ಏಷ್ಯನ್ ಗೇಮ್ಸ್​​ನಲ್ಲಿ ತ್ರಿವರ್ಣ ಧ್ವಜ ಹಿಡಿಯಲಿರುವ ನೀರಜ್ ಚೋಪ್ರಾ

news18
Updated:August 15, 2018, 3:51 PM IST
ಏಷ್ಯನ್ ಗೇಮ್ಸ್​​ನಲ್ಲಿ ತ್ರಿವರ್ಣ ಧ್ವಜ ಹಿಡಿಯಲಿರುವ ನೀರಜ್ ಚೋಪ್ರಾ
news18
Updated: August 15, 2018, 3:51 PM IST
ನ್ಯೂಸ್ 18 ಕನ್ನಡ

ಇದೇ ಆಗಸ್ಟ್ 18ರಿಂದ ಆರಂಭವಾಗುವ ಏಷ್ಯನ್ ಗೇಮ್ಸ್​ನಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜ ಹಿಡಿದು ಕ್ರೀಡಾತಂಡವನ್ನು ಮುನ್ನಡೆಸುವ ಗೌರವವನ್ನು ಭಾರತದ ಜಾವಲಿನ್ ಎಸೆತಗಾರ ನೀರಜ್ ಚೋಪ್ರಾ ನಿರ್ವಹಿಸಲಿದ್ದಾರೆ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷ ನರೀಂದರ್ ಬಾತ್ರಾ ಹೇಳಿದ್ದಾರೆ.

ಈ ಹಿಂದೆ ಫ್ರಾನ್ಸ್​ನಲ್ಲಿ ನಡೆದ ಸೊಟೆವಿಲೆ ಅಥ್ಲೆಟೆಕ್ಸ್​​​ನಲ್ಲಿ ನೀರಜ್ ಅವರು ಚಿನ್ನದ ಪದಕ ಗೆದ್ದಿದ್ದರು. ಏಷ್ಯನ್ ಗೇಮ್ಸ್​ನಲ್ಲಿ ಧ್ವಜ ಹಿಡಿದು ಕ್ರೀಡಾಂಗಣವನ್ನು ಮುನ್ನಡೆಸುವುದು ನನಗೆ ತುಂಬಾ ಹೆಮ್ಮೆ ತಂದುಕೊಡುವ ವಿಚಾರ. ನಾನು ಐಓಎಗೆ ಕೃತಜ್ಷತೆ ಸಲ್ಲಿಸುತ್ತೇನೆ. ಈ ವಿಚಾರ ನನಗೆ ತುಂಬಾ ಖುಷಿ ಕೊಟ್ಟಿದೆ ಎಂದು ಚೋಪ್ರಾ ಹೇಳೀದ್ದಾರೆ.

ಈ ಬಾರಿ ಭಾರತವನ್ನು ಪ್ರತಿನಿಧಿಸಲು 804 ಸದಸ್ಯರ ಕ್ರೀಡಾ ನಿಯೋಗಕ್ಕೆ ಈಗಾಗಲೇ ಕ್ರೀಡಾ ಸಚಿವಾಲಯ ಹಸಿರು ನಿಶಾನೆ ತೋರಿದೆ. 572 ಅಥ್ಲೆಟಿಕ್ಸ್​ನೊಂದಿಗೆ 183 ಮಂದಿ ಅಧಿಕಾರಿಗಳು, 119 ಕೋಚ್​ಗಳು, 21 ವೈದ್ಯರು ಹಾಗೂ ಫಿಜಯೋಗಳಿದ್ದಾರೆ. ಒಟ್ಟು 36 ಕ್ರೀಡೆಗಳಲ್ಲಿ 572 ಕ್ರೀಡಾಪಟುಗಳು ಭಾಗವಹಿಸಲಿದ್ದು, 312 ಪುರುಷರು, ಹಾಗೂ 260 ಮಹಿಳಾ ಕ್ರೀಡಾಪಟುಗಳು ಕಣಕ್ಕಿಳಿಯಲಿದ್ದಾರೆ. ಏಷ್ಯನ್ ಗೇಮ್ಸ್ ಆಗಸ್ಟ್ 18ರಿಂದ ಆರಂಭವಾಗಿ ಸೆಪ್ಟೆಂಬರ್ 2ರ ವರೆಗೆ ನಡೆಯಲಿದೆ.
First published:August 15, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ