್ (Google Play Store)​ ಮತ್ತು ಆ್ಯಪಲ್ ಆ್ಯಪ್ ಸ್ಟೋರ್ (Apple App Store) ​ಮೂಲಕ ಅತೀ ಹೆಚ್ಚು ಡೌನ್​ಲೋಡ್​ ಮಾಡಿಕೊಂಡ ಸ್ಟ್ರೀಮಿಂಗ್ ಅಪ್ಲಿಕೇಶನ್ ಎಂಬ ಖ್ಯಾತಿ ಜಿಯೋ ಸಿನಿಮಾ ಪಡೆದುಕೊಂಡಿದೆ. ಈ ವರ್ಷದ ಫಿಫಾ ಫುಟ್​ಬಾಲ್​ ವಿಶ್ವಕಪ್​ ಕತಾರ್​ನಲ್ಲಿ ಆರಂಭವಾಯಿತು. ಇದನ್ನು ಜಿಯೋಸಿನೆಮಾದಲ್ಲಿ ವೀಕ್ಷಕರಿಗೆ ಹೈಪ್​ ಮೋಡ್​ನಲ್ಲಿ ಸ್ಟ್ರೀಮಿಂಗ್​ ಮಾಡಿ ಇದೀಗ ಅಗ್ರಸ್ಥಾನದಲ್ಲಿದೆ. ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಟಿವಿ ವೀಕ್ಷಕರಿಗಿಂತ ಡಿಜಿಟಲ್ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ.


ಫುಟ್ಬಾಲ್ ವಿಶ್ವಕಪ್‌ ವೀಕ್ಷಿಸಿದ ಹೆಚ್ಚಿನ ಭಾರತೀಯರು


ಫಿಫಾ ವರ್ಡ್‌ ಕಪ್ ಅಂದರೆ ವಿಶ್ವದಾದ್ಯಂತ ಅಭಿಮಾನಿಗಳು ಇರುತ್ತಾರೆ. ಆದರೆ ಭಾರತೀಯರಿಗೆ ಕಿಕ್ರೆಟ್‌ನಷ್ಟು ಫುಬ್ಟಾಲ್ ಕ್ರೀಡೆ ಕಿಕ್ ಕೊಡುವುದಿಲ್ಲ. ಆದರೆ ಈ ಬಾರಿಯ ಕತಾರ್‌ ಫುಟ್ಬಾಲ್ ವಿಶ್ವಕಪ್ ಎಲ್ಲಾ ಸಂಪ್ರದಾಯಗಳನ್ನು ಮುರಿದಿದೆ. ಕತಾರ್ 2022 ಫುಟ್ಬಾಲ್ ವಿಶ್ವಕಪ್ ಭಾರತದಲ್ಲಿ ಇದುವರೆಗೆ ಹೆಚ್ಚು ತೊಡಗಿಸಿಕೊಂಡಿರುವ ಮತ್ತು ವೀಕ್ಷಿಸಲ್ಪಟ್ಟ FIFA ವಿಶ್ವಕಪ್ ಆಗಿದೆ.


ಟಿವಿ ವೀಕ್ಷಕರನ್ನು ಹಿಂದಿಕ್ಕಿದ ಡಿಜಿಟಲ್ ವೀಕ್ಷಕರು


ಇನ್ನು  ಡಿಜಿಟಲ್ ವೀಕ್ಷಕರು ಮೊದಲ ಬಾರಿಗೆ ಟಿವಿಯನ್ನು ಹಿಂದಿಕ್ಕಿದ್ದಾರೆ.  FIFA ವಿಶ್ವ ಕಪ್ ಕತಾರ್ 2022 ರ ವ್ಯಾಪ್ತಿಯು JioCinema ನಲ್ಲಿ 100mn ದಾಟುವ ನಿರೀಕ್ಷೆಯಿದೆ. ಇದು ಭಾರತದ ಮಟ್ಟಿಗೆ ಹೊಸ ಸಾಧನೆ ಎಂದರೆ ತಪ್ಪಾಗೋದಿಲ್ಲ.


ಇದನ್ನೂ ಓದಿ: FIFA World Cup 2022: ದಾಖಲೆ ನಿರ್ಮಿಸಿದ ಜಿಯೋ ಸಿನೆಮಾ! ಡೌನ್​ಲೋಡ್​ ಆ್ಯಪ್‌ ಲೀಸ್ಟ್​ನಲ್ಲಿ ನಂ.1


ಹೆಚ್ಚು ಡೌನ್‌ಲೋಡ್ ಮಾಡಲಾದ ಆ್ಯಪ್ ಜಿಯೋ ಸಿನಿಮಾ


JioCinema ನವೆಂಬರ್ 20 ರಿಂದ iOS ಮತ್ತು Android ಎರಡರಲ್ಲೂ ಮೂರು ವಾರಗಳವರೆಗೆ ಡೌನ್‌ಲೋಡ್ ಮಾಡಲಾದ ನಂಬರ್ 1 ಉಚಿತ ಅಪ್ಲಿಕೇಶನ್ ಆಗಿದೆ ಅಂತ ಸರ್ವೆ ಹೇಳುತ್ತಿದೆ.  JioCinema ಹಿಂದೆಂದೂ ನೋಡಿರದ ಹೈಪ್ ಮೋಡ್‌ನೊಂದಿಗೆ ವೀಕ್ಷಕರ ನೇರ ಅನುಭವವನ್ನು ಹೆಚ್ಚಿಸಿದೆ.


ಸಮೀಕ್ಷೆಯ ವರದಿಯಲ್ಲಿ ಏನಿದೆ?


ಆ್ಯಪ್​​ಗಳ ಬಗ್ಗೆ ಎನಾಲಿಟಿಕ್ಸ್ ಮಾಡುವಂತಹ ತಂತ್ರಜ್ಞಾನವಾದ ಆ್ಯಪ್​ ಅನ್ನಿ ಪ್ರಕಾರ, ನವೆಂಬರ್​ 2022ರಲ್ಲಿ ಎಂಟರ್​ಟೈನ್​ಮೆಂಟ್​ ವಿಭಾಗದಲ್ಲಿ ಒಟ್ಟು ಅಪ್ಲಿಕೇಶನ್​ಗಳಲ್ಲಿ ಶೇಕಡಾ 29% ರಷ್ಟು ಜಿಯೋಸಿನೆಮಾವನ್ನೇ ಡೌನ್​ಲೋಡ್​ ಮಾಡಿದ್ದಾರೆ ಎಂದು ಹೇಳಿದೆ. ಇನ್ನು ಈ ವರ್ಷದಲ್ಲಿ ಅತೀ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಅಪ್ಲಿಕೇಶನ್ ಎಂದರೆ ಅದು ಜಿಯೋ ಸಿನೆಮಾ ಎಂದು ಹೇಳಿದೆ.


ವಿಶ್ವದ ಶ್ರೇಷ್ಠ ದರ್ಜೆಯ ಆಟಗಾರರಿಂದ ಕ್ರೀಡಾವರದಿ


ಇನ್ನು ವೇಯ್ನ್ ರೂನಿ, ಲೂಯಿಸ್ ಫಿಗೋ, ರಾಬರ್ಟ್ ಪೈರ್ಸ್, ಗಿಲ್ಬರ್ಟೊ ಸಿಲ್ವಾ ಮತ್ತು ಸೋಲ್ ಕ್ಯಾಂಪ್‌ಬೆಲ್ ಸೇರಿದಂತೆ ವಿಶ್ವ ಕಪ್ ಹೀರೋಗಳ ಆಲ್ ಸ್ಟಾರ್ ರೋಸ್ಟರ್‌ನಿಂದ ಅಲಂಕರಿಸಲ್ಪಟ್ಟ ವಿಶ್ವ ದರ್ಜೆಯ ಸ್ಟುಡಿಯೋ ಜಿಯೋ ಸಿನಿಮಾ ಆಗಿತ್ತು. ಜಿಯೋ ಸಿನಿಮಾ Snap Inc ಜೊತೆಗಿನ ಪಾಲುದಾರಿಕೆ ಬಳಕೆದಾರರಿಗೆ ಹಿಂದೆಂದೂ ನೋಡಿರದ ಧ್ವನಿ-ಸಕ್ರಿಯ AR ಲೆನ್ಸ್ ಅನ್ನು ನೀಡುತ್ತಿದೆ.


ಮಹೀಂದ್ರಾದೊಂದಿಗೆ ಹೊಸ ಸರಣಿ


ಜಿಯೋ ಸಿನಿಮಾವು ಮಹೀಂದ್ರಾದೊಂದಿಗಿನ ಸಹಯೋಗದಿಂದ ಉತ್ಕೃಷ್ಟ ಕಾರ್ಯಕ್ರಮ ಕೊಟ್ಟಿದೆ. ಭಾರತದಲ್ಲಿ ಫುಟ್‌ಬಾಲ್‌ನ ಹೆರಾಲ್ಡ್ ಹೀರೋಗಳನ್ನು ಆಚರಿಸುವ ಮಹೀಂದ್ರಾದೊಂದಿಗೆ ವಿಷಯ ಸರಣಿಯನ್ನು ನಿರ್ಮಿಸಿದೆ.


ಇದನ್ನೂ ಓದಿ: FIFA World Cup Qatar 2022: ಫುಟ್‌ಬಾಲ್‌ ಹೀರೋಗಳನ್ನು ಜನರಿಗೆ ಪರಿಚಯಿಸಿದ್ದು ಇವ್ರೇ, ಸ್ಪೋರ್ಟ್ಸ್ 18 ಜೊತೆ ಮಹೀಂದ್ರಾ ಗೆಳೆತನ


50ಕ್ಕೂ ಹೆಚ್ಚು ಬ್ರ್ಯಾಂಡ್‌ಗಳ ಪ್ರಸ್ತುತಿ


ಇನ್ನು ಇ-ಕಾಮರ್ಸ್, ಬ್ಯಾಂಕಿಂಗ್, ಹಣಕಾಸು ಸೇವೆಗಳು, ಆಟೋ, ಫ್ಯಾಷನ್, ಹಾಸ್ಪಿಟಾಲಿಟಿ ಮತ್ತು ಫಿನ್‌ಟೆಕ್‌ನಾದ್ಯಂತ 50 ಕ್ಕೂ ಹೆಚ್ಚು ಬ್ರ್ಯಾಂಡ್‌ಗಳು FIFA ವಿಶ್ವಕಪ್‌ನ Viacom18 ಸ್ಪೋರ್ಟ್ಸ್ ಪ್ರಸ್ತುತಿಗೆ ಸೇರಿಕೊಂಡಿವೆ. ಇಂದಿನ ಪಂದ್ಯದ ನಂತರ ಜಿಯೋ ಸಿನಿಮಾ ಮತ್ತು ಸ್ಪೋರ್ಟ್ಸ್ 18 ನಲ್ಲಿ ಅದ್ಭುತವಾದ ಫಿಫಾ ವಿಶ್ವಕಪ್‌ನ ಕವರೇಜ್‌ ನೀಡುತ್ತಿದೆ.

Published by:Annappa Achari
First published: