CWG 2022: ಭಾರತಕ್ಕೆ 2ನೇ ಚಿನ್ನದ ಪದಕ, ವೇಟ್‌ಲಿಫ್ಟಿಂಗ್​ನಲ್ಲಿ ಜೆರೆಮಿ ಲಾಲ್ರಿನ್ನುಂಗಾ ಸಾಧನೆ

ಕಳೆದ ದಿನ ಬರೋಬ್ಬರಿ 4 ಪದಕಗಳನ್ನು ಗೆದ್ದ ಟೀಂ ಇಂಡಿಯಾ ಇಂದು ದಿನ ಆರಂಭದಲ್ಲಿಯೇ ಚಿನ್ನದ ಭೇಟೆ ಆರಂಭಿಸಿದೆ. ಹೌದು, ಜೆರೆಮಿ ಲಾಲ್ರಿನ್ನುಂಗಾ (Jeremy Lalrinnunga)  ಇಂದು ಭಾರತಕ್ಕೆ 2ನೇ ಚಿನ್ನವನ್ನು ತಂದುಕೊಟ್ಟಿದ್ದಾರೆ.

ಜೆರೆಮಿ ಲಾಲ್ರಿನ್ನುಂಗಾ

ಜೆರೆಮಿ ಲಾಲ್ರಿನ್ನುಂಗಾ

  • Share this:
ಕಾಮನ್‌ವೆಲ್ತ್ ಕ್ರೀಡಾಕೂಟ 2022 ರಲ್ಲಿ (Commonwealth Games 2022) ಭಾರತದ (India) ಆಟಗಾರರು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ದಿನ ಬರೋಬ್ಬರಿ 4 ಪದಕಗಳನ್ನು ಗೆದ್ದ ಟೀಂ ಇಂಡಿಯಾ ಇಂದು ದಿನ ಆರಂಭದಲ್ಲಿಯೇ ಚಿನ್ನದ ಭೇಟೆ ಆರಂಭಿಸಿದೆ. ಹೌದು, ಜೆರೆಮಿ ಲಾಲ್ರಿನ್ನುಂಗಾ (Jeremy Lalrinnunga) ಇಂದು ಭಾರತಕ್ಕೆ 2ನೇ ಚಿನ್ನವನ್ನು ತಂದುಕೊಟ್ಟಿದ್ದಾರೆ. ಮೀರಾಬಾಯಿ ಚಾನು ನಂತರ, ಜೆರೆಮಿ ಲಾಲ್ರಿನ್ನುಂಗಾ ವೇಟ್‌ಲಿಫ್ಟಿಂಗ್‌ನಲ್ಲಿ 300 ಕೆ.ಜಿ. ತೂಕ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇದಕ್ಕೂ ಮೊದಲು  ಮೀರಾಬಾಯಿ ಚಾನು (Mirabai Chanu) ದೇಶಕ್ಕೆ ಮೊದಲ ಚಿನ್ನವನ್ನು ತಂದುಕೊಟ್ಟಿದ್ದರು.  ಈ ಮೂಲಕ ಈ ಮೂಲಕ ಭಾರತ 2 ಚಿನ್ನ 2 ಬೆಳ್ಳಿ ಮತ್ತು 1 ಕಂಚಿನ ಪದಕ ಗೆದ್ದಂತಾಗಿದೆ.

ಚಿನ್ನ ಗೆದ್ದ ಜೆರೆಮಿ ಲಾಲ್ರಿನ್ನುಂಗಾ:

ಹೌದು, ಈ ಬಾರಿ ಕಾಮನ್​ವೆಲ್ತ್ ನಲ್ಲಿ ಭಾರತವು ಭರ್ಜರಿ ಪ್ರದರ್ಶನ ನಿಡುತ್ತಿದೆ. ಅದರಲ್ಲಿಯೂ ವೇಟ್‌ಲಿಫ್ಟಿಂಗ್​ನಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಪ್ರದರ್ಶನ ತೋರುತ್ತಿದೆ ಎಂದರೂ ತಪ್ಪಾಗಲಾರದು. ಅದರ ಮುಂದುವರೆದ ಭಾಗವಾಗಿ ಕಾಮನ್​ವೆಲ್ತ್ ನ 3ನೇ ದಿನವಾದ ಇಂದು ಆರಂಭದಲ್ಲಿಯೇ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಬಂದಿದೆ. ಜೆರೆಮಿ ಲಾಲ್ರಿನ್ನುಂಗಾ ವೇಟ್‌ಲಿಫ್ಟಿಂಗ್‌ನಲ್ಲಿ 300 ಕೆ.ಜಿ. ತೂಕ ಎತ್ತುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. ಇವರು ಸ್ನ್ಯಾಚ್‌ನಲ್ಲಿ 140 ಕೆಜಿ ಹಾಗೂ ಜರ್ಕ್ ನಲ್ಲಿ 160 ಕೆಜಿ ತೂಕವನ್ನು ಎತ್ತಿದರು. ಕೊನೆಯ ಸುತ್ತಿನಲ್ಲಿ ಬರೋಬ್ಬರಿ 300 ಕೆಜಿ ತೂಕ ಎತ್ತುವ ಮೂಲಕ ಚಿನ್ನದ ಪದಕವನ್ನು ಗೆದ್ದು ಬೀಗಿದರು.

ಭಾರತಕ್ಕೆ 2ನೇ ಚಿನ್ನದ ಪದಕ:

ಇನ್ನು, ಭಾರತಕ್ಕೆ 2ನೇ ಚಿನ್ನದ ಪದಕ ಬಂದಂತಾಗಿದೆ. ಈಗಾಗಲೇ ಮೀರಾಬಾಯಿ ಚಾನು 49 ಕೆಜಿ ತೂಕ ವಿಭಾಗದಲ್ಲಿ ಒಟ್ಟು 201 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಇದೀಗ ಕಾಮನ್​ವೆಲ್ತ್​ನ 3ನೇ ದಿನದ ಆರಂಭದಲ್ಲಿಯೇ ಭಾರತಕ್ಕೆ 2ನೇ ಚಿನ್ನ ಬಂದಿದೆ. ಜೆರೆಮಿ ಲಾಲ್ರಿನ್ನುಂಗಾ ವೇಟ್‌ಲಿಫ್ಟಿಂಗ್‌ನಲ್ಲಿ 300 ಕೆ.ಜಿ. ತೂಕ ಎತ್ತುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ.

ಜೆರೆಮಿ ಲಾಲ್ರಿನ್ನುಂಗಾ


ಜೆರೆಮಿ ಲಾಲ್ರಿನ್ನುಂಗಾ 300 ಕೆಜಿ ಭಾರ ಎತ್ತಿ ಚಿನ್ನದ ಪದಕ ಗೆದ್ದರೆ, ಸಮೋವಾದ ನೆವೊ 293 ಕೆಜಿ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದಾರೆ. ಇನ್ನು, ಭಾರತಕ್ಕೆ ಈವರೆಗೆ ಬಂದಿರುವ ಎಲ್ಲಾ ಪದಕಗಳೂ ಸಹ ವೇಟ್‌ಲಿಫ್ಟಿಂಗ್‌ನಲ್ಲಿ ಮಾತ್ರ ಬಂದಿರುವುದಾಗಿದ್ದು ವಿಶೇಷವಾಗಿದೆ.

ಇದನ್ನೂ ಓದಿ: CWG 2022: ಭಾರತಕ್ಕೆ ಮತ್ತೊಂದು ಬೆಳ್ಳಿ, ಒಂದೇ ದಿನ 4 ಪದಕಕ್ಕೆ ಮುತ್ತಿಕ್ಕಿದ ಭಾರತೀಯರು

ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಬಿಂದ್ಯಾರಾಣಿ:

ಹೌದು, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 2022ರ 2ನೇ ದಿನದ ಅಂತ್ಯದ ವೇಳೆಗೆ ಭಾರತ ತಂಡ ಒಟ್ಟು 4 ಪದಕಗಳನ್ನು ಗೆಲ್ಲುವ ಮೂಲಕ ಭರ್ಜರಿ ಪ್ರದರ್ಶನ ನೀಡುತ್ತಿದೆ. ದಿನದ ಅಂತ್ಯದಲ್ಲಿ 55 ಕೆಜಿ ವಿಭಾಗದ ವೇಟ್​ ಲಿಫ್ಟಿಂಗ್​ನಲ್ಲಿ ಬಿಂದ್ಯಾರಾಣಿ ದೇವಿ ಬೆಳ್ಳಿ ಪದಕವನ್ನು ಗೆದ್ದರು. ಅಂತಿಮ ಲಿಫ್ಟ್​ನಲ್ಲಿ 116 ಕೆಜಿ ತೂಕ ಎತ್ತುವ ಮೂಲಕ ಬಿಂದ್ಯಾರಾಣಿ ದೇವಿ ಭಾರತಕ್ಕೆ ಮತ್ತೊಂದು ಪದಕವನ್ನು ಗೆದ್ದರು. ನೈಜೀರಿಯಾದ ಆದಿಜತ್ ಅಡೆನಿಕೆ ಒಲರಿನೊಯೆಗೆ ಚಿನ್ನದ ಪದಕ ಮತ್ತು ಫ್ರೇರ್ ಮೊರೊ ಕಂಚಿನ ಪದಕವನ್ನು ಗೆದ್ದರು.
Published by:shrikrishna bhat
First published: