ಏಷ್ಯನ್ ಗೇಮ್ಸ್​ 2018: 1500 ಮೀ. ಹಾಗೂ 4*400 ಮೀ. ಓಟದಲ್ಲಿ ಭಾರತಕ್ಕೆ ಚಿನ್ನ; ಹಾಕಿಯಲ್ಲಿ ಸೋಲು

news18
Updated:August 30, 2018, 7:40 PM IST
ಏಷ್ಯನ್ ಗೇಮ್ಸ್​ 2018: 1500 ಮೀ. ಹಾಗೂ 4*400 ಮೀ. ಓಟದಲ್ಲಿ ಭಾರತಕ್ಕೆ ಚಿನ್ನ; ಹಾಕಿಯಲ್ಲಿ ಸೋಲು
news18
Updated: August 30, 2018, 7:40 PM IST
ನ್ಯೂಸ್ 18 ಕನ್ನಡ

ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​​ನ 1500 ಮೀ. ಓಟದ ಪುರುಷರ ಫೈನಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ ದಕ್ಕಿದೆ. ಜಿನ್ಸನ್ ಜಾನ್ಸನ್ ಅವರು 3:44:72 ಸೆಕೆಂಡ್​​ಗಳಲ್ಲಿ ಗುರಿ ಮುಟ್ಟಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದಕ್ಕೂ ಮುನ್ನ ಜಿನ್ಸನ್ ಅವರು 800 ಮೀ. ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು. ಅಂತೆಯೆ 4*400 ಮೀ ಓಟದ ಮಹಿಳೆಯರ ರಿಲೇಯಲ್ಲಿ ಭಾರತ ಮತ್ತೊಂದು ಚಿನ್ನ ತನ್ನದಾಗಿಸಿದೆ. ಹಿಮಾ ದಾಸ್, ಪೂವಮ್ಮ, ಗಾಯಕ್​ವಾಡ್ ಹಾಗೂ ವಿಸ್ಮಯ ಅವರು 3:28:72 ಸೆಕೆಂಡ್​​ಗಳಲ್ಲಿ ಮೊದಲ ಸ್ಥಾನ ತಲುಪಿದರು. ಸದ್ಯ ಭಾರತ ಗೆದ್ದ ಚಿನ್ನದ ಪದಕ 13 ಆಗಿದ್ದು, ಹಿಮಾ ದಾಸ್ ಅವರು 2 ಬೆಳ್ಳಿ ಹಾಗೂ 1 ಚಿನ್ನ ತಮ್ಮದಾಗಿಸಿದ್ದಾರೆ.

ಪುರುಷರ 4*400 ಮೀಟರ್​ ರಿಲೇಯಲ್ಲಿ ಭಾರತಕ್ಕೆ ಬೆಳ್ಳಿ ಪದಕ ಸಿಕ್ಕಿದೆ. ಏಷ್ಯನ್​ ಗೇಮ್ಸ್​ನಲ್ಲಿ 21ನೇ ಬೆಳ್ಳಿ ಪದಕ ಭಾರತ ಗೆದ್ದಿದೆ. ಮಹಿಳೆಯರ 1500 ಮೀ. ಓಟದ ಸ್ಪರ್ಧೆಯಲ್ಲಿ ಪಿ ಚೈತ್ರಾ ಅವರು ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ. 4:12:56 ಸೆಕೆಂಡ್​​ಗಳಲ್ಲಿ ಗುರಿ ಮುಟ್ಟಿ 3ನೇ ಸ್ಥಾನ ತಲುಪಿದರು. ಅಂತೆಯೆ ಮಹಿಳೆಯರ ಡಿಸ್ಕಸ್ ಥ್ರೋ ವಿಭಾಗದಲ್ಲಿ ಸೀಮಾ ಪೊನಿಯಾ ಅವರು ಕಂಚಿನ ಪದಕ ಗೆದ್ದಿದ್ದಾರೆ. ಸೀಮಾ ಅವರು 62.26 ಮೀ. ದೂರಕ್ಕೆ ಡಿಸ್ಕಸ್ ಎಸೆಯುವ ಮೂಲಕ ಸಾಧನೆ ಮಾಡಿದ್ದಾರೆ.

ಇನ್ನು ಭಾರತದ ಪುರುಷರ ಹಾಕಿ ತಂಡ ಸೆಮಿಫೈನಲ್ ಪಂದ್ಯದಲ್ಲಿ ಮಲೇಷ್ಯಾ ವಿರುದ್ದ ಸೋಲುಂಡಿದೆ. ಪಂದ್ಯ 2-2 ಅಂತರದ ಗೋಲುಗಳಿಂದ ಡ್ರಾದಲ್ಲಿ ಅಂತ್ಯಕಂಡ ಕಾರಣ ಪೆನಾಲ್ಟಿ ಶೂಟೌಟ್ ಮೊರೆಹೋಗಲಾಯಿತು. ಶೂಟೌಟ್​​ನಲ್ಲಿ ಭಾರತ 7-6 ಅಂತರದಲ್ಲಿ ಸೋಲು ಕಂಡಿದೆ.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ